Breaking News

ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿದ ಕೀರ್ತಿ ಶರಣರಿಗೆ ಸಲ್ಲುತ್ತದೆ – ಶಿವಶಂಕರ ತರನ್ನಳ್ಳಿ.

Sharan is credited with making Kannada the divine language – Shivashankar Tarannalli.

ಜಾಹೀರಾತು

ಚಿಟಗುಪ್ಪ: ಜಗತ್ತಿನಲ್ಲಿ ಕನ್ನಡ ಭಾಷೆ,ಸರ್ವ ಶ್ರೇಷ್ಠ ಭಾಷೆ ಆಗಿದೆ. ಕನ್ನಡ ಭಾಷೆಯನ್ನು ದೇವಭಾಷೆಯನ್ನಾಗಿ ಮಾಡಿದ ಕೀರ್ತಿ ಶರಣ ಸಂಕುಲಕ್ಕೆ ಸಲ್ಲುತ್ತದೆ.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಣ ಪಡೆದರೆ ಉತ್ತಮ ಜೀವನವನ್ನು ನಡೆಸಲು ಸಾಧ್ಯವಿದೆ
ಎಂದು ಖ್ಯಾತ ಚಿಂತಕರಾದ ಶಿವಶಂಕರ ತರನ್ನಳ್ಳಿ ಹೇಳಿದರು.

ಕಂದಗೂಳ ಗ್ರಾಮದ ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಚಿಟಗುಪ್ಪ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶರಣ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಮತ್ತು ಸಂಸ್ಥಾಪಕರಾದ ಲಿಂ.ಪೂಜ್ಯ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಜನ್ಮದಿನದ ಅಂಗವಾಗಿ ಆಯೋಜಿಸಿರುವ ಸಮಾರಂಭದಲ್ಲಿ ಸಸಿಗೆ ನೀರೆರೆದು, ಕಾರ್ಯಕ್ರಮ ಉದ್ಘಾಟಿಸಿ
ಮಾತನಾಡಿದ ಅವರು ಶರಣರು ಕನ್ನಡ ಭಾಷೆಗೆ ಆದ್ಯತೆ ನೀಡಿದ್ದಾರೆ. ಅನಕ್ಷರಸ್ಥ ಶರಣರನ್ನು ಅಕ್ಷರಸ್ಥರನ್ನಾಗಿ ಮಾಡಿದ ಪರಿಣಾಮದಿಂದಲೇ ಇಷ್ಟೊಂದು ವಚನಗಳು ನಮಗೆ ದೊರೆಯುತ್ತವೆ. ಪ್ರತಿಯೊಬ್ಬ ಶರಣ ಶರಣೆಯರಿಗೂ ಕನ್ನಡದಲ್ಲಿ ವಚನಗಳನ್ನು ರಚಿಸುವಂತೆ ಪ್ರೇರೇಪಿಸಿದರು ಎಂಬುದು ಇಂದಿನ ನಾಗರಿಕ ಸಮಾಜ ಯಾವತ್ತು ಮರೆಯಬಾರದು.ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಶರಣರ ವಿಚಾರಧಾರೆಯನ್ನ ಮನ,ಮನೆ,ಶಾಲಾಕಾಲೇಜುಗಳ ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯ ಮಾಡುತ್ತಿರುವುದು ಶ್ರೇಷ್ಠ ಕೆಲಸ ಎಂದರು.

ಪ್ರಗತಿಪರ ಚಿಂತಕಿ ಶರಣೆ ಇಂದುಮತಿ ಗಾರಂಪಳ್ಳಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ನಿಮ್ಮಳಗೊಬ್ಬ ಬಸವಾದಿ ಶರಣರು ಇದ್ದಾರೆ.ಅದನ್ನು ಅರಿತುಕೊಳ್ಳಬೇಕು,ಅರಿವೇ ಗುರು ಎಂದು ತಿಳಿದು ಸಾಗಬೇಕು.ಇದರಂತೆ ಪ್ರತಿಯೊಬ್ಬ ಶರಣರು ನುಡಿದಂತೆ ನಡೆದು ತೋರಿಸಿದ್ದಾರೆ. ಶರಣರ ಸೂಳ್ನುಡಿಗಳನ್ನು ಯಾವಾಗಲೂ ನೆನಪಿಸಿಕೊಳ್ಳಬೇಕು.ವಚನ ಸಾಹಿತ್ಯ ಬದುಕಿನ ಸಂದೇಶ ಕೊಡುತ್ತದೆ.ವಚನ ಸಾಹಿತ್ಯದ ಆಶಯಗಳ ಕುರಿತು ಯಾವಾಗಲೂ ಮೆಲುಕು ಹಾಕಬೇಕು. ನಿಸ್ವಾರ್ಥ ಸೇವಾ ಮನೋಭಾವ ಸರ್ವರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕು ಯೋಜನಾಧಿಕಾರಿಗಳಾದ ಶರಣ
ಬಸವರಾಜ ಕಾಳಪ್ಪನವರು ಮಾತನಾಡಿ
ವಿಶ್ವ ಸಾಹಿತ್ಯಕ್ಕೆ ಪ್ರಜಾಪ್ರಭುತ್ವ ಆಶಯಗಳನ್ನು ಹೊತ್ತ ವಚನ ಸಾಹಿತ್ಯವನ್ನು ಶರಣರು ವಿಶೇಷ ಕೊಡುಗೆಯಾಗಿ ನೀಡಿದ್ದಾರೆ, ಜನರಾಡುವ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿ,ಜೀವನ ಸಂದೇಶ ಸಾರಿದ್ದಾರೆ. ಸಮಾನತೆಗಾಗಿ ಹಗಲಿರುಳೆನ್ನದೆ
ಬಸವಾದಿ ಶರಣರು ದುಡಿದಿದ್ದಾರೆ ಎಂದು ತಿಳಿಸಿದರು.

ಶರಣ ಸಾಹಿತಿ ಗುಂಡಪ್ಪ ಸಂಗಮಕರ್ ಭಾಲ್ಕಿ ಮಾತನಾಡಿ ಕಾಯಕ ಹಾಗೂ ದಾಸೋಹ ಶರಣ ಧರ್ಮದ ತಿರಳು. ಶರಣರ ವಿಚಾರಧಾರೆಯನ್ನ ಜಾಗತಿಕ ಲೋಕ ಸದಾ ಕಾಲ ಸ್ಮರಣೆ ಮಾಡಬೇಕು ಎಂದು ಹೇಳಿದರು.

ಶರಣ ಚಂದ್ರಶೇಖರ ತಂಗಾ ಮುಸ್ತರಿ ಮಾತನಾಡಿ ಬಸವಾದಿ ಪ್ರಮಥರು ರಚಿಸಿದ ಅಂದಿನ ವಚನೆಗಳೆ ಇಂದು ನಮ್ಮ ಸಂವಿಧಾನದ ಕಾನೂನುಗುಳಾಗಿವೆ.ಅಂತಹ ವಚನ ಸಾಹಿತ್ಯದ ತೇರನ್ನ ತಾಲೂಕಿನ ತುಂಬೆಲ್ಲ ಪಸರಿಸುತ್ತಿರುವ
ತಾಲ್ಲೂಕ ಶ.ಸಾ.ಪ ಕಾರ್ಯವನ್ನು ಸ್ಮರಿಸಿದರು.

ಮುಖ್ಯಗುರುಗಳಾದ ಶರಣೆ
ರೇಖಾ ಮಂಜುನಾಥ್ ಮಾತನಾಡಿ
ಶರಣರ ವಿಚಾರಧಾರೆಯನ್ನ ಮುಂದಿನ ಪೀಳಿಗೆಯ ಮಕ್ಕಳು, ಜನರಿಗೆ ಪರಿಚಯಿಸುವ ಉದ್ದೇಶದಿಂದ ತಾಲೂಕು ಶರಣ ಸಾಹಿತ್ಯ ಪರಿಷತ್ತು ನಿತ್ಯ ನಿರಂತರವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಸೇವಾ ಕಾರ್ಯ
ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡ
ಹಿರಿಯ ಚಿಂತಕರಾದ ಶರಣ ಬಂಡೆಪ್ಪ ಮೂಲೆಗೆ ಮಾತನಾಡಿ ಪ್ರತಿಯೊಬ್ಬರು ವಚನಗಳನ್ನು ಕೇಳಿದರೆ ಸಾಲದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ದಿಕ್ಕಿನಲ್ಲಿ
ತಾಲೂಕು ಶರಣ ಸಾಹಿತ್ಯ ಪರಿಷತ್ತು ಕಾರ್ಯ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ಇನ್ನು ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮಗಳು ಆಯೋಜನೆ ಮಾಡುವಂತೆ ತಿಳಿಸಿದರು.

ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿ ಗಣ್ಯರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕು
ಶರಣ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿ ಕುರಿತು ವಿವರಿಸಿದರು.

ಸಹ ಶಿಕ್ಷಕ ಶರಣ ಮಾಹಾದೇವ ಶೆಟಗಾರ ನಿರೂಪಿಸಿದರು.ಶರಣ ರಾಜು ದೇವಣಿ ಸರ್ವರನ್ನು ವಂದಿಸಿದರು.

ಸಮಾರಂಭದಲ್ಲಿ ಪ್ರಮುಖರಾದ ರಾಘವೇಂದ್ರ ಕುಲಕುರ್ಣೀ,ರಮೇಶ ಗೌಡಗಾಂವೆ,
ಶರಣ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು, ಗಣ್ಯರು, ಶಿಕ್ಷಕರು – ಶಿಕ್ಷಕಿಯರು, ಮಕ್ಕಳು ಉಪಸ್ಥಿತರಿದ್ದರು.

About Mallikarjun

Check Also

screenshot 2025 10 16 17 56 26 72 6012fa4d4ddec268fc5c7112cbb265e7.jpg

ತಿರುಪತಿ ಬೌದ್ಧರ ಕ್ಷೇತ್ರ ವಾಗಿತ್ತು ಎನ್ನುವುದು ಹಾಸ್ಯಾಸ್ಪದ:ಟಿಟಿಡಿ ಸದಸ್ಯ ಎಸ್ ನರೇಶ್  ಕುಮಾರ್

It is ridiculous to say that Tirupati was a Buddhist place: TTD member S Naresh …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.