Breaking News

ಶಿವ ಶರಣ ನುಲಿಯ ಚಂದಯ್ಯ ಸಮಾಜಕ್ಕೆ ಸ್ಫೂರ್ತಿ ಹಾಗೂ ಮಾದರಿಯಾಗಿದ್ದರು :ಶಾಸಕ ಎಂ ಆರ್ ಮಂಜುನಾಥ್.

Shiv Sharan Nuli’s Chandaiya was an inspiration and role model for the society: Ruler MR Manjunath.

ಜಾಹೀರಾತು


ವರದಿ : ಬಂಗಾರಪ್ಪ ಸಿ
ಹನೂರು:ನಮ್ಮ ನಾಡಿನಲ್ಲಿ ಹಲವಾರು ಆದರ್ಶವ್ಯಕ್ತಿಗಳು ಹುಟ್ಟಿದ್ದಾರೆ ಅವರಲ್ಲಿ ಕಾಯಕ ತತ್ವದಲ್ಲಿ ನಂಬಿಕೆ ಇಟ್ಟು ಆದರ್ಶ ಬದುಕು ಬದುಕಿದ ಬಸವಾದಿ ಶರಣರ ಅನುಭವ ಮಂಟಪದಲ್ಲಿ ಪ್ರಮುಖ ಸ್ಥಾನ ಹೊಂದಿದ ನುಲಿಯ ಚಂದಯ್ಯ ನವರು ಸಹ ಒಬ್ಬರಾಗಿದ್ದರು. ಅವರ ಬದುಕು ನಮ್ಮೆಲ್ಲರಿಗೂ ಆದರ್ಶನೀಯವಾಗಿದೆ ಎಂದು ಹನೂರು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಹನೂರು ಪಟ್ಟಣದ ಸರ್ಕಾರಿ ಶಾಲೆಯಲ್ಲಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಾಮರಾಜನಗರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿವಶರಣ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬದುಕು ಮತ್ತು ಭೂಮಿಯ ಬಗ್ಗೆ ಬಹಳ ತುಂಬಾ ಕಾಳಜಿ ಉಳ್ಳ ವ್ಯಕ್ತಿ ನುಲಿಯ ಚಂದಯ್ಯ ಆಗಿನ ಅನುಭವ ಮಂಟಪದ ಸಂಸತಿನಲ್ಲಿ ಮಂತ್ರಿಯಾಗಿದ್ದ ಮಹಾನ್ ವ್ಯಕ್ತಿಯಾಗಿದ್ದರು. 12 ನೇ ಶತಮಾನದ ಆಡಳಿತ ನಮಗೆಲ್ಲ ಸ್ಫೂರ್ತಿ ಆಗಬೇಕು ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಬರೆಯಲಿಲ್ಲ ಅಂದಿದ್ರೆ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕುತ್ತಿರಲಿಲ್ಲ. ಆದ್ದರಿಂದ ಈ ಮಹಾನ್ ಪುರುಷರು ನಮಗೆ ಸ್ಫೂರ್ತಿಯಾಗಿದ್ದಾರೆ. ಹನೂರು ಕ್ಷೆತ್ರದಲ್ಲಿ ಶೈಕ್ಷಣಿಕವಾಗಿ ಹಾಗು ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯದ ಜನರನ್ನು ಮೆಲ್ಲೆತ್ತಲು ನಾನು ಅವಿರತ ಶ್ರಮಿಸಲು ಸಿದ್ಧನಾಗಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಸಹಕಾರ ತುಂಬಾ ಮುಖ್ಯವಾಗಿದೆ. ಈ ವೇದಿಕೆಯಲ್ಲಿ ನೀವು ನೀಡಿದ ಬೇಡಿಕೆಯನ್ನು ಸಾಧ್ಯವಾದಷ್ಟು ಇಡೆರಿಸುತ್ತೇನೆ ಎಂದು ಭರವಸೆ ನೀಡಿದರು. ಹಾಗೂ ಕ್ಷೆತ್ರದ ಅಭಿವೃದ್ಧಿಯನ್ನು ನಾನು ಸವಲಾಗಿ ಸ್ವೀಕರಿಸುತ್ತಿದ್ದೇನೆ. ನಿಮ್ಮೆಲ್ಲರ ಜೊತೆ ಕಷ್ಟ ಸುಖಗಳಿಗೆ ಸದಾ ಬಾಗಿಯಾಗಿ ಕೆಲಸ ಮಾಡುತ್ತೇನೆ ಎಂದರು.
ಕಾರ್ಯಕ್ರಮಕ್ಕೆ
ಕಿರಣ್ ಕುಮಾರ್ ಕೊಟ್ಟಿಗೆರೆ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಶಿವಶರಣ ನುಲಿಯ ಚಂದಯ್ಯ ಜೀವನ ಮತ್ತು ಕಾಯಕ ತತ್ವದ ಬಗ್ಗೆ ವಿವರವಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ಆನಂದ್ ಮಹೇಶ್ ನಾಯ್ಕ, ಸಂಪತ್ ಕುಮಾರ್, ಮಮ್ತಾಜ್ ಬೇಗಂ, ದೇವನಹಳ್ಳಿ ಕ್ಷೇತ್ರದ ಮಾಜಿ ಶಾಸಕರಾದ ಚಂದ್ರಣ್ಣ, ಹನೂರು ತಹಸಿಲ್ದಾರ್ ಗುರುಪ್ರಸಾದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ, ಕರ್ನಾಟಕ ರಾಜ್ಯ ಕುಳುವ ಸಂಘದ ಜಿಲ್ಲಾಧ್ಯಕ್ಷ ಮಾದೇಶ್, ತಾಲೂಕು ಶ್ರೀನಿವಾಸ್,ಗ್ರಾಮ ಪಂಚಾಯಿತಿಯ ಸದಸ್ಯ ಶಿವಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.