Breaking News

ಶೈಕ್ಷಣಿಕಪ್ರಗತಿಪರಿವರ್ತನಾ ಕಾರ್ಯಕ್ರಮ

Educational Progress Transition Program


ತಿಪಟೂರು : ನವೀನ ಜಾಗೃತಿ ಕಲಾ ಸಂಸ್ಥೆ, ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕಿಬ್ಬನಹಳ್ಳಿ ಹೋಬಳಿ ಘಟಕದ ವತಿಯಿಂದ ” ಶಿಕ್ಷಣ ಸಂಪನ್ಮೂಲ ತಜ್ಞ” ನವೀನ್ ಕಿಲಾರ್ಲಹಳ್ಳಿ (ಪಾವಗಡ) ರವರಿಂದ ಗ್ರಾಮೀಣ ಶಾಲಾ ಮಕ್ಕಳಿಗೆ ನೈತಿಕ ಶಿಕ್ಷಣ ಹಾಗೂ ಸಾಮಾಜಿಕ ಕಳಕಳಿಯ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮವನ್ನು ಕಿಬ್ಬನಹಳ್ಳಿ ಹೋಬಳಿ, ಕುಪ್ಪಾಳಿನ ಶ್ರೀ ಮಲ್ಲಿಕಾರ್ಜುನ ಸಂಯುಕ್ತ ಪದವಿಪೂರ್ವ ಕಾಲೇಜಿನಲ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಗಡಿನಾಡ ಪ್ರತಿಭೆ, ಪ್ರಭಾವಿ ಪತ್ರಕರ್ತ ,ಶ್ರೇಷ್ಠ ಕಲಾವಿದರಾದ ರಾದ ನವೀನ್ ತಮ್ಮ ಜಾಗೃತ ಕಾರ್ಯಕ್ರಮಗಳಿಂದ ಮಕ್ಕಳ ಮನಸ್ಸಿನಲ್ಲಿ ಪ್ರೋತ್ಸಾಹ ಮತ್ತು ಉತ್ಸಾಹ ತುಂಬಿ ಮಾತ ಪಿತೃಗಳಲ್ಲಿ ದೈವ ಭಕ್ತಿ, ಓದಿನಲ್ಲಿ ಆಸಕ್ತಿ, ಉಜ್ವಲ ಭವಿಷ್ಯದಲ್ಲಿ ಮುಕ್ತಿ ಪಡೆಯುವ ಅಮೂಲ್ಯ ವಾಕ್ಚಾತರ್ಯಗಳಿಂದ ಮಕ್ಕಳ ಹಾಗೂ ಶಿಕ್ಷಕರ ಹೃದಯ ಸೂರೆಗೊಳಿಸಿದರು, ಕರ್ತವ್ಯ ಪ್ರಜ್ಞೆ ಸಾಮಾಜಿಕ ಕಳಕಳಿ ಇದ್ದಾಗ ಮಾತ್ರ ವಿದ್ಯೆ ವಿನಯ ವಿದ್ಯಾರ್ಥಿಗಳನ್ನು ಬಹು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂದು ತಮ್ಮ ಸ್ವಜಾಗೃತಿಯನ್ನು ಶಾಲಾ ಕಾಲೇಜು ಮಕ್ಕಳಲ್ಲಿ ಮೂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿಎಸ್ ಮಹೇಶ್ , ರವರು ಮಾತನಾಡಿ ಗ್ರಾಮೀಣ ಮಕ್ಕಳಿಗೆ ಅತ್ಯವಶ್ಯಕವಾಗಿ ಇಂತ ನೈಜ ಶಿಕ್ಷಣ ಜಾಗೃತಿ ಕಾರ್ಯಕ್ರಮ ಅತ್ಯಂತ ಅವಶ್ಯವಾಗಿದೆ, ಇಂಥ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಿಸ ಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ರೈತಕವಿ ಡಾ.ಪಿ ಶಂಕರಪ್ಪ ಬಳೇಕಟ್ಟೆಯವರು “ಎತ್ತಣಿಂದ ಎತ್ತಣ ಸಂಬಂಧವಯ್ಯ ಎಲ್ಲಿಯ ಕೋಗಿಲೆ ಎಲ್ಲಿಯ ಮಾಮರ ಎಲ್ಲಿಯ ಪಾವಗಡ ಎಲ್ಲಿಯ ಕಲ್ಪತರು ನಾಡು ಎಂದು ಪ್ರಶಂಶಿಸುತ್ತಾ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಯಂ ಸೇವಕರಾಗಿ ಬಹು ದೂರದಿಂದ ಬಂದು ತಮ್ಮ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ನವೀನ್ ರವರಿಗೆ ಭಗವಂತ ಇನ್ನು ಹೆಚ್ಚು ಶಕ್ತಿ ಕೊಡಲಿ ಎಂದು ಹಾರೈಸಿದರು ಕಾರ್ಯಕ್ರಮದಲ್ಲಿ ಪಿ ಡಿ ಓ ವೇದಮೂರ್ತಿ, ಪ್ರಾಂಶುಪಾಲ ಪಾಟೀಲ್ , ಮುಖ್ಯ ಶಿಕ್ಷಕಿ ಬಾಲನಾಗಮ್ಮ ಉಪನ್ಯಾಸಕರಾದ ಚಂದ್ರಶೇಖರ್, ಕೃಷ್ಣಪ್ಪ ರಮೇಶ್, ಸ.ಶಿಕ್ಷಕರಾದ. ಶೇಖರಪ್ಪ, ಕೆ ಟಿ ನರಸಿಂಹಮೂರ್ತಿ ಹಾಗೂ ಶಾಲಾ ಮಕ್ಕಳು ನವೀನ್ ಕಿಲಾರ್ಲಹಳಿ ರವರಿಗೆ ಶಾಲಾವತಿಯಿಂದ ಸನ್ಮಾನಿಸುವುದರ ಮೂಲಕ ಗೌರವ ಸಮರ್ಪಣೆ ಮಾಡಿದರು.

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.