Dr. Lingaraja advises that doctors should work together
ಗಂಗಾವತಿ.22 ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಜಿಲ್ಲಾ ಘಟಕದಿಂದ ಐಎಂಎ ಭವನದಲ್ಲಿ ಶನಿವಾರ ವೈದ್ಯರ ದಿನಾಚರಣೆ ಆಚರಣೆ ಮಾಡಲಾಯಿತು
ನಂತರ ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ ವೈದ್ಯರೆ ಅದ್ರೇ ಜನರಿಗೆ ದೇವರಸಮಾನ ಏಕೆಂದರೆ ಯಾರೇ ಆರೋಗ್ಯದಲ್ಲಿ ಏರುಪೇರು ಆದಾಗ ಮೊದಲ ನೆನಪು ಬರುವುದು ವೈದ್ಯರು ಆಸ್ಪತ್ರೆಗೆ ಬಂದಾಗ ರೋಗಿಗಳೊಂದಿಗೆ ಚನ್ನಾಗಿ ಮಾತನಾಡಿಸಿದ್ರೇ ಬೇಗ ಗುಣಮುಖವಾಗುತ್ತಾರೆ ಆದಕಾರಣ ಯಾರೇ ಇರಲ್ಲಿ ವೈದ್ಯರು ಸರಿಯಾದ ರೀತಿಯಲ್ಲಿ ರೋಗಿಗಳೊಂದಿಗೆ ಬೇವ ಭಾವ ಇರದೆ ನೋಡಿದ್ರೇ ಸಾಕು ವೈದ್ಯರು ಆಗಿದ್ದಕ್ಕೆ ಸಾರ್ಥಕವಾಗುತ್ತದೆ
ಜಿಲ್ಲೆಯಲ್ಲಿ ವೈದ್ಯರ ಸಂಖ್ಯೆ ಬಹಳಷ್ಟು ಕಡಿಮೆ ಇದೆ ಯಾವುದೇ ಸಾರ್ವಜನಿಕರು ಯಾವುದೇ ಕಾರಣಕ್ಕೆ ವೈದ್ಯರಿಗೆ ತೊಂದರೆ ಕೊಟ್ಟರೆ ಅವರಿಗೆ ಕೇಸ್ ದಾಖಲೆಮಾಡುತ್ತೇವೆ,ಹಾಗೂ ರೌಡಿ ಸೀಟ ಓಪನ್ ಮಾಡುತ್ತೇವೆ ಹಾಗೂ ಯಾವುದೇ ಆಸ್ಪತ್ರೆ ಇರಲ್ಲಿ ಅಪಘಾತವಾದಲ್ಲಿ ಆಸ್ಪತ್ರೆಗೆ ಬಂದಾಗ ಅವರದು ಎಮ್.ಎಲ್.ಸಿ.ಬೇಗನೆ ಕೊಟ್ರೇ ಒಳ್ಳೆಯದು ಕೆಲವು ಆಸ್ಪತ್ರೆಯಲ್ಲಿ ವೈದ್ಯರ ಎಮ್.ಎಲ್.ಸಿ.ಬೇಗ ಕೊಡಲ್ಲಾ ಮತ್ತು ಎಮ್.ಎಲ್.ಸಿ.ಏನು ಇರುತ್ತದೆ ಅದನ್ನು ಕೊಡಬೇಕು ಹಾಗೂ ಸಂಬಂಧಿಸಿದ ಮೇಲಾಧಿಕಾರಿಗೆಳಿಗೆ ಬೇಗನೆ ದೂರವಾಣಿ ಮೂಲಕ ಮಾಹಿತಿ ನೀಡಬೇಕು ಎಂದು ಸಲಹೆಯನ್ನು ನೀಡಿದರು.
