Breaking News

ಕಾರಟಗಿಯಲ್ಲಿ ಉಚಿತ ಹೃದಯರೋಗ,ನರರೋಗ, ಕ್ಯಾನ್ಸರ್, ಮೂತ್ರಪಿಂಡದಕಲ್ಲುಕಾಯಿಲೆಗಳ ತಪಾಸಣಾ ಶಿಬಿರ.

Free check-up camp for heart disease, neuropathy, cancer, kidney stones in Karatagy.

ಕಾರಟಗಿ: ಧನ್ವಂತರಿ ಹೆಲ್ತ್ ಸೆಂಟರ್, ಬಾಲಾಜಿ ಮೆಡಿಕಲ್ಸ್, ಶ್ರೀ ಸ್ವಾಮಿ ವಿವೇಕಾನಂದಸೇವಾ ಸಂಘ, ಶ್ರೀರಾಮನಗರ, ಇವರ ಸಹಕಾರದೊಂದಿಗೆ ಬೆಂಗಳೂರುನಗರದ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆವತಿಯಿಂದ ಶನಿವಾರ ಪಟ್ಟಣದಮುತ್ಯಾಲಪ್ಪ ಕಾಂಪ್ಲೆಕ್ಸ್ನಲ್ಲಿ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮಹಮ್ಮಿಕೊಳ್ಳಲಾಯಿತು.ಬಳಿಕ ಎಪಿಎಂಸಿ ಮಾಜಿ ಸದಸ್ಯ ಜಿ. ರಾಮಮೋಹನ್ ಮಾತನಾಡಿ ಬಡವರಅನುಕೂಲಕ್ಕಾಗಿ ಈ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ನುರಿತವೈದ್ಯರು ಆಗಮಿಸಿದ್ದಾರೆ. ಹೃದಯರೋಗ, ನರರೋಗ, ಕ್ಯಾನ್ಸರ್,ಮೂತ್ರಪಿಂಡದ ಕಲ್ಲು ಸೇರಿದಂತೆ ಯಾವುದೇ ಕಾಯಿಲೆಗಳಿದ್ದಲ್ಲಿ ಉಚಿತಚಿಕಿತ್ಸೆ ನೀಡಲಾಗುವುದು. ಜತೆಗೆ ಉಚಿತ ಔಷಧಿಯನ್ನು ಕೂಡಾವಿತರಿಸಲಾಗುವುದು. ಇನ್ನು ಶಿಬಿರದಲ್ಲಿ ತಜ್ಞರ ಸಲಹೆ ಮೇರೆಗೆ ಉಚಿತವಾಗಿಇ.ಸಿ.ಜಿ, ೨ಡಿ ಎಕೋ ಸ್ಕ್ಯಾನಿಂಗ್, ಶುಗರ್ ಪರೀಕ್ಷೆ ಮಾಡಲಾಗುವುದು.ಯಾವುದಾದರು ಗಂಭೀರ ಕಾಯಿಲೆಗಳಿದ್ದಲ್ಲಿ ಅಂತವರಿಗೆ ಬೆಂಗಳೂರಿನಸಪ್ತಗಿರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುವುದು ಇದರಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಶಿಬಿರದಲ್ಲಿ ತಜ್ಞರ ಸಲಹೆ ಮೇರೆಗೆ ಉಚಿತವಾಗಿ ಇ.ಸಿ.