Anniversary of Bharat Jodo Yatra Congress will make continuous efforts to unite India: Hitna
ಕೊಪ್ಪಳ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು ೩೭೦೦ ಕಿಲೋ ಮೀಟರ್ ಭಾರತದ ಇತಿಹಾಸದಲ್ಲಿಯೇ ದೊಡ್ಡ ಪಾದಯಾತ್ರೆಯನ್ನು ಮಾಡಿದಂತ ರಾಹುಲ್ ಗಾಂಧಿ, ಭಾರತವನ್ನು ಒಗ್ಗೂಡಿಸುವಂತಹ ಕಾರ್ಯವನ್ನು ಕೈಗೊಂಡು ಯಶಸ್ವಿಯಾಗಿದ್ದಾರೆ, ಇದನ್ನು ಪಕ್ಷ ನಿರಂತರವಾಗಿ ಮಾಡಲಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರಾಜಶೇಖರ್ ಹಿಟ್ನಾಳ್ ಹೇಳಿದರು.
ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಳೆದ ವರ್ಷ ನಡೆದಿದ್ದ ಭಾರತ್ ಜೋಡೊ ಯಾತ್ರೆಯ ಮೊದಲ ವರ್ಷದ ಸವಿ ನೆನಪಿಗಾಗಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ‘ಐಕ್ಯತಾ ಪಾದಯಾತ್ರೆ’ಯನ್ನುದ್ದೇಶಿಸಿ ಮಾತನಾಡಿದರು.
ನಗರದ ಗಡಿಯಾರ ಕಂಬದಿAದ ಜವಾಹರ್ ರಸ್ತೆ ಮಾರ್ಗವಾಗಿ ಅಶೋಕ ವೃತ್ತದ ವರೆಗೆ ಘೋಷಣೆಗಳನ್ನು ಕೂಗುತ್ತಾ ಕಾರ್ಯಕರ್ತರು ಸಂಭ್ರಮಿಸಿದರು, ಅಶೋಕ ವೃತ್ತದಲ್ಲಿ ಮಾತನಾಡಿ, ಈ ಯಶಸ್ಸಿನಿಂದ ಕರ್ನಾಟಕದಲ್ಲಿ ಸರ್ಕಾರವನ್ನು ರಚಿಸಲು ಸಹಾಯಕವಾಯಿತು, ಬಿಜೆಪಿಯು ದೇಶವನ್ನು ಒಡೆದಾಳುವ ನೀತಿಯಿಂದ ಆಡಳಿತ ಮಾಡಲು ಮುಂದಾಗಿದ್ದರು, ಆದರೆ ರಾಹುಲ್ ಗಾಂಧಿ ಭಾರತವನ್ನು ಕೂಡಿಸುವ ಕೆಲಸವನ್ನು ಮಾಡಿದ್ದಾರೆ ಇದರಿಂದ ರಾಹುಲ್ ಗಾಂಧಿ ವರ್ಚಸ್ ಜಾಸ್ತಿಯಾಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಸ್.ಬಿ. ನಾಗರಹಳ್ಳಿ, ಶಾಂತಣ್ಣ ಮುದಗಲ್, ಕೃಷ್ಣಾ ಇಟ್ಟಂಗಿ, ಕೃಷ್ಣಾ ಗಲಿಬಿ, ಜಾಕಿರ್ ಹುಸೇನ್ ಕಿಲ್ಲೆದಾರ್, ಗೂಳಪ್ಪ ಹಲಗೇರಿ, ಪ್ರಸನ್ನ ಗಡಾದ್, ಭರಮಪ್ಪ ನಗರ, ಕಾಟನ್ ಪಾಶಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಾಲತಿ ನಾಯಕ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜ್ಯೋತಿ ಎಂ. ಗೊಂಡಬಾಳ, ಸಾವಿತ್ರಿ ಮುಜುಮದಾರ್, ರವಿ ಕುರಗೋಡ, ಮಂಜುನಾಥ ಜಿ. ಗೊಂಡಬಾಳ, ಗಾಳೆಪ್ಪ ಪೂಜಾರ್, ಗವಿಸಿದ್ದನಗೌಡ ಪಾಟೀಲ್, ಸಲೀಂ ಅಳವಂಡಿ, ಬಸಯ್ಯ ಹಿರೇಮಠ, ಅಕ್ಬರ್ ಪಾಶಾ, ಅಜೀಮ್ ಅತ್ತಾರ್, ವಿರುಪಾಕ್ಷಪ್ಪ ಮೋರನಾಳ, ಶಾಮೀದ ಮನಿಯಾರ್, ತೋಟಪ್ಪ ಕಾಮನೂರ, ಬಾಲಂದ್ರನ್ ಮುನಿರಾಬಾದ್, ರೇಶ್ಮಾ ಖಾಜಾವಲಿ, ಸವಿತಾ ಗೋರಂಟ್ಲಿ, ಮಾನವಿ ಪಾಶಾ, ಶಿವರಡ್ಡಿ ಭೂಮಕ್ಕನವರ, ವಿರುಪಾಕ್ಷಪ್ಪ ನವೋದಯ, ಸೌಭಾಗ್ಯ ಲಕ್ಷಿ÷್ಮ ಗೊರವರ್, ಸುಮಂಗಲಾ ನಾಯಕ್, ನಿಂಗರಾಜ ಕಾಳೆ, ಮಲ್ಲು ಪೂಜಾರ, ಗಂಗಮ್ಮ, ಮಂಜುಳಾ, ಶ್ರೀನಿವಾಸ ಪಂಡಿತ್, ಮೈನುದ್ದಿನ್ ಮುಲ್ಲಾ, ಅಂಬಿಕಾ ನಾಗರಾಳ, ರಿಯಾಜ್ ಮಂಗಳಾಪೂರ, ಅಶೋಕ ಗೋರಂಟ್ಲಿ, ಶಿಲ್ಪಾ ಭಾಗ್ಯನಗರ ಇತರರು ಇದ್ದರು.