Koppal’s co-participation in state level entrepreneurs’ conference.
ಗಂಗಾವತಿ: ರಾಜ್ಯ ಮಟ್ಟದ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಸಮ್ಮೇಳನ ದಿನಾಂಕ: 2 ಮತ್ತು 3 ರಂದು ರಾಯಚೂರ ನಗರದಲ್ಲಿ ನೆರವೇರಿತು.
ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ದರೋಜಿ,ನಗರ ಸಭಾ ಸದಸ್ಯ ಮನೋಹರ ಸ್ವಾಮಿ ಮುದೇನೂರು, ಬಸಯ್ಯ ಶಿವನಗುತ್ತಿ ,ಶ್ರೀಮತಿ ಸಂಧ್ಯಾ ಪಾರ್ವತಿ,ಕೇವಾ ಆಯುರ್ವೇದ ಕಂಪನಿಯ ನಿರ್ದೇಶಕರಾದ ವಿಜಯಕುಮಾರ್, ಅಜಯ್ ಕುಮಾರ್,ಶ್ರೀಮತಿ ಮಂಜುಳಾ, ಯಾದಗಿರಿ ಜಿಲ್ಲಾ ಚೇಂಬರ್ ಅಫ಼್ ಕಾಮರ್ಸ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಅಕ್ಕಿ, ರಾಯಚೂರು ಜಿಲ್ಲಾ ಅಧ್ಯಕ್ಷ ಎಸ್.ಕಮಲ್ ಕುಮಾರ್ ಮುಂತಾದವರು ವೇದಿಕೆಯಲ್ಲಿ ಉಪ್ಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಯಶಸ್ವಿ ವಾಣಿಜ್ಯೊಧ್ಯಮಿ ವಿ.ಆರ್.ಎಲ್.ಸಂಸ್ಥೆಯ ಪ್ರತಿನಿಧಿ ಚನ್ನಪ್ಪ ಪೆದ್ದಿ ಮತ್ತು ಕೊಪ್ಪಳ ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಇವರುಗಳನ್ನು ಸನ್ಮಾನಿಸಲಾಯಿತು.
ರಾಯಚೂರು ನಗರದ ಕೃಷಿ ವಿಶ್ವ ವಿಧ್ಯಾಲಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರಾಯಚೂರು ಜಿಲ್ಲಾ ವಾಣಿಜ್ಯೊಧ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಹಿಂದಿನ ಅಧ್ಯಕ್ಷ ತ್ರಿವಿಕ್ರಮ ಜೋಶಿಯವರ ಮುಂದಾಳತ್ವದಲ್ಲಿ ಎರಡು ದಿನಗಳ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.