Breaking News

ಡಾ.ರಾಯಲು ಅವರ ‘ಸಾಯಿ ಪಾದುಕಾ’ ನೂತನ ಆಸ್ಪತ್ರೆ ಆರಂಭ.

Dr. Rayalu's new hospital 'Sai Paduka' started.

ಗಂಗಾವತಿ: ಮಾಜಿ ಸಚಿವ ಶ್ರೀರಂಗದೇವರಾಯಲು ಮತ್ತು ಶ್ರೀಮತಿ ಲಲಿತಾ ರಾಣಿಯವರ ಎರಡನೇ ಪುತ್ರ ಡಾ.ವೀರ ಸಿಂಹ ನರಸಿಂಹ ದೇವರಾಯಲು ಅವರು ಆನೆಗುಂದಿ ರಸ್ತೆಯಲ್ಲಿ ಗುರುವಾರ ಹೊಸದಾಗಿ ತಮ್ಮ ಆಸ್ಪತ್ರೆ ಆರಂಭಿಸಿದರು.

ಜಾಹೀರಾತು

ಶಸ್ತ್ರ ಚಿಕಿತ್ಸಕರಾದ ಡಾ.ರಾಯಲು,ಲ್ಯಾಪ್ರೋಸ್ಕೋಪಿಕ್‌ ತಜ್ಞರಾಗಿದ್ದು ,ಹತ್ತು ವರ್ಷಗಳ ಕಾಲ ವಿದೇಶದಲ್ಲಿ ಸೇವೆ ಸಲ್ಲಿಸಿದ್ದಾರೆ.ಈ ಮೊದಲು ಹೊಸಪೇಟೆ ನಗರದಲ್ಲಿ ತಮ್ಮ ಆಸ್ಪತ್ರೆ ಆರಂಭಿಸಿದ್ದ ಇವರು ಇದೀಗ ಗಂಗಾವತಿ ನಗರದಲ್ಲಿ ನೂತನವಾಗಿ ಆಸ್ಪತ್ರೆ ಆರಂಭಿಸಿದ್ದಾರೆ.

ಇದುವರೆಗೂ ಗಂಗಾವತಿ ಭಾಗದ ಜನತೆ ಲ್ಯಾಪ್ರೊಸ್ಕೋಪಿಕ್ ಚಿಕಿತ್ಸೆಗಾಗಿ ಬೇರೆ ಬೇರೆ ಊರಿನ ವೈಧ್ಯರನ್ನು ಅವಲಂಭಿಸಬೇಕಾಗಿತ್ತು.ಇದೀಗ ಗಂಗಾವತಿ ನಗರದಲ್ಲಿಯೇ ಲ್ಯಾಪ್ರೋಸ್ಕೋಪಿಕ ತಜ್ಞರು ಲಭ್ಯವಾಗಲಿದ್ದಾರೆ.

ನೂತನ ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯ ಔಷಧ ತಜ್ಞರ ಸಂಘದ ಅಧ್ಯಕ್ಷ ಮತ್ತು ರಾಜ್ಯ ಔಷಧ ವ್ಯಾಪಾರಿಗಳ ಸಂಘದ ಉಪಾಧ್ಯಕ್ಷ ಅಶೋಕಸ್ವಾಮಿ ಹೇರೂರ, ತುಂಗಭದ್ರಾ ಕಾಡಾ ಮಾಜಿ ಅಧ್ಯಕ್ಷ ಎಚ್.ಗಿರೇಗೌಡ, ನ್ಯಾಯವಾದಿ ಸಂಧ್ಯಾ ಪಾರ್ವತಿ ಮತ್ತು ಸ್ಥಳೀಯ ಔಷಧ ವಿತರಕ ನಾಗರಾಜಸ್ವಾಮಿ ಡಾ.ರಾಯಲು ಅವರಿಗೆ ಶುಭ ಕೋರಿದರು.ಶ್ರೀಮತಿ ಲಲಿತಾ ರಾಣಿ ಮತ್ತಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

About Mallikarjun

Check Also

Screenshot 2025 07 14 17 31 49 82 6012fa4d4ddec268fc5c7112cbb265e7

ಹೆಣ್ಣುಮಕ್ಕಳು ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿ ಇತಿಹಾಸ ನಿರ್ಮಿಸಿದ ಸಂಧರ್ಭ ಗಂಗಾವತಿ ಯಲ್ಲಿ ಸಂಭ್ರಮಾಚರಣೆ

Celebrations in Gangavathi as girls create history by travelling 500 crore times for free in …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.