In Hanur town, under the leadership of Tehsildar, the distribution of leaflets of child laborers to the trading places and shops of the town.
ವರದಿ :ಬಂಗಾರಪ್ಪ ಸಿ ಹನೂರು .
ಹನೂರು :ಪಟ್ಟಣದಲ್ಲಿನ ಅಂಗಡಿಗಳು.ಹೋಟೆಲ್ ಗಳು.ಗ್ಯಾರೇಜ್ ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಕರಪತ್ರ ನೀಡುವುದರ ಮೂಲಕ 18 ವರ್ಷದ ಒಳಪಟ್ಟ ಮಕ್ಕಳನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂಬ ವಿಷಯವನ್ನು ಎಲ್ಲಾ ಮಾಲಿಕರಿಗೂ ಹನೂರು ತಹಸಿಲ್ದಾರ್ ತಿಳಿಸಿದರು .ನಂತರ ಮಾತನಾಡಿದ ಅವರು ನಿಮ್ಮ ಸಂಸ್ಥೇಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುವುದು ಕಂಡು ಬಂದಲ್ಲಿ ಅಂತಹ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದರು. ಈ ತಂಡವು ಹನೂರು ಪಟ್ಟಣದ ಪೊಲೀಸ್ ಸ್ಟೇಷನ್ ರಸ್ತೆ ಬಸ್ ನಿಲ್ದಾಣ ರಸ್ತೆ ಬಂಡಳ್ಳಿ ರಸ್ತೆ ಗಳಿಗೆ ತೆರಳಿ ಅಲ್ಲಿನ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಅರಿವು ಮೂಡಿಸಲಾಯಿತು.ಇದೇ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ಪ್ರಸಾದ್. ಯೋಜನಾ ನಿರ್ದೇಶಕರಾದ ಮಹೇಶ್. ಬಿಸಿಎಂ ಅಧಿಕಾರಿಗಳಾದ ಲಿಂಗರಾಜು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಜನಾರ್ಧನ್. ಕಾರ್ಮಿಕ ಇಲಾಖೆಯ ಸುನಿಲ್ ಸೇರಿದಂತೆ ಇತರರು ಹಾಜರಿದ್ದರು