Breaking News

ಭಾವಗಳ ಒತ್ತಾಸೆಯಲ್ಲಿ ಕಾವ್ಯಕ್ಕೊಂದು ಲಯಸಾಹಿತಿ ಕನಕಗಿರಿ ಮನೋಹರ ಬೊಂದಾಡೆ ಅಭಿಮತ

Poetry has a rhythm in the insistence of emotions Literature Kanakagiri Manohara Bondade Abhimata

ಜಾಹೀರಾತು

ಗಂಗಾವತಿ: ಬರೆಯುವ ಹಂಬಲದಿAದ ಬರೆಯದೆ, ನಮ್ಮನ್ನು ಮೀರುವ ಭಾವಗಳ ಒತ್ತಾಸೆಗೆ ಬರೆದಾಗ ಕಾವ್ಯಕ್ಕೊಂದು ಲಯ ಬರುತ್ತದೆ ಎಂದು ಸಾಹಿತಿ ಕನಕಗಿರಿ ಮನೋಹರ ಬೊಂದಾಡೆ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾ ಸಮಿತಿ ಸ್ಥಳೀಯ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ಆವರಣದ ನೌಕರರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ವರಾಜ್ಯ – ಸುರಾಜ್ಯ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಆಗಸ್ಟ್ ೧೫ರ ಸುಸಂದರ್ಭಕ್ಕೆ ೧೫ ಕವಿಗಳು ಕಾವ್ಯವಾಚನ ಮಾಡಿದ್ದು, ವಿಶೇಷ ಮತ್ತು ಕಾಕತಾಳೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಕೆಪಿಟಿಸಿಎಸ್ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಜಗನ್ನಾಥ ರಾಠೋಡ್, ಸಮಾಜ ತಿದ್ದುವಲ್ಲಿ ಕವಿಗಳ ಪಾತ್ರ ಪ್ರಮುಖವಾಗಿದ್ದು, ಅವರನ್ನು ಗುರುತಿಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲೂಕು ಅಧ್ಯಕ್ಷ ಯಂಕಪ್ಪ ಕಟ್ಟಿಮನಿ, ಲೇಖಕರು ನಿರಂತರ ಸಾಹಿತ್ಯ ಕೃಷಿಯಲ್ಲಿರಬೇಕು. ಈ ಮೂಲಕ ವ್ಯವಸ್ಥೆಯನ್ನು ಎಚ್ಚರಿಸುತ್ತಿರಬೇಕು ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬಳ್ಳಾರಿಯ ವಿಭಾಗೀಯ ಸಂಚಾಲಕ ಅಶೋಕ ಕುಮಾರ ರಾಯ್ಕರ್ ಪ್ರಾಸ್ತಾವಿಕ ಮಾತನಾಡಿ, ನಮಗೆಲ್ಲ ಕೊಟ್ಟ ನಾಡು – ದೇಶಕ್ಕಾಗಿ ನಾವು ಕೊಡುಗೆಯಾಗಬೇಕು. ಭಯೋತ್ಪಾದಕರು ಹೆಚ್ಚುತ್ತಿದ್ದು, ದೇಶ ರಕ್ಷಣೆಗೆ ನಾವೆಲ್ಲ ಮುಂದಾಗಬೇಕು ಎಂದರು.
ಗೋಷ್ಠಿಯ ನಿರ್ಣಾಯಕರಾಗಿದ್ದ ಬರಹಗಾರ್ತಿಯರಾದ ಡಾ. ವಾಣಿಶ್ರೀ ಪಾಟೀಲ್, ಡಾ. ಮಹಾಲಕ್ಷ್ಮಿ, ಸಾಹಿತಿ ನಾಗಭೂಷಣ ಅರಳಿ ಮಾತನಾಡಿ, ಅಧ್ಯಯನವಿಲ್ಲದ ಬರಹ ಬರೀ ಅಕ್ಷರಗಳ ಸಮೂಹ ಆಗುವ ಹೊರತು ಅದು ಸಾಹಿತ್ಯ ಎನಿಸಿದು. ಕಾವ್ಯ ರಚನೆಗೂ ಮುನ್ನ ಪದಗಳನ್ನು ನಮ್ಮೊಳಗೆ ದುಡಿಸಿಕೊಳ್ಳಬೇಕು. ಆಗಲೇ ಅರ್ಥಪೂರ್ಣ ಸಾಹಿತ್ಯ ಹೊರ ಹೊಮ್ಮಲು ಸಾಧ್ಯ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕೊಪ್ಪಳ ಜಿಲ್ಲಾ ಕಾರ್ಯದರ್ಶಿ, ಕವಿ ಶರಣಪ್ಪ ತಳ್ಳಿ ಮಾತನಾಡಿದರು.
ಈ ಸಂದರ್ಭ ಕವಯಿತ್ರಿರಾದ ನಾಗರತ್ನ ಎಚ್., ರೇಷ್ಮಾ ಕಂದಕೂರು, ಲಕ್ಷ್ಮಿದೇವಿ ಪತ್ತಾರ, ಮಾಲಾ ಶ್ರೀಧರ್ ಕವಿಗಳಾದ ಯಲ್ಲಪ್ಪ ಕಲಾಲ್, ಮಹಾದೇವ ಮೋಟಿ, ಶಾಮೀದಸಾಬ ಲಾಠಿ, ಸುರೇಶ ಕಲಾಪ್ರಿಯ, ಬಸವರಾಜ ಹೇರೂರು, ಬಸವರಾಜ ತಿರುಮಲಾಪುರ, ದೇವಪ್ಪ ವರನಕೇರಿ, ಸಂಗಪ್ಪ ವಟಪರವಿ, ವೀರಭದ್ರಪ್ಪ, ತಿಮ್ಮಣ್ಣ ಬೇರ್ಗಿ ಮತ್ತು ಕಲ್ಲಪ್ಪ ತಳುವಕೇರಿ ಕವನ ವಾಚಿಸಿದರು.
ಕಾರ್ಯಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ತಾಲುಕು ಕಾರ್ಯದರ್ಶಿ ಶ್ರೀಧರ್ ನಿರೂಪಿಸಿದರು.
ಸನ್ಮಾನ: ಇದೇ ಸಂದರ್ಭ ಡಾ. ವಾಣಿ ಪಾಟೀಲ್, ಡಾ. ಮಹಾಲಕ್ಷ್ಮಿ, ನಿವೃತ್ತ ಶಿಕ್ಷಕ ಸಂಗಪ್ಪ ವಕ್ಕಳದ, ನಾಗಭೂಷಣ ಅರಳಿ ಹಾಗೂ ಕನಕಗಿರಿ ಮನೋಹರ ಬೊಂದಾಡೆ ಇವರನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಸನ್ಮಾನಿಸಲಾಯಿತು.

About Mallikarjun

Check Also

screenshot 2025 10 17 17 14 29 84 e307a3f9df9f380ebaf106e1dc980bb6.jpg

ಬೆಳ್ಳೆತೆರೆಗೆ ಬರಲು ಸಜ್ಜಾದ “ಮಾವುತ”

Mavutha" is all set to hit the big screen ಬೆಂಗಳೂರು : ಎಸ್ ಡಿ ಆರ್ ಪ್ರೊಡಕ್ಷನ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.