Breaking News

ಎಫ್‌ಕೆಸಿಸಿನಲ್ಲಿ ವರ್ತಕರ ರಾಷ್ಟ್ರೀಯ ಮಂಡಳಿ‌ ಸಭೆ; ಐದು ಟ್ರಿಲಿಯನ್ ಅರ್ಥ ವ್ಯವಸ್ಥೆ ರಾಷ್ಟ್ರವನ್ನಾಗಿ ಮಾಡಲು ಕೊಡುಗೆ ನೀಡಿ – ಸುನೀಲ್ ಸಿಂಗ್

National Council of Traders meeting at FKCC; Contribute to making the nation a five trillion economy - Sunil Singh

ಬೆಂಗಳೂರು, ಆ,7;ರಾಷ್ಟ್ರೀಯ ವರ್ತಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದಿಂದ ಎಫ್.ಕೆ.ಸಿ.ಸಿ.ಐ ಸಭಾಂಗಣದಲ್ಲಿ ವರ್ತಕರ ಬೈಹತ್ ಸಭೆ ಆಯೋಜಿಸಲಾಗಿತ್ತು. ರಾಷ್ಟ್ರೀಯ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುನೀಲ್ ಸಿಂಗ್ ಮಾತನಾಡಿ, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ವ್ಯಾಪಾರಿಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ದೇಶವನ್ನು ಐದು ಟ್ರಿಲಿಯನ್ ಡಾಲರ್ ಅರ್ಥ ವ್ಯವಸ್ಥೆ ಹೊಂದಿರುವ ರಾಷ್ಟವನ್ನಾಗಿ ರೂಪಿಸಲು ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯಂತೆ ಭಾರತವು ಆರ್ಥಿಕತೆಯಲ್ಲಿ 3 ನೇ ಸ್ಥಾನವನ್ನು ತಲುಪಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಪ್ರಧಾನಿ ಮೋದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಮಂಡಳಿಯು ಪ್ರತಿ ಹಂತದಲ್ಲೂ
ನೀಡುತ್ತಿದ್ದಾರೆ ಎಂದರು.
ರಾಷ್ಟ್ರೀಯ ವರ್ತಕರ ಕಲ್ಯಾಣ ಸಂಘದ (ಕರ್ನಾಟಕ) ಆಡಳಿತ ಮಂಡಳಿ ಸದಸ್ಯ ಪ್ರಕಾಶ್ ಪಿರಗಲ್
ಅವರು ವ್ಯಾಪಾರಿಗಳಿಗೆ ಪಿಂಚಣಿ ಯೋಜನೆ ಕುರಿತು ಮಾಹಿತಿ ನೀಡಿದರು.
ಸಂಸದ ಪಿ.ಸಿ. ಮೋಹನ್, ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷ ಚುನಾಯಿತ ರಮೇಶ್ ಚಂದ್ರ ಲಾಹೋಟಿ ಮತ್ತು ವಿವಿಧ ಸಂಸ್ಥೆಗಳು, ವರ್ತಕರ ಸಂಘಗಳ ಪ್ರತಿನಿಧಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜಾಹೀರಾತು

About Mallikarjun

Check Also

screenshot 2025 10 23 18 09 37 81 6012fa4d4ddec268fc5c7112cbb265e7.jpg

ಹನೂರು ಪಟ್ಟಣದಲ್ಲಿ ಪ್ರಚಾರದ ಪ್ಲೆಕ್ಸ್ ಗಳಿಗಿಲ್ಲ ತಡೆ ಸರ್ಕಾರದ ಅಪಾರ ಪ್ರಮಾಣದ ಹಣ ಬೊಕ್ಕಸಕ್ಕೆ ನಷ್ಟ

The lack of a ban on campaign plexes in Hanur town is a huge loss …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.