
ಗಂಗಾವತಿಯ ೨೮ನೇ ವಾರ್ಡಿನ ಜೈಭೀಮ್ ನಗರದಮಹಿಳೆಯರಿಗೆ ೧೫೧ ಮನೆಗೆ ಹಕ್ಕುಪತ್ರ ವಿತರಣೆ

Distribution of title deeds for 151 houses to women of Jaibhim Nagar, Ward 28, Gangavathi
ಗಂಗಾವತಿ: ಹುಬ್ಬಳ್ಳಿ ನಗರದಲ್ಲಿ ಆಯೋಜಿಸಿದ್ದ ೪೨,೩೪೫ ಮನೆಗಳಹಕ್ಕುಪತ್ರ ವಿತರಣಾ ಕಾರ್ಯಕ್ರಮ ಜರುಗಿದ ಬಳಿಕ ಗಂಗಾವತಿಯ
೨೮ನೇ ವಾರ್ಡಿನಲ್ಲಿ ೧೫೧ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆಯನ್ನು ಎಫ್
ರಾಘವೇಂದ್ರ ನಗರಸಭೆ ಸದಸ್ಯರು ಮನೆಯ ಮುಖ್ಯಸ್ಥರಾದ
ಮಹಿಳೆಯರಿಗೆ ಹಂಚಿದರು. ಈ ನಿವಾಸಿಗಳ ೨೫ ವರ್ಷದ ಕನಸು ನನಸಾಗಿದೆ.
ಮಾನ್ಯ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕ
ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹಾಗೂ ವಸತಿ
ಸಚಿವರಾದ ಜಮೀರ್ ಅಹ್ಮದ್ ಅವರು ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ
ಮಂಡಳಿಯು ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರ ಸಮ್ಮುಖದಲ್ಲಿ
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯು ಹುಬ್ಬಳ್ಳಿ ನಗರದಲ್ಲಿ
ಆಯೋಜಿಸಿದ್ದ ೪೨,೩೪೫ ಮನೆಗಳ ಹಕ್ಕು ಪತ್ರ ವಿತರಣಾ
ಕಾರ್ಯಕ್ರಮಕ್ಕೆ ಗಂಗಾವತಿಯಿAದ ೪ ಸರ್ಕಾರಿ ಬಸ್ ತುಂಬಾ
ಮಹಿಳೆಯರನ್ನು ಹುಬ್ಬಳ್ಳಿಯ ಮಹಾಸಭಾ ಕಾರ್ಯಕ್ರಮಕ್ಕೆ
ನಗರಸಭೆ ಸದಸ್ಯರಾದ ಎಫ್. ರಾಘು ಅವರು ಹೋಗಿದ್ದರು. ಆ
ಸಭೆಯಲ್ಲಿ ಲಕ್ಷಾಂತರ ಜನ ಮಹಿಳೆಯರೇ ಇದ್ದದ್ದನ್ನು ಕಂಡು
ಬೆರಗಾದರು, ಬಳಿಕ ಜೈಭೀಮ್ ನಗರಕ್ಕೆ ಸಂಬAಧಪಟ್ಟ ಅಧಿಕಾರಿಗಳಿಗೆ
ಭೇಟಿಯಾಗಿ ಹಕ್ಕುಪತ್ರಗಳನ್ನು ಪಡೆದು ತಂದರು. ನಗರಸಭೆ
ಸದಸ್ಯರಾದ ಎಫ್. ರಾಘವೇಂದ್ರ ಹಾಗೂ ಸಮಾಜದ ಮುಖಂಡರು ದೊಡ್ಡ
ಭೋಜಪ್ಪ, ಮುದಿಯಪ್ಪ ಪೂಜಾರಿ, ತಿಮ್ಮಣ್ಣ ಕನಕಗಿರಿ ಯುವ
ಮುಖಂಡರು ಅಧಿಕಾರಿಗಳು ಸೇರಿದಂತೆ ನಗರದ ನಿವಾಸಿಗಳಿಗೆ ಜನೇವರಿ ೩೦
ರಂದು ಜೈಭೀಮ್ ನಗರದ ಮುಖ್ಯಸ್ಥರಾದ ಹೆಸರಿನಲ್ಲಿರುವಂಥ
ಹಕ್ಕುಪತ್ರವನ್ನು ವಿತರಿಸಿದರು.
