Breaking News

ರಂಗನಾಥಸ್ವಾಮಿ ದೇವಸ್ಥಾನ 1,31,158/-ರೂ ಹಾಗೂ ಜಯಲಕ್ಷ್ಮೀ ದೇವಸ್ಥಾನ ಪಂಪಾ ಸರೋವರ 2,61,636/-ರೂ ಒಟ್ಟು 3,92,794/- ರೂ ಹುಂಡಿಯಲ್ಲಿ ಸಂಗ್ರಹ

Ranganathaswamy Temple Rs 1,31,158/- and Jayalakshmi Temple Pampa Sarovar Rs 2,61,636/- Total collection of Rs 3,92,794/- in Hundi

ಗಂಗಾವತಿ: ಇಂದು ತಾಲೂಕಿನ ಆನೆಗುಂದಿ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಜಯಲಕ್ಷ್ಮೀ ದೇವಸ್ಥಾನ ಚಿಕ್ಕರಾಂಪುರದಲ್ಲಿ
ಇಂದು ದಿ. 03-08-2023 ರಂದು ಮಾನ್ಯ ತಹಶೀಲ್ದಾರರು ಗಂಗಾವತಿ ಇವರ ನಿರ್ದೇಶನದಂತೆ ಮಂಜುನಾಥ ಹಿರೇಮಠ ಕಂದಾಯ ನಿರೀಕ್ಷಕರು ಗಂಗಾವತಿ ಹಾಗೂ ದೇವಸ್ಥಾನದ ಆಡಳಿತಧಿಕಾರಿಗಳು ಇವರ ನೇತೃತ್ವದಲ್ಲಿ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಆನೆಗುಂದಿ ಹಾಗೂ ಜಯಲಕ್ಷ್ಮೀ ದೇವಸ್ಥಾನ ಚಿಕ್ಕರಾಂಪೂರದಲ್ಲಿ ಹುಂಡಿ ತೆರೆಯಲಾಗಿದ್ದು. (ದಿ. 19-10-2022 ರಿಂದ 03-08-2023 ರವರೆಗೆ ಒಟ್ಟು 10 ತಿಂಗಳ ಅವಧಿಯಲ್ಲಿ) ರಂಗನಾಥಸ್ವಾಮಿ ದೇವಸ್ಥಾನ 1,31,158/- ರೂ ಗಳು ಹಾಗೂ ಜಯಲಕ್ಷ್ಮೀ ದೇವಸ್ಥಾನ ಪಂಪಾ ಸರೋವರ 2,61,636/- ರೂ ಗಳು ಒಟ್ಟು 3,92,794/- ರೂ ಗಳು ಸಂಗ್ರಹವಾಗಿರುತ್ತದೆ. ಹಲವು ನೇಪಾಳ ದೇಶದ ವಿದೇಶಿ ನಾಣ್ಯ ಹಾಗೂ ನೋಟುಗಳು ಹುಂಡಿಯಲ್ಲಿ ಸಂಗ್ರಹವಾಗಿರುತ್ತದೆ.

ಜಾಹೀರಾತು

ಈ ಸಂದರ್ಭದಲ್ಲಿ
ಗಂಗಾವತಿ ತಹಶೀಲ್ದಾರರಾದ ಮಂಜುನಾಥ ಭೋಗಾವತಿ ಇವರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ
ಆನೆಗುಂದಿ ಗ್ರಾಮದ ಹಿರಿಯರಾದ ಕುಪ್ಪರಾಜ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯಾದ ಮಹಾಲಕ್ಷ್ಮೀ ಹಾಗೂ ಆನೆಗುಂದಿ ಗ್ರಾಮದ ಎಸ್ ಬಿ ಐ ಬ್ಯಾಂಕ್ ವ್ಯವಸ್ಥಾಪಕರಾದ ರಂಜಿತ್ ಹಾಗೂ‌ಸಿಬ್ಬಂದಿ ಹಾಗೂ ಪೋಲಿಸ್ ಸಿಬ್ಬಂದಿಯಾದ ವಿಶ್ವನಾಥ ಹಾಗೂ ದೇವಸ್ಥಾನದ ಸಿಬ್ಬಂದಿವರ್ಗ ಹಾಗೂ ಭಕ್ತಾದಿಗಳು ಹಾಜರಿದ್ದರು.

ಸದ್ರಿ ಕಾರ್ಯವು ಸಂಪೂರ್ಣವಾಗಿ ಪೊಲೀಸ್ ಬಂದೊಬಸ್ಥ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ನಡೆಯಿತು
ಕಳೆದ ಬಾರಿ ದಿ 18-10-2022 ರಂದು ಹುಂಡಿ ತೆರೆಯಲಾಗಿತ್ತು ಎರಡು ದೇವಸ್ಥಾನದ ಮೊತ್ತ ರೂ1,64710/-* ಸಂಗ್ರಹವಾಗಿತ್ತು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.