Breaking News

ಶೃಂಗೇರಿ ಶಾರದಾ ಪೀಠದ ಪೀಠಾಧಿಕಾರಿಗಳಾದ, ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಕಾಲಘಟ್ಟ, ಸುವರ್ಣ ಯುಗ,,, ವೇದ ಬಾಯಿ ಬಾಲಕೃಷ್ಣ ದೇಸಾಯಿ

The era of Jagadguru Sri Bharati Tirtha Mahaswami, the presiding officers of Sringeri Sharada Peetha, the Golden Age,,, Veda Bai Balakrishna Desai.

ಜಾಹೀರಾತು

ಗಂಗಾವತಿ,22, ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ಪ್ರಥಮವಾಗಿ ಸ್ಥಾಪಿಸಲ್ಪಟ್ಟ ಶೃಂಗೇರಿಯ ಶಾರದಾ ಪೀಠವು 33ನೇ ಪೀಠಾಧಿಕಾರಿಗಳಾದ, ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಕಾಲಘಟ್ಟದಲ್ಲಿ ಸುವರ್ಣ ಯುಗವಾಗಿ ಕಂಗೊಳಿಸುತ್ತದೆ ಎಂದು ವೇದಾ ಬಾಯಿ ಬಾಲಕೃಷ್ಣ ದೇಸಾಯಿಹೇಳಿದರು, ಅವರು ಸೋಮವಾರದಂದು ಗಂಗಾವತಿಯ ಶಂಕರ ಮಠದಲ್ಲಿ, ಶೃಂಗೇರಿ ಶಾರದಾ ಪೀಠದ ಉತ್ತರಾಧಿಕಾರಿಗಳಾದ, ಶ್ರೀ ವಿದುಶೇಖರ ಮಹಾಸ್ವಾಮಿಗಳವರ, 31ನೆಯ ವರ್ಧಂತಿ ಮಹೋತ್ಸವದಲ್ಲಿ ಅತಿಥಿ ಉಪನ್ಯಾಸ ನೀಡಿ ಮಾತನಾಡಿದರು,, ಸನಾತನ ಧರ್ಮದ ರಕ್ಷಣೆಗಾಗಿ, ಕಂಕಣ ಬದ್ಧರಾಗಿರುವ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಧರ್ಮ ಜಾಗೃತಿ ಗಾಗಿ, ದೇಶ ಸೇರಿದಂತೆ ವಿದೇಶದಲ್ಲಿ, ಶಂಕರ ಮಠಗಳನ್ನು ಸ್ಥಾಪಿಸುವುದರ ಮೂಲಕ, ಧರ್ಮ ಜಾಗೃತಿ ಗೊಳಿಸಿದ್ದಾರೆ, ಪ್ರಸ್ತುತ ಅವರ ಉತ್ತರಾಧಿಕಾರಿಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳು ಸಹ ಗುರುಗಳ ಮಾರ್ಗದರ್ಶನದಲ್ಲಿ, ಭಯೋತ್ಪಾದನೆಯಿಂದ ತತ್ತರಿಸಿದ, ಕಾಶ್ಮೀರದಲ್ಲಿ ಶಾರದಾ ಪೀಠ ಸ್ಥಾಪಿಸುವುದರ ಮೂಲಕ ಪುನಃ ಹಿಂದಿನಂತೆ ವೇದ ಮಂತ್ರ ಘೋಷಗಳ ತಾಣವಾಗಿ ಪರಿವರ್ತಿಸಿದ್ದ ಕೀರ್ತಿ, ಶೃಂಗೇರಿ ಪೀಠಕ್ಕೆ ಸಂಸಲ್ಲುತ್ತದೆ ಎಂದು ವಿದುಶೇಖರ ಶೇಖರ ಮಹಾಸ್ವಾಮಿಗಳ ಜನನ ಜೀವನ ಎಲ್ಲಾ ಸಪ್ಪ ಪಡೆದುಕೊಂಡ ಬಗ್ಗೆ ಸಮಗ್ರ ಮಾಹಿತಿ ನೀಡಿದ ರು, ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ರಾಘವೇಂದ್ರ ಅಳವಂಡಿಕರ್ ಮಾತನಾಡಿ ಭತ್ತದ ಕಣಜ ಗಂಗಾವತಿ ಈಗ ವಿದ್ಯಾ ಕಣಜವಾಗಿದೆ, ಶ್ರೀ ಶಾರದಾಂಬೆಯ ಅನುಗ್ರಹದಿಂದ, ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವವಾದ ಬದಲಾವಣೆ ಗೊಳ್ಳುತ್ತದೆ ಇದು ಸಂತಸದಾಯಕವೆಂದು ಹೇಳಿದರು, ಈ ಸಂದರ್ಭದಲ್ಲಿ, ಶ್ರೀ ಶಾರದಾ ಶಂಕರ ಭಜನಾ ಮಂಡಳಿಯವರಿಂದ ಅಷ್ಟೋತ್ತರ ಪಾರಾಯಣ ಭಜನೆ, ಸೇರಿದಂತೆ ಗುರುಪಾದಕಗಳಿಗೆ ಪಂಚಾಮೃತ ರುದ್ರಾಭಿಷೇಕ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನಾ, ಅರ್ಚಕ ಕುಮಾರ್ ಭಟ್ ನೆರವೇರಿಸಿದರು, ಭಜನಾ ಮಂಡಳಿಯ ಗೌರವಾಧ್ಯಕ್ಷ ವಿದ್ಯಾಬಾಯಿ ನಾರಾಯಣ್ ರಾವ್, ಕಾರ್ಯದರ್ಶಿ ಗಾಯತ್ರಿ ಶ್ರೀಧರ್, ಅಳವಂಡಿ ಕ ರ, ಹಂಸ ಬಾಲಚಂದ್ರ, ರಾವ್, ಸೇರಿದಂತೆ ಬಾಲಕೃಷ್ಣ ದೇಸಾಯಿ, ಶೇಷಗಿರಿ ಗಡಾದ್, ಅನಿಲ್ ಅಳವಂಡಿ, ಇತರರು ಪಾಲ್ಗೊಂಡಿದ್ದರು

About Mallikarjun

Check Also

ನವೆಂಬರ್ 1 ರಂದು ಜಿಲ್ಲಾ ಕೇಂದ್ರದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ

70th Karnataka Rajyotsava Day celebrated at the district headquarters on November 1 ಕೊಪ್ಪಳ ಅಕ್ಟೋಬರ್ 28 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.