Breaking News

ಎಲ್‌ಐಸಿ ಸ್ಥಾಪನಾ ದಿನ:ವಿಮಾ ಸಪ್ತಾಹಕ್ಕೆ ಚಾಲನೆಭಾರತದ ನಿರ್ಮಾಣದಲ್ಲಿ ಎಲ್‌ಐಸಿ ಪಾತ್ರ ಮಹತ್ವದ್ದಾಗಿದೆ

LIC Foundation Day: Launch of Insurance Week LIC’s role in India’s construction is significant

ಜಾಹೀರಾತು



ಗಂಗಾವತಿ: ಸ್ವಾತಂತ್ರö್ಯ ನಂತರ ದೇಶದ ನಿರ್ಮಾಣ ಕಾರ್ಯದಲ್ಲಿ ಭಾರತೀಯ ಜೀವ ವಿಮಾ ನಿಗಮದ ಪಾತ್ರ ಮಹತ್ವದ್ದಾಗಿದೆ. ಮೂಲಸೌಕರ್ಯ ಕಲ್ಪಿಸುವ ಯೋಜನೆಗೆ ಬಂಡವಾಳ ಹೂಡುವ ಮೂಲಕ ದೇಶದ ಜನರ ಹಣ ದೇಶ ನಿರ್ಮಾಣಕ್ಕೆ ಖರ್ಚು ಮಾಡಲಾಗಿದ್ದು ಪ್ರತಿಯೊಬ್ಬ ಎಲ್‌ಐಸಿ ಗ್ರಾಹಕನಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಎಲ್‌ಐಸಿ ವ್ಯವಸ್ಥಾಪಕ ಖಲೀಲ್ ಆಮಹದ್ ಹೇಳಿದರು.
ಅವರು ಹೊಸಳ್ಳಿ ರಸ್ತೆಯಲ್ಲಿರುವ ಎಲ್‌ಐಸಿ ಕಚೇರಿಯಲ್ಲಿ ೬೭ ನೇ ಸಂಸ್ಥಾಪನಾ ದಿನದ ನಿಮಿತ್ತ ವಿಮಾ ಸಪ್ತಾಹಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
೧೯೫೬ ರಲ್ಲಿ ದೇಶದಲ್ಲಿದ್ದ ಎಲ್ಲಾ ಖಾಸಗಿ ವಿಮಾ ಕಂಪನಿಗಳನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಒಗೂಡಿಸಿ ಎಲ್‌ಐಸಿ ಸ್ಥಾಪನೆ ಮಾಡಲು ಕಾರಣರಾಗಿದ್ದಾರೆ. ಅಂದಿನಿAದ ಎಲ್‌ಐಸಿ ಬೃಹದಾಕಾರವಾಗಿ ಬೆಳೆದಿದ್ದು ಸುಮಾರು ೩೦ ಕೋಟಿ ಗ್ರಾಹಕರು, ಲಕ್ಷಾಂತರ ವಿಮಾ ಪ್ರತಿನಿಧಿಗಳು, ವಿಮಾ ನೌಕರರು, ೪೦ ಸಾವಿರ ಕೋಟಿ ಗೂ ಹೆಚ್ಚು ಆಸ್ತಿಗಳನ್ನು ಹೊಂದಿದೆ. ಪ್ರತಿ ಪಂಚವಾರ್ಷಿಕ ಯೋಜನೆಗೆ ಹಣಕಾಸು ಒದಗಿಸುವ ದೇಶದ ಏಕೈಕ ಸದೃಢ ಸಂಸ್ಥೆಯಾಗಿದೆ. ದೇಶದಲ್ಲಿರುವ ಹಲವು ಸರಕಾರಿ ಸೌಮ್ಯದ ಸಂಸ್ಥೆಗಳು ಆರ್ಥಿಕತೆಯಲ್ಲಿ ಸಂಕಷ್ಟಕ್ಕೀಡಾಗುವ ಸಂದರ್ಭದಲ್ಲಿ ಸರಕಾರ ಎಲ್ ಐಸಿಯನ್ನು ಬಹುತೇಕ ಆಶ್ರಿಸುತ್ತದೆ. ವೈಯಕ್ತಿಕ ವಿಮೆ ಜತೆ ದೇಶದ ಆರ್ಥಿಕ ವ್ಯವಸ್ಥೆಗೆ ಎಲ್‌ಐಸಿ ಕೊಡುಗೆ ಅಪಾರವಾಗಿದೆ. ಸಂಸ್ಥೆಯ ಸಂಸ್ಥಾಪನೆಯ ನೆನಪಿಗಾಗಿ ಪ್ರತಿ ವರ್ಷ ಸೆಪ್ಟೆಂಬರ್ ಒಂದರಿAದ ಏಳು ದಿನಗಳ ಕಾಲ ಪ್ರತಿ ಶಾಖೆಯಲ್ಲೂ ವಿಮಾ ಸಪ್ತಾಹ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಹಕ ವಿರೂಪಾಕ್ಷ ರೆಡ್ಡಿ ಪಾಟೀಲ್, ಎಲ್‌ಐಸಿ ಅಧಿಕಾರಿಗಳಾದ ವಿಶ್ವನಾಥ ಹೂಗಾರ, ವೀಣಾ ಮುಜುಂದಾರ್, ರಾಮಣ್ಣ ಕುರಿ, ದಯಾಕರ್, ರಾಮು, ಬಿ.ಸರಸ್ವತಿ, ಗುರುಪ್ರಸಾದ, ಫಣಿರಾಜ್, ಶ್ರೀಧರರೆಡ್ಡಿ, ಸಿದ್ದಲಿಂಗಸ್ವಾಮಿ, ನರೇಶ, ತಬರೀಶ, ಹನುಮಂತಪ್ಪ, ಶ್ರೀನಿವಾಸ, ಕಿಶನ್, ಅನುರುದ್ದ್, ಉದಯಭಾನು, ಮಧು, ಪೂಜಿತಾ, ಹರ್ಷ ಪಾಟೀಲ್, ಶ್ವೇತಾ, ಶ್ರೀಲತಾ, ಪ್ರತಿನಿಧಿಗಳಾದ ಕೆ.ನಿಂಗಜ್ಜ, ಖಾಜವಲಿ, ಅಲ್ಲಂಪ್ರಭು, ಹುಸೇನಬಾಷಾ, ಹುಸೇನ, ನೀಲಪ್ಪ ಸೇರಿ ವಿಮಾನೌಕರರು ಮತ್ತು ಪ್ರತಿನಿಧಿಗಳ ಸಂಘದ ಸದಸ್ಯರಿದ್ದರು.
ಪೊಟೋ೦೧-ಜಿವಿಟಿ-೦೩
ಗಂಗಾವತಿ: ವಿಮಾ ಸಪ್ತಾಹಕ್ಕೆ ಎಲ್‌ಐಸಿ ಕಚೇರಿಯಲ್ಲಿ ಚಾಲನೆ ನೀಡಲಾಯಿತು.

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.