Breaking News

ಕುರುಬ ಸಮಾಜದ ಮುಖಂಡರ ಕೊಲೆ ಯತ್ನ ಖಂಡಿಸಿ ಬೃಹತ್ ಪ್ರತಿಭಟನೆ

Massive protest against the attempted murder of the leaders of the shepherd society

ಜಾಹೀರಾತು


ಗಂಗಾವತಿ: ಇತ್ತೀಚಿನ ದಿನಗಳಲ್ಲಿ ಹಾಲುಮತ ಕುರುಬ ಸಮಾಜದ ಮುಖಂಡರ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳು ನಡೆಯುತ್ತಿದ್ದು ಸರಕಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕು ಕನಕದಾಸ ಕರುಬರ ಸಂಘದ ನೇತೃತ್ವದಲ್ಲಿ ಹಾಲುಮತ ಕುರುಬ ಸಮಾಜದವರು ಬೃಹತ್ ಬೈಕ್ ರ‍್ಯಾಲಿ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ವಿಠಲಾಪೂರ ಯಮನಪ್ಪ ಮಾತನಾಡಿ, ಬೀಳಗಿ ತಾಲೂಕಿನ ವಕೀಲರಾದ ಶ್ರೀಯಲ್ಲಪ್ಪ ಹೆಗಡೆ ಮೇಲೆ ಕೆಲವು ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಅದರಂತೆ ಗಂಗಾವತಿ ತಾಲೂಕಿನ ಢಣಾಪೂರ ಗ್ರಾಮದ ತಾ.ಪಂ. ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಶ್ರೀ ಬಿ.ಫಕೀರಯ್ಯ ಇವರನ್ನು ಕೊಲೆ ಮಾಡಲು ಅದೇ ಗ್ರಾಮದ ಕೆಲವು ದುಷ್ಕರ್ಮಿಗಳು ಷಡ್ಯಂತ್ರ ನಡೆಸಿ ಮೊಬೈಲ್ ನಲ್ಲಿ ಮಾತನಾಡುವ ಆಡಿಯೋ ವೈರಲ್ ಆಗಿದ್ದು ಅದೃಷ್ಠವಶಾತ್ ಷಡ್ಯಂತ್ರ ವಿಫಲವಾಗಿದೆ. ಆದರೂ ಇಂತಹ ಕೃತ್ಯವೆಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈಗಾಗಲೇ ಎರಡು ಪ್ರಕರಣಗಳ ಕುರಿತು ಬೀಳಗಿ ಮತ್ತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು ಯಾವುದೇ ಪ್ರಭಾವಕ್ಕೆ ಮಣಿಯದೇ ಆರೋಪಿಗಳನ್ನು ಬಂಧಿಸಿ ಕಠಿಣವಾಗಿ ಶಿಕ್ಷಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಬೈಕ್ ರ‍್ಯಾಲಿ ಕನಕಗಿರಿ ರಸ್ತೆಯಲ್ಲಿರುವ ಶ್ರೀಬೀರಲಿಂಗೇಶ್ವರ ಸಮುದಾಯ ಭವನದಿಂದ ನಗರದ ಶ್ರೀಕೃಷ್ಣದೇವರಾಯ ವೃತ್ತದ ವರೆಗೆ ಜರುಗಿತು.
ಪ್ರತಿಭಟನೆಯಲ್ಲಿ ಸಿದ್ದಯ್ಯ, ಸಿದದರಾಮಯ್ಯ ಗುರುವಿನ್, ಹಾಲುಮತ ಕುರುಬ ಸಮಾಜದ ಮುಖಂಡರಾದ ವಿಠಲಾಪೂರ ಯಮನಪ್ಪ, ಶರಣೇಗೌಡ, ಸಣ್ಣಕ್ಕಿ ನೀಲಪ್ಪ, ಸಿದ್ದಲಿಂಗಪ್ಪಗೌಡ, ಕೆ.ನಾಗೇಶಪ್ಪ, ಅಶೋಕಗೌಡ, ನವಲಿ ಯಮನಪ್ಪ ದಳಪತಿ, ಮೋರಿ ದುರುಗಪ್ಪ, ನೀಲಕಂಠ ಹೊಸಳ್ಳಿ, ಡ್ಯಾಗಿ ರುದ್ರೇಶ, ರ‍್ಹಾಳ ರುದ್ರೇಶ, ಮುಕ್ಕಣ್ಣ, ಮಂಜುನಾಥ ದೇವರಮನಿ, ಹುರಕಡ್ಲಿ ಬೆಟ್ಟಪ್ಪ, ಬಸವರಾಜ, ಪುಂಡಗೌಡ, ವೀರಣ್ಣ ಕುರಿ, ನವಲಿ ನಾಗಪ್ಪ, ಯಮನೂರಪ್ಪ, ಶಿವಪ್ಪ, ಮಲ್ಲಿಕಾರ್ಜುನ, ಕೆ.ವೆಂಕಟೇಶ ಜಂತಗಲ್, ಸಿಂಗನಾಳ ರುದ್ರೇಶ, ಹೊಸಳ್ಳಿ ಶಿವು, ಸಿಂಗನಾಳ ವೆಂಕಟೇಶ, ಧರ್ಮಣ್ಣಗೌಡ, ಟೀಕಯ್ಯು, ಮುದುಕಪ್ಪ, ತಿರುಕಪ್ಪ ಸೇರಿ, ಗಂಗಾವತಿ, ವಡ್ಡರಹಟ್ಟಿ, ಢಣಾಪೂರ, ಹೊಸಳ್ಳಿ, ಬಸಪಟ್ಟಣ, ಸಂಗಾಪೂರ, ವೆಂಕಟಗಿರಿ, ಬೆಣಕಲ್, ಮುಕ್ಕುಂಪಿ, ಕಲ್ಗುಡಿ ಸೇರಿ ಸುತ್ತಲಿನ ಗ್ರಾಮಗಳ ಹಾಲುಮತ ಕುರುಬ ಸಮಾಜದವರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.