Dhamma Dipotsava is a symbol of awareness
ಗಂಗಾವತಿ: ಇಂದು ದಿನಾಂಕ: ೦೨.೦೮.೨೦೨೩ ರಂದು ಧಮ್ಮ ದೀಪ ಕಾರ್ಯಕ್ರಮವು ಹುಸೇನಪ್ಪ ಹಂಚಿನಾಳ ವಕೀಲರು ಅವರ ಮನೆಯಲ್ಲಿ ನಡೆಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದೇವೆಂದ್ರಪ್ಪ ಹೆಗ್ಗಡೆ ಶಹಾಪುರರವರು ಮಾಡಿ, ಧಮ್ಮವೆಂದರೆ ಎಲೆಯ ಮರೆಯ ನಿಧಾನದಂತೆ ಭೂಮಿಯ ಆಳದಲ್ಲಿ ಹರಿಯುವ ನೀರ ಪ್ರವಾಹದಂತೆ. ಧಮ್ಮದ ಬೆಳಕಿನಲ್ಲಿ ಬುದ್ದನೆಡೆ ನಮ್ಮ ನಡೆ. ನಮ್ಮನ್ನು ನಾವು ಬುದ್ಧನಿಗೆ ನಮಿಸುವ ಮೂಲಕ ನಮ್ಮ ಸಂಸ್ಕಾರವನ್ನು ಹೆಚ್ಚಿಸಿಕೊಳ್ಳುವುದು. ಬುದ್ಧನಿಗೆ ಪೂಜೆ, ತ್ರಿಸರಣ, ತ್ರಿವಾರ ವಂದನೆ, ಪಂಚಾAಗ ಪ್ರಣಾಮ, ಪಂಚಶೀಲ ಮತ್ತು ಬುದ್ಧನಿಗೆ ವಂದನೆ ಮಾಡುವ ಮೂಲಕ ನಾವು ಆಚರಿಸುವುದಾಗಿದೆ ಎಂದು ದೇವೇಂದ್ರ ಹೆಗ್ಗಡೆಯವರು ತಿಳಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಆಯುಷ್ಮತಿ ಎನ್.ಡಿ. ವೆಂಕಮ್ಮ ಬಳ್ಳಾರಿ ಇವರು ಮಾಥನಾಡಿ, ಬುದ್ದಂ ನಮಾಮಿ, ಧಮ್ಮಂ ನಮಾಮಿ, ಸಂಘA ನಮಾಮಿ. ಬುದ್ಧ ಅಂದರೆ ಜ್ಞಾನ. ಹಿಂದೆ ಬುದ್ಧರು ಇದ್ದರು ಈಗಲೂ ಇದಾರೆ ಮುಂದೆಯೂ ಬರ್ತಾರೆ, ಅಂತಹ ಬುದ್ಧರಿಗೆ ಶರಣು. ಧಮ್ಮ ಎಂದರೆ ಒಳ್ಳೆಯದು, ಒಳ್ಳೆಯ ವಿಚಾರ ಅಂದರೆ ಸರ್ವರ ಹಿತ. ಆ ವಿಚಾರವೇ ಧಮ್ಮ. ಭಿಕ್ಕು ಸಂಘ ಅದಕ್ಕೆ ಶರಣಾಗುವುದು. ಭಿಕ್ಕುಗಳು ಈ ಲೋಕಕ್ಕೆ ಒಳ್ಳೆಯದನ್ನು ಬಿತ್ತುವರು ಎಂದು ತಿಳಿಸಿದರು.
ಇನ್ನೋರ್ವ ಅತಿಥಿ ಡಾ. ಲಿಂಗಣ್ಣ ಜಂಗಮರಹಳ್ಳಿಯವರು ಮಾತನಾಡಿ, ಕುಟುಂಬ ಸಂಸ್ಕಾರ, ಪ್ರೀತಿ ವಿಶ್ವಾಸ ಮತ್ತು ಗೌರವ ಇದನ್ನು ಆಚರಿಸುವ ಬುದ್ಧ ಧಮ್ಮಕ್ಕೆ ನಾವೆಲ್ಲರೂ ಸಾಕಬೇಕಾದ ನಿಟ್ಟಿನಲ್ಲಿ ಈ ಒಂದು ಸಂಸ್ಕೃತಿಗಳು ನಮ್ಮವಾಗಿಸಿಕೊಳ್ಳಬೇಕಾಗಿದೆ. ಆ ಮೂಲಕ ನಾವು ಗಂಗಾವತಿಯಲ್ಲಿ ಮೊಟ್ಟಮೊದಲ ಬಾರಿಗೆ ಧಮ್ಮ ದೀಪ ಕಾರ್ಯಕ್ರಮವನ್ನು ಆಚರಿಸುವ ಮೂಲಕ ಮನೆ ಮನೆಗೆ ಬುದ್ಧ ಚಿಂತನೆಗಳನ್ನು ತಲುಪಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹುಸೇನಪ್ಪ ಹಂಚಿನಾಳ ಅವರ ಮನೆಯವರು ಈ ಸಂಸ್ಕೃತಿಯನ್ನು ಪಡೆದರು. ಹಾಗೆಯೇ ಡಾ. ಸೋಮಕ್ಕ ಬಸಪ್ಪ ನಾಗೋಲಿ, ರಮೇಶ ಗಬ್ಬೂರ್, ಸಿ.ಕೆ ಮರಿಸ್ವಾಮಿ ಬರಗೂರು, ಮಲ್ಲಿಕಾರ್ಜುನ ಗೋಟೂರು, ವೀರೇಶ, ವೆಂಕಟೇಶ ಹೊಸಮಲ್ಲಿ ಶಿವಪುರ ಮತ್ತು ಹುಸೇನಪ್ಪ ಅವರ ಓಣಿಯ ಎಲ್ಲ ಬಂಧುಗಳು ಭಾಗವಹಿಸಿದ್ದರು.
ಬುದ್ಧನ ದಲಿತ ಚಳುವಳಿ ಹೋರಾಟಗಾರ, ದಲಿತ ಸಾಹಿತಿಗಳಾದ ರಮೇಶ್ ಗಬ್ಬೂರ ಅವರು ಅಂಬೇಡ್ಕರ್ ಮತ್ತು ಬುದ್ದನ ಸಾಹಿತ್ಯ ರೂಪದಲ್ಲಿ ಇರುವ ಹಾಡನ್ನು ಹಾಡಿದರು.