ಜಿ, ೨ಡಿ ಎಕೋ ಸ್ಕ್ಯಾನಿಂಗ್,ಶುಗರ್ ಪರೀಕ್ಷೆ ಮಾಡಲಾಗುವುದು. ಈ ವೇಳೆ ವಿವೇಕಾನಂದ ಸೇವಾಸಂಘದ ಅಧ್ಯಕ್ಷ ಗರಪಾಟಿ ರಾಮಕೃಷ್ಣ ಮಾತನಾಡಿ ಧನ್ವಂತರಿ ಆಸ್ಪತ್ರೆಹಾಗೂ ಬಾಲಾಜಿ ಮೆಡಿಕಲ್ ಸ್ಟೋರ್ ಹಾಗೂ ವಿವೇಕಾನಂದ ಸೇವಾ ಸಂಘದಿAದಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಶಿಬಿರದಲ್ಲಿ ೩೦೦ಕ್ಕು ಅಧಿಕ ರೋಗಿಗಳಿಗೆ ತಪಾಸಣೆ ಮಾಡಿ ಉಚಿತ ಔಷದಿ ನೀಡಿದ್ದೇವೆ. ಅದರಲ್ಲಿ೨೦ ಜನರು ಹೃದಯ ಸಂಬAಧಿ ಕಾಯಿಲೆಗೆ ಶಸ್ತçಚಿಕಿತ್ಸೆಗೆ ಹೆಸರುನೋಂದಾಯಿಸಿದ್ದು. ಅವರನ್ನು ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಕರೆದೋಯ್ದು, ಚಿಕಿತ್ಸೆ ನೀಡಲಾಗುವುದು ಮತ್ತು ಈ ಶಿಬಿರಯಶಸ್ವಿಯಾಗಲು ಸಹಕರಿಸಿದ ಬಾಲಾಜಿ ಮೆಡಿಕಲ್ ಸ್ಟೋರ್ ನಾಗೇಶ್ವರಾವ್‌ಹಾಗೂ ಜಿ. ರಾಮ್‌ಮೋಹನ್ ಮತ್ತು ಸಪ್ತಗಿರಿ ಅಸ್ಪತ್ರೆಯವರಿಗೆ ನಮ್ಮ. ವಿವೇಕಾನಂದ ಸೇವಾ ಸಂಘದಿAದ ಧನ್ಯವಾಧಗಳನ್ನು ತಿಳಿಸುತ್ತೇನೆಎಂದರು.ಈ ವೇಳೆ ಸಪ್ತಗಿರಿ ಆಸ್ಪತ್ರೆ ವೈದ್ಯರಾದ ವಿಶ್ವನಾಥ ರೆಡ್ಡಿ,ರಾಘವೇಂದ್ರ, ಪ್ರವೀಣ್, ಜಿ, ರಾಮಕೃಷ್ಣ ಅಧ್ಯಕ್ಷರು, ಸ್ಥಾಮಿವಿವೇಕಾನಂದ ಸೇವಾ ಸಂಘ ಶ್ರೀರಾಮನಗರ, ಬಾಲಾಜಿ ಮೆಡಿಕಲ್ ಮಾಲೀಕರಾದನಾಗೇಶ್ವರರಾವ್, ಎಂ. ನಾಗೇಶ್, ರಮೇಶ್ ವಕೀಲರು, ನಾಗನಗೌಡ, ಜಿ.ಯಾದವೇಂದ್ರ ಶರಣಪ್ಪ ಕಂಡ್ರಿ ಗಾಂಧಿ ಸೇರಿದಂತೆ ವೈದ್ಯಾದಿಕಾರಿಗಳಾದಹನುಮಂತಯ್ಯ, ರತಿ ರಂಜನ್, ಕೆವಿನ್ ವರ್ಷಿಣಿ, ಭಾನು ವಿಜಯ ಹಾಗೂಶಿಬಿರದ ವ್ಯವಸ್ಥಾಪಕರಾದ ವಿಶ್ವನಾಥ ರೆಡ್ಡಿ ಇತರರಿದ್ದರು.-ಸಹಿ-(ಜಿ. ರಾಮಕೃಷ್ಣ)

ಜಾಹೀರಾತು

About Mallikarjun

Check Also

ಜು. 16 ರಂದು ಉಚಿತ ಕೃತಕ ಅಂಗಾಂಗ ಜೋಡಣಾ ಶಿಬಿರ

Ju. Free Prosthesis Camp on 16th ಬೆಂಗಳೂರು; ನಾರಾಯಣ್‌ ಸೇವಾ ಸಂಸ್ಥಾನ್‌ ಸೇವಾ ಸಂಸ್ಥೆ ಯಿಂದ ಜುಲೈ 16 …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.