ನಂತರ ಮುಖ್ಯ ಅಥಿತಿಗಳಾಗಿ ಆಗಮಿಸಿದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಲಿಂಗರಾಜ ಅವರು ಮಾತನಾಡಿ ವೈದ್ಯರು ಒಗ್ಗಟ್ಟಾಗಿ ಕೆಲಸವನ್ನು ಮಾಡಿದ್ರೇ ಯಾವುದೇ ಭಯ ಇರುವುದಿಲ್ಲ ವೈದ್ಯರ ಸಾಮಾನ್ಯ ಜನರಿಗೆ ಒಳ್ಳೆಯ ವರ್ತನೆಯಿಂದ ಕೆಲಸವನ್ನು ಮಾಡಬೇಕು ನಿಮ್ಮೊಂದಿಗೆ ನಾನು ಯಾವುದೇ ತೊಂದರೆ ಬಂದ್ರೆ ನಿಮಗೆ ಬೆಂಬಲವಾಗಿ ನಿಲ್ಲುತ್ತೇನೆ ಮತ್ತು ವೈದ್ಯರಲ್ಲಿ ದ್ವೇಷ ಭಾವನೆಗಳು ಇರಬಾರದು ರೋಗಿಗಳಿಗೆ ಒಳ್ಳೆಯ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಒಳ್ಳೆಯ ಹೆಸರನ್ನು ಪಡೆಯಬೇಕೆಂದು ಸಲಹೆಯನ್ನು ನೀಡಿದರು
ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿ ಕೊಪ್ಪಳ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷರಾದ ಡಾ.ಈಶ್ವರ ಶಿ.ಸವಡಿ ಅವರು ಮಾತನಾಡಿ ಕೊಪ್ಪಳ ಜಿಲ್ಲೆಯ ಎಲ್ಲಾ ನಮ್ಮ ಹಿರಿಯ ವೈದ್ಯರ ಸಲಹೆಯದ ಮೇರಿಗೆ ಎಲ್ಲಾ ನಮ್ಮ ವೃತ್ತಿ ಬಾಂಧವರನ್ನು ಸರಿಸಮಾನವಾಗಿ ಕೈ ಜೋಡಿಸಿ ಕೆಲಸವನ್ನು ಮಾಡುತ್ತೇನೆ ಹಾಗೂ ನಮ್ಮ ಗಂಗಾವತಿ ಸರ್ಕಾರಿ ಆಸ್ಪತ್ರೆ ಮೂರು ಬಾರಿಗೆ ಕಾಯಕಲ್ಪ ಪ್ರಶಸ್ತಿ ಪಡೆಯಲಕ್ಕೆ ನಮ್ಮ ಡಿಹೆಚ್ಓ ಹಾಗೂ ಡಿಹೆಚ್ಓ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಎಂದು ಸಂತೋಷದಿಂದ ಮಾತನಾಡಿದರು ಹಾಗೂ ಜಿಲ್ಲೆಯಲ್ಲಿ ಯಾರೇ ನಮ್ಮ ಸಂಘದ ವೈದ್ಯರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿಲ್ಲಾ ಪ್ರತಿನಿಧಿ ಡಾ.ನಂದಕುಮಾರ,ಜಿಲ್ಲಾ ಗೌರವಾಧ್ಯಕ್ಷ ಡಾ.ಆನಂದ ಗೊಟೋರು.ಜಿಲ್ಲಾ ಕಾರ್ಯದರ್ಶಿ ಡಾ.ನೇತ್ರಾ ಹಿರೇಮಠ. ಖಜಾನೆ ಡಾ.ಶಿವಪ್ರಸಾದ್.ಜಿಲ್ಲಾ ಉಪಾಧ್ಯಕ್ಷರಾದ ಡಾ.ಕಾವೇರಿ.ವೈದ್ಯರಾದ ಗಂಗಾವತಿ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಶರಣಪ್ಪ ಚಕ್ಕೋತಿ. ಡಾ.ಪ್ರಕಾಶ.ಡಾ.ರಚನಾ.ಡಾ.ರಾಮಕೃಷ್ಣ. ಡಾ.ವೆಂಕಟೇಶ. ರವೀಂದ್ರ, ಪ್ರಕಾಶ್, ಶರಣಬಸವ, ಆನಂದ್ ಗೋಟೂರ್, ಸೇರಿದಂತೆ ಇತರರು ಇದ್ದರು