The sea of devotees flowed to the hill Mahadeshwar on the occasion of Bhima's new moon
ಹನೂರು:ತಾಲ್ಲೊಕಿನ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳವರ ಸಹಯೋಗದಲ್ಲಿ ಶ್ರೀ ಮಲೈ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಉತ್ಸವಗಳು ನೆರವೆರಿದವು.
ಅಮಾವಾಸ್ಯೆ ಪ್ರಯುಕ್ತ ಶ್ರೀ ಮಲೆ ಮಹದೇಶ್ವರ ಸ್ವಾಮಿಗೆ ಶೃಂಗಾರ ಮಾಡಲಾಗಿತ್ತು , ನಂತರ ಸಹಸ್ರಾರು ಭಕ್ತಾದಿಗಳ ದರ್ಶನಕ್ಕೆ ಸ್ವಾಮಿಯನ್ನು ಅನುವು ಮಾಡಿಕೊಡಲಾಯಿತು.
ಮಾದಪ್ಪನ ಸನ್ನಿಧಿಯ ಮಂಟಪದ ಸುತ್ತಲೂ ವಿವಿಧ ಹೂಗಳು ಹಣ್ಣು ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು. ಮಾದಪ್ಪನ ದರ್ಶನಕ್ಕೆ ಬಂದ ಭಕ್ತರು ಸನ್ನಿಧಿ ಮಂಟಪದ ಸುತ್ತಲೂ ಮಾಡಲಾಗಿದ್ದ ಅಲಂಕಾರವನ್ನು ನೋಡಿ ಕಣ್ತುಂಬಿಕೊಂಡರು.
ಶ್ರೀ ಕ್ಷೇತ್ರದಲ್ಲಿ ಅಮಾವಾಸ್ಯೆ ಹಿನ್ನೆಲೆ ತಾಲೂಕು ಜಿಲ್ಲೆ ಸೇರಿದಂತೆ ಬೆಂಗಳೂರು ಹಲಗೂರು, ಕನಕಪುರ, ಕೆಂಗೇರಿ ರಾಮನಗರ, ಮಂಡ್ಯ, ಮಳವಳ್ಳಿ, ಮೈಸೂರು, ಕೊಡಗು, ಶಿವಮೊಗ್ಗ, ತಮಿಳುನಾಡು ಭಾಗದಿಂದಲೂ ಲಕ್ಷಾಂತರ ಭಕ್ತಾಸಾಗರ ಹರಿದು ಬರುತ್ತಿದ್ದು ಎಲ್ಲಾರಿಗೂ ಉತ್ತಮ ವ್ಯವಸ್ತೆಯನ್ನು ಮಾಡಲಾಗಿತ್ತು . ಭಕ್ತರಿಗೆ ದಾಸೋಹ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪ್ರಾಧಿಕಾರ ಆಡಳಿತ ಸುಸಜ್ಜಿತವಾಗಿ ವ್ಯವಸ್ಥೆ ಮಾಡಲಾಗಿದ್ದು ಸ್ಥಳಿಯ ಅರಕ್ಷಕ ಠಾಣ ಸಿಬ್ಬಂದಿಯು ಸಹ ಹೆಚ್ವಿನ ಬಿಗಿ ಬದೊಬಸ್ತೂ ಮಾಡಿದರು .