More than 60 members from Gangavati Taluk Shamiana and Suplace Unit will participate in Shringara 2nd Mahadi Veshan - Gururaj Chellur
ಗಂಗಾವತಿ, 3: ಉತ್ತರ ಕರ್ನಾಟಕ ಶಾಮಿಯನ್ ಸಪ್ಲೈ ಲೈಟಿಂಗ್ ಧ್ವನಿವರ್ಧಕ ಹಾಗೂ ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಹೊಸಪೇಟೆ ವಿಜಯನಗರ ಜಿಲ್ಲೆ , ಅಲ್ ಇಂಡಿಯಾ ಟೆಂಟ್ ಡೀಲರ್ಸ್ ವೆಲೆಫೇರ್ ಆರ್ಗನೈಸೇಶನ್ ನವದೆಹಲಿ ಹಾಗೂ ಶಾಮಿಯಾನಾ ಸಪ್ಲಿಯರ್ಸ್ ಅಸೋಸಿಯೇಷನ್ ಹುಬ್ಬಳ್ಳಿ ಧಾರವಾಡ ಜಿಲ್ಲೆ, ನೇತೃತ್ವದಲ್ಲಿ , ಇದೇ ದಿನಾಂಕ 5 6. 7ರಂದು ಮೂರು ದಿನಗಳ ಕಾಲ ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಶ್ರೀನಿವಾಸ್ ಗಾರ್ಡನ್ ನಲ್ಲಿ ಶೃಂಗಾರ 2ನೇಮಹಾದಿವೇಶನಕೆಗಂಗಾವತಿ ತಾಲೂಕ ಶಾಮಿಯಾನ ಡೆಕೋರೇಟರ್ ಸಂಘದಿಂದ 40ಕ್ಕೂ ಅಧಿಕ ಮಾಲೀಕರು ಭಾಗವಹಿಸುವುರು ಎಂದು ಸಂಘದ ಅಧ್ಯಕ್ಷ ಗುರುರಾಜ ಚಳ್ಳಾರಿ ಹೇಳಿದರು ಅವರು ಬುಧವಾರದಂದು ತಮ್ಮ ಕಾರ್ಯಾಲಯದಲ್ಲಿ ಉತ್ತರ ಕರ್ನಾಟಕ ಉಪಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ಅಮಂತ್ರಣ ಪತ್ರಿಕೆಯನ್ನು ಉದ್ಘಾಟಿಸಿದ ಬಳಿಕ ಮಾತನಾಡಿ ಗಂಗಾವತಿ ತಾಲೂಕಿನಲ್ಲಿ ಸುಮಾರು 60ಕ್ಕೂ ಅಧಿಕ ಶಾಮಿಯಾನ ಸಪ್ಲೈ ಲೈಟಿಂಗ್ ಪರಿವರ್ಧಕ ಸೇರಿದಂತೆ ಡೆಕೋರೇಷನ್ ಹೊಂದಿದ್ದು ಸಂಘಟನೆಯನ್ನು ರಚಿಸಿಕೊಳ್ಳಲಾಗಿದೆ , ಸಂಘಟನೆ ಸಮಸ್ಯೆಗಳು ಪರಿಹಾರಗಳು ಸೇರಿದಂತೆ ಡೆಕೋರೇಷನ್ ಗೆ ಅಲಂಕಾರಕ ವಸ್ತುಗಳನ್ನು ಖರೀದಿಸುವ ಉದ್ದೇಶದಿಂದ ಮಹಾದಿವೇಶನದಲ್ಲಿ ಶಾಮಿಯಾನ ಮಳಿಗೆಗಳ ಬೃಹತ್ ವಸ್ತು ಪ್ರದರ್ಶನ , ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಕ್ಕಾಗಿ ಮನವಿ ಪತ್ರ ಸಲ್ಲಿಕೆ ಸೇರಿದಂತೆ ಇವುಗಳೊಂದಿಗೆ ಕಲೆಯ ಸಾಹಿತ್ಯ ಸಂಸ್ಕೃತಿ ನಾಟಕ ಸಂಗೀತ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದ ಅವರು ಶೃಂಗಾರ ಎರಡನೆಯ ಮಹಾದಿವೇಶನದ ಸಮಾರಂಭವನ್ನು ದಿನಾಂಕ 5 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಧ್ವಜಾರೋಹಣ ಉದ್ಘಾಟನೆಯನ್ನು ನವ ದೆಹಲಿಯ ವೈಸ್ ಚೇರ್ಮನ್ ಹುಬ್ಬಳ್ಳಿಯ ಜಿ ಪೂರ್ಣಚಂದ್ರರಾವ್ ಉದ್ಘಾಟಿಸುವರು , ಮುಖ್ಯ ಅತಿಥಿಗಳಾಗಿ ಪ್ರಾಂತ ಕಾರ್ಯಕಾರಿ ಸದಸ್ಯ ಕರ್ನಾಟಕ ಉತ್ತರ ಧಾರವಾಡದ ಶ್ರೀಧರ್ ನಾಡಿಗೆ ರ , ವಸ್ತು ಪ್ರದರ್ಶನ ಮಳಿಗೆಗಳ ಉದ್ಘಾಟನೆ ಸಮಾರಂಭ ಜರುಗಲಿದ್ದು ಸಾನಿಧ್ಯವನ್ನು ಹುಬ್ಬಳ್ಳಿ ಮಂಗಳವಾರ ಪೇಟೆಯ ಬಸವಲಿಂಗ ಮಹಾಸ್ವಾಮಿಗಳು ರುದ್ರಾಕ್ಷಿಮಠ ವಹಿಸುವರು ಅಧ್ಯಕ್ಷತೆಯನ್ನು ಗಂಗಾಧರ್ ದುಬೆ ಶಾಮಿಯಾನ್ ಸಪ್ಲೈ ಅಧ್ಯಕ್ಷತೆ ವಯಸ್ಸಲ್ಲಿದ್ದು ಕಾರ್ತರ್ ಸಿಂಗ್ ರಾಜೇಗೌಡ ವೆಂಕಟಪುರ ಎಂ ಪಿ ಅಯ್ಯಬ ಆಶಾ ಸೇರಿದಂತೆ ಗಣ್ಯರು ಭಾಗವಹಿಸುವರುಎಂದು ತಿಳಿಸಿದರು,, ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾದ ಗುರುರಾಜ್ ಚರ್ಚೆನಗುಡ್ಡ ಮಾತನಾಡಿ ಮೂರು ದಿನದ ಈ ಅಧಿವೇಶನ ಇಡೀ ರಾಜ್ಯದ ಶಾಮಿಯಾನ ಡೆಕೋರೇಷನ್ ಸಪ್ಲೈ ಲೈಟಿಂಗ್ ಧ್ವನಿ ವರ್ಧಕ ಮಾಲೀಕರಿಗೆ ಅತ್ಯಂತ ಸಹಕಾರಿಯಾಗಿದೆ , ಶಾಮಿಯಾನ ಬಳಿಗೆಗಳ ಬೃಹತ್ ವಸ್ತುಪ್ರದರ್ಶನದಲ್ಲಿ ಕಡಿಮೆ ಮೊತ್ತದಲ್ಲಿ ಅಲಂಕಾರಿಕ ಸಾಮಗ್ರಿಗಳು ದೊರೆಯಲಿವೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದ ಅವರು ಸಂಘಟನೆಯ ಕೇಂದ್ರ ವಿಭಾಗ ದೆಹಲಿಯಿಂದ ಹಿಡಿದು ವಿವಿಧ ರಾಜ್ಯಗಳ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ಚಿಂತನ ಮಂಥನ ಸಮಸ್ಯೆ ಪರಿಹಾರೋಪಾಯಗಳನ್ನು ಸಮಾರಂಭಕ್ಕೆ ಆಗಮಿಸುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಹಾಗೂ ಮತ್ತು ಸಚಿವರ ಗಮನಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಸಮಗ್ರ ಮಾಹಿತಿ ನೀಡಿದರು, ತಾಲೂಕ ಘಟಕದ ಕಾರ್ಯದರ್ಶಿ ಸುರೇಶ್ ಪಿ, ಖಜಾಂಚಿ ರವಿತೇಜ ಪಿ ಅಶೋಕ್ ನಾಯಕ್ ಬಾಬು ಫ್ಲವರ್ಸ್ ಮೋಹನ್ ಲೆಕ್ಕಿಹಾಳ ಗುಂಡೂರು ಬಸವರಾಜ್ ಇತರರು ಉಪಸ್ಥಿತರಿದ್ದರು,