Work of Valmiki Bhavans Discussion of Mr. to expedite
ಕೊಪ್ಪಳ : ನಗರದಲ್ಲಿ ಪ್ರಗತಿಯಲ್ಲಿರುವ ವಿ.ಎ. ಅಗಡಿ
ಬಡಾವಣೆಯ ವಾಲ್ಮೀಕಿ ಭವನ, ಸರ್ಕಾರಿ ಜಿಲ್ಲಾ ಹಳೆ ಆಸ್ಪತ್ರೆಯ
ಹಿಂದುಗಡೆ ಇರುವ ವಾಲ್ಮೀಕಿ ಭವನ ಹಾಗೂ ಟಣಕನಕಲ್
ಸೀಮೆಯಲ್ಲಿನ ವಾಲ್ಮೀಕಿ ಭವನಗಳ ಕೆಲಸ ನಿಧಾನವಾಗಿದ್ದು,
ಅವುಗಳನ್ನುಶೀಘ್ರ ಪೂರ್ಣಗೊಳಿಸಲು ವಾಲ್ಮೀಕಿ ಗುರುಪೀಠ
ರಾಜನಹಳ್ಳಿಯ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ
ಮಹಾಸ್ವಾಮಿಗಳು ಶಾಸಕರೊಟ್ಟಿಗೆ ಚರ್ಚೆ ನಡೆಸಿದರು.
ಅವರು ಜಿಲ್ಲೆಯ ಭೇಟಿ ವೇಳೆ ನಗರಕ್ಕೆ ಆಗಮಿಸಿ ಕೆಲಸವು
ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ನಂತರ
ಭವನಗಳನ್ನು ವೀಕ್ಷಣೆ ಮಾಡಿದರು. ಶಾಸಕ ಕೆ. ರಾಘವೇಂದ್ರ
ಹಿಟ್ನಾಳ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಶೀಘ್ರ ಅನುದಾನ
ಕೊಡಿಸಿ ಭವನಗಳಿಗೆ ಮುಕ್ತಿ ನೀಡುವಂತೆ ಹಾಗೂ ಸಮುದಾಯ
ಹಾಗೂ ಸಾರ್ವಜನಿಕರ ಬಳಕೆಗೆ ಲಭ್ಯವಾಗುವಂತೆ ಮಾಡಲು
ಆಗ್ರಹಿಸಿದರು.
ಇದೇ ವೇಳೆ ಮಾತನಾಡಿದ ಸ್ವಾನೀಜಿ, ಜಿಲ್ಲೆಯ ಸಮಸ್ಯೆಗಳ
ಕುರಿತು ಪಟ್ಟಿ ಮಾಡಿ ಕರೆದರೆ ತಾವು ಖುದ್ದಾಗಿ ಬಂದು ಸಮಸ್ಯೆ
ಪರಿಹಾರಕ್ಕೆ ಪ್ರಯತ್ನ ಪಡುವದಾಗಿ ಮತ್ತು ಗೊಂದಲಗಳಿಗೆ
ಸೂಕ್ತ ಉತ್ತರ ಮಾಹಿತಿ ನೀಡುವುದಾಗಿ ವಿವರಿಸಿದರು.
ಈ ವೇಳೆ ಗುರುಪೀಠದ ಟ್ರಸ್ಟಿನ ಕೊಪ್ಪಳ ಜಿಲ್ಲಾ ಧರ್ಮದರ್ಶಿ
ರಾಮಣ್ಣ ಕಲ್ಲನವರ್, ಕರ್ನಾಟಕ ರಾಜ್ಯ ಎಸ್. ಟಿ. ಒಳ ಮೀಸಲಾತಿ ಹೋರಾಟ
ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಮಂಜುನಾಥ ಜಿ.
ಗೊಂಡಬಾಳ, ವಾಲ್ಮೀಕಿ ಮಹಾಸಭಾ ತಾಲೂಕ ಅಧ್ಯಕ್ಷ ಶರಣಪ್ಪ
ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ಗುತ್ತೂರ,
ಹನುಮಂತಪ್ಪ ಗುದಗಿ, ಅವಿನಾಳೇಶ ವಾಲ್ಮೀಕಿ, ಮಾರುತಿ,
ಶರಣಗೌಡ ಇತರರು ಇದ್ದರು.