The newly formed union will strive for the prosperity and development of the employees.
ವರದಿ :ಬಂಗಾರಪ್ಪ ಸಿ
ಹನೂರು: ತಾಲೂಕಿನ ಪ್ರಸಿದ್ದ ಯಾತ್ರ ಸ್ಥಳವಾದ ಶ್ರೀ ಮಲೆ ಮಹದೇಶ್ವರಸ್ವಾಮಿ ಅಭಿವೃದ್ಧಿ ಪ್ರಾಧಿಕಾರ ನೌಕರರ ಹಿತ ರಕ್ಷಣಾ ಸಂಘ ಇವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಅವರು ಶನಿವಾರ ಅಭಿನಂದನೆ ಸಲ್ಲಿಸಿದರು.
ನಂತರ ಮಾತನಾಡಿದ ಅಧ್ಯಕ್ಷ ಜನಾರ್ಧನ್ ನಮ್ಮ ಸಂಘವು ನೌಕರರ ಏಳಿಗೆಗೆ ಹಾಗೂ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು, ನೌಕರರಿಗೆ ಸರಿಯಾಗಿ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ ಆದ್ದರಿಂದ ಸಂಘದ ಮುಖಾಂತರ ಸರ್ಕಾರಿ ಸವಲತ್ತುಗಳನ್ನು ತಲುಪಿಸಲು ಪ್ರಯತ್ನಿಸುತ್ತೇವೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವಂತಹ ಭಕ್ತಾದಿಗಳಿಗೆ ಹೆಚ್ಚಿನ ಸೇವೆಯನ್ನು ನೀಡುವುದಕ್ಕೆ ಸಂಘವು ಸಿದ್ಧವಾಗಿರುತ್ತದೆ. ಪ್ರಾಧಿಕಾರದ ಹಿತಕ್ಕಾಗಿ ನಮ್ಮ ಸಂಘವು ಶ್ರಮಿಸುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಎಂಪಿ ಗೋಪಾಲ್, ಉಪಾಧ್ಯಕ್ಷರಾದ ಮಹದೇವಸ್ವಾಮಿ (ಸರಗೂರು) ಪ್ರಧಾನ ಕಾರ್ಯದರ್ಶಿ ಎಂ. ಸ್ವಾಮಿ, ಖಜಾಂಜಿ ಮಹದೇವ ಪ್ರಭು ಲೆಕ್ಕಪರಿಶೋಧಕರು ವಿ ಮಹದೇವಸ್ವಾಮಿ, ಸಂಘಟನಾ ಕಾರ್ಯದರ್ಶಿ ಎಸ್ .ಮಹೇಶ್ ಕುಮಾರ್ ఎನ್ ನಾಗರಾಜು,
ಮಾದೇಶ.ಜಿ, ಮಹಾಲಿಂಗನಕಟ್ಟೆ ಸುಮಿತ್ರ ಬಾಯಿ ಮಹದೇವಸ್ವಾಮಿ, ಉಮೇಶ್, ಎಂ ಶಿವಕುಮಾರ್ (ಅರವೆ), ಜೋಗಿನಾಯ್ಕ, ನಾಗೇಂದ್ರ, ಪಾಳ್ಯ ಕುಮಾರ್, ಟೈಪಿಸ್ಟ್ ನಾಗರಾಜು. ಮಹೇಂದ್ರ, ಗುಂಡೂರಾಜ್ ಸೇರಿದಂತೆ ಇನ್ನಿತರರು ಹಾಜರಿದ್ದರು.