ಫೆಬ್ರವರಿ-೬ ರಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ
ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರು ಗಂಗಾವತಿಯ ಜೈಭೀಮ್
ನಗರದ ೨೮ನೇ ವಾರ್ಡಿನಲ್ಲಿ ಆಗಮಿಸಿ ನಗರದ ನಿವಾಸಿಗಳೊಂದಿಗೆ
ಕುಶಲೊಪರಿಯನ್ನು ವಿಚಾರಿಸುತ್ತ ಅವರೊಂದಿಗೆ ಮಾತನಾಡುತ್ತಾ,
ಹಕ್ಕುಪತ್ರವನ್ನು ನೀಡಿದ್ದಾರಾ, ೧೫೧ ಮಹಿಳೆಯರು ಪಡೆದಿದ್ದೀರಾ.. ಎಂದು
ಮುಗುಳ್ನಗೆಯಿAದ ಕೇಳಿದರು. ಮಹಿಳೆಯರು ಹೌದು ಸ್ವಾಮಿ ೧೫೧
ಮನೆಗಳಿಗೂ ಹಕ್ಕುಪತ್ರವನ್ನು ನೀಡಿದ್ದಾರೆ ಎಂದು ನಗುತ್ತಾ
ಉತ್ತರವನ್ನು ನೀಡಿದರು.
ಬಳಿಕ ನಗರದ ನಿವಾಸಿಗಳು ಸೇರಿದಂತೆ ಮುಖಂಡರುಗಳು
ಯುವಕರು ಮಹಿಳೆಯರು ಪ್ರಸಾದ್ ಅಬ್ಬಯ್ಯ ಅವರಲ್ಲಿ ೩೦
ವರ್ಷಗಳಿಂದ ಇದ್ದ ಸಮಸ್ಯೆಗೆ ಪ್ರತಿಫಲ ಇಂದು ಪರಿಹಾರವಾಯಿತು ಎಂದು
ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ ಅವರಿಗೆ ಎಫ್. ರಾಘವೇಂದ್ರ ಸಮಾಜದ
ಮುಖಂಡರುಗಳಾದ ದೊಡ್ಡ ಭೋಜಪ್ಪ, ಮುದಿಯಪ್ಪ ಪೂಜಾರಿ,
ತಿಮ್ಮಣ್ಣ ಕನಕಗಿರಿ ಹಾಗೂ ಯುವ ಮುಖಂಡರುಗಳು ಅಧಿಕಾರಿಗಳು
ಸೇರಿದಂತೆ ನಿವಾಸಿಗಳಿಂದ ಸನ್ಮಾನಿಸಲಾಯಿತು.
ಇದಕ್ಕೂ ಪೂರ್ವದಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ
ಹಿರೇಜಂತಕಲ್ ಗಂಗಾವತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ
ವಿದ್ಯಾರ್ಥಿಗಳಾದ ಅವರು ಹಾಗೂ ಇಂದು ಹುಬ್ಬಳ್ಳಿ ಧಾರವಾಡ ಮಹಾನಗರದ
ಹಾಲಿ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ತಾವು ಓದಿದ ಶಾಲೆಯನ್ನು
ನೆನಪಿಸಿಕೊಂಡು ಶಾಲೆಗೆ ಭೇಟಿ ನೀಡಿದರು. ಶಾಲೆಯ ಸರ್ವೋತ್ತಮುಖ
ಅಭಿವೃದ್ಧಿಗಾಗಿ ಹಣಕಾಸಿನ ಸಹಾಯವನ್ನು ನೀಡುವ ಆಶ್ವಾಸನೆಯನ್ನು
ನೀಡುವುದರ ಜೊತೆಗೆ ಏಳನೇ ತರಗತಿಯ ವಿದ್ಯಾರ್ಥಿ ಕುಮಾರ್
ಮಣಿಕಂಠ ತಂದೆ ವಿಶ್ವನಾಥ್ ತಾಯಿ ಸಾವಿತ್ರಿ ಅವರಿಗೆ ಹುಟ್ಟಿನಿಂದ ಎರಡು ಕಣ್ಣು
ಕಾಣಿಸುವುದಿಲ್ಲ, ಆ ಮಗುವನ್ನು ಅವಲೋಕಿಸಿದ ಶಾಸಕರು ಅವರ ಮುಂದಿ
ನ ಭವಿಷ್ಯಕ್ಕಾಗಿ ಹಾಗೂ ಚಿಕಿತ್ಸೆಗಾಗಿ ರೂ. ೫೦,೦೦೦ ಗಳನ್ನು ದಾನವನ್ನಾಗಿ
ನೀಡಿದರು. ಅವರಿಗೆ ಶಾಲೆಯ ಮುಖ್ಯ ಗುರುಗಳು ಸಿಬ್ಬಂದಿ ವರ್ಗ ಹಾಗೂ
ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಮತ್ತು ಪಾಲಕರ ಪರವಾಗಿ ಹುಸೇನಪ್ಪ
ಹಂಚಿನಾಳ ವಕೀಲರು, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ರಮೇಶ್ ಮಾಗಿ, ರಾಮು ಕಿರಿಕಿರಿ,
ಎಸ್.ಡಿ.ಎಂ.ಸಿ ಅಧ್ಯಕ್ಷ ಜಡಿಯಪ್ಪ, ಆರತಿ ವೀರೇಶ, ಆಂಜನೇಯ, ತಿಮ್ಮಣ್ಣ
ಮುಂಡಸ್ತ, ಹರೀಶ್ ಚಲವಾದಿ ಹಿರೇಜಂತಕಲ್ ರೇಣಪ್ಪ, ಗೋವಿಂದಪ್ಪ ತುಂಬು
ಹೃದಯದ ಧನ್ಯವಾದಗಳು ತಿಳಿಸಿದರು.
ನಂತರ ನಗರಸಭೆಯ ಹಿರಿಯ ಸದಸ್ಯರಾದ ಷಣ್ಮುಖಪ್ಪ ಅವರ
ನಿವಾಸಕ್ಕೆ ಭೇಟಿ ನೀಡಿ ಕುಶಲೊಪರಿಯನ್ನು ವಿಚಾರಿಸಿದರು. ಜೈಭೀಮ್
ನಗರದ ನಿವಾಸಿಗಳಿಗೆ ೩೦ ವರ್ಷಗಳ ಕನಸನ್ನು ಈಡೇರಿಸಿದ ಅಧಿಕಾರಿಗಳಿಗೆ
ಎಫ್. ರಾಘವೇಂದ್ರ ಅವರು ಪ್ರಸಾದ್ ಅಬ್ಬಯ್ಯ ಶಾಸಕರು ಹುಬ್ಬಳ್ಳಿ
ಅವರಿಂದ ಸನ್ಮಾನಿಸಲಾಯಿತು.
ಎಫ್ ರಾಘವೇಂದ್ರ ಅವರ ತಂದೆಯವರಾದ ಷಣ್ಮುಖಪ್ಪ ಅವರ
ಕುಟುಂಬದವರನ್ನು ಮಾತನಾಡಿಸಿದ ಬಳಿಕ ಕರ್ನಾಟಕ ಕೊಳಚೆ ಅಭಿವೃದ್ಧಿ
ಮಂಡಳಿಯ ಅಧ್ಯಕ್ಷರು ಹಾಗೂ ಹುಬ್ಬಳ್ಳಿಯ ಶಾಸಕರಾದ ಸನ್ಮಾನ್ಯ
ಪ್ರಸಾದ್ ಅಬ್ಬಯ್ಯ ಅವರಿಗೆ ಎಫ್. ರಾಘವೇಂದ್ರ ಅವರು ಬೆಳ್ಳಿಯ
ಗಜವನ್ನು ಕಾಣಿಕೆಯಾಗಿ ನೀಡುವುದರ ಮೂಲಕ ಕೃತಜ್ಞತೆಗಳನ್ನು
ತೋರಿದರು.
ವರದಿ:




