Election of office bearers of Private Unaided School Union Association

ತಿಪಟೂರು ತಾಲೂಕು ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ತಿಪಟೂರಿನಲ್ಲಿ ನಡೆಯಿತು. ಖಾಸಗಿ ಅನುದಾನ ರಹಿತ ಶಾಲಾ ಒಕ್ಕೂಟ ಸಂಘದ ಅಧ್ಯಕ್ಷರಾಗಿ ಶ್ರೀ ಆದಿತ್ಯ, ಉಪಾಧ್ಯಕ್ಷರಾಗಿ ಜಿಎಸ್ ರಮೇಶ್ ಹಾಗೂ ಪರ್ವೇಜ್ ಉಲ್ಲ ಶಫಿ ಖಜಾಂಚಿಯಾಗಿ ಶ್ರೀ ರವಿಕುಮಾರ್ ಕಾರ್ಯದರ್ಶಿಯಾಗಿ ಮುರಳಿ ಕೃಷ್ಣ ನಿರ್ದೇಶಕರಾಗಿ ಉಮಾಶಂಕರ್, ಕೃಷ್ಣಮೂರ್ತಿ, ತನ್ವಿರುಲ್ಲಾ ಶಫಿ, ವಿಜಯ ಹೆಚ್ ಬಿ,ನವೀನ್, ಕೇಶವ್ ,ನಂದೀಶ್, ಚೇತನ್,ಮೋಹನ್,ಪ್ರಭಾಕರ್,ಮಂಜುನಾಥ್, ರಾಜಕುಮಾರ್, ವರದರಾಜ್, ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರಾಗಿ ಆಯ್ಕೆಯಾದ ಆದಿತ್ಯ ರವರು ತಿಪಟೂರು ತಾಲೂಕು ಖಾಸಗಿ ಅನುದಾನ ರಹಿತ ಶಾಲೆಗಳ ಅಭಿವೃದ್ಧಿ ಪರವಾಗಿ ಕೆಲಸ ಮಾಡುತ್ತೇನೆ ಹಾಗೂ ಖಾಸಗಿ ಅನುದಾನ ರಹಿತ ಶಾಲೆಗಳ ಸಮಸ್ಯೆಗಳಿಗೆ ಸ್ಪಂದಿಸುತ್ತ ನಿಸ್ವಾರ್ಥವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ತಿಪಟೂರು ತಾಲೂಕಿನ ರಾಜ್ಯ ಪಠ್ಯಕ್ರಮ ಕೇಂದ್ರ ಪಠ್ಯಕ್ರಮ ಹಾಗೂ ಐಸಿಎಸ್‌ಸಿ ಪಠ್ಯಕ್ರಮದ ಎಲ್ಲಾ ಅನುದಾನ ರಹಿತ ಶಾಲೆಯ ಆಡಳಿತ ಮಂಡಳಿಯವರು ಶಾಲೆಯ ಮುಖ್ಯೋಪಾಧ್ಯಾಯರು ಪಾಲ್ಗೊಂಡಿದ್ದರು. ಅನುದಾನ ರಹಿತ ಶಾಲೆಗಳ ಅಭಿವೃದ್ಧಿ ಹಾಗೂ ಎಲ್ಲಾ ಶಾಲೆಯವರು ಒಟ್ಟಾಗಿ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಎಂದು ತೀರ್ಮಾನಿಸಲಾಯಿತು. ಶಾಲೆಗಳ ಸಮಸ್ಯೆಗಳ ಕಡೆಗೂ ಒತ್ತುಕೊಟ್ಟು ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
Kalyanasiri Kannada News Live 24×7 | News Karnataka
