Breaking News

ನಮ್ಮ ಅಂಗನವಾಡಿ ರೇಡಿಯೋ ವಿಶೇಷ ಕಾರ್ಯಕ್ರಮ : ಶುಭಹಾರೈಸಿದ ತಿಪ್ಪಣ್ಣ ಸಿರಸಗಿ

Our Anganwadi Radio Special Program: Greetings from Tippanna Sirasagi

ಜಾಹೀರಾತು

ಕಾರ್ಯಕ್ರಮದ ಗ್ರೂಪ್ ಫೋಟೊ 300x194

ಗಂಗಾವತಿ, ಜನವರಿ 10;ಗಂಗಾವತಿ ನಗರದ 30ನೇ ವಾರ್ಡಿನಲ್ಲಿರುವ ಗ್ರಾಮೀಣ ಭಾರತಿ 90.4ಎಫ್‌ ಎಂ ರೇಡಿಯೋ ನಿಲಯದಲ್ಲಿ ಜನವರಿ 09 ರಂದು ಮದ್ಯಾಹ್ನ 12 ಗಂಟೆಗೆ ʼನಮ್ಮ ಅಂಗನವಾಡಿʼ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕುರಿತಾದ 2ನೇ ಸಂಚಿಕೆಯ ಕಾರ್ಯಕ್ರಮ ಇದಾಗಿತ್ತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೊಪ್ಪಳ ಜಿಲ್ಲಾ ಉಪನಿರ್ದೇಶಕರಾದ ತಿಪ್ಪಣ್ಣ ಪಿ ಸಿರಸಗಿ ಅವರು ನೇರಪ್ರಸಾರದ ರೇಡಿಯೋ ಕಾರ್ಯಕ್ರಮದಲ್ಲಿ ಕರೆಯ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿ ಮಾತನಾಡಿದರು.

ನಂತರದಲ್ಲಿ ಗಂಗಾವತಿ ನಗರದ 24, 25 ಮತ್ತು 26ನೇ ವಾರ್ಡಿನ ಅಂಗನವಾಡಿ ಮಕ್ಕಳು ಶಿಶುಗೀತೆಗಳನ್ನು ಹಾಡಿದರು.  ‘ಅಂಗನವಾಡಿ ಶಾಲಾ ಪೂರ್ವ ಶಿಕ್ಷಣ’ ಕುರಿತು ಹಿರಿಯ ಮೇಲ್ವಿಚಾರಕಿ ವಿದ್ಯಾವತಿ  ಮಾಹಿತಿ ಹಂಚಿಕೊಂಡರು.

ಮೇಲ್ವಿಚಾರಕಿ ಚಂದ್ರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇಡಿಯೋ ನಿರೂಪಕಿ ಹಾಗೂ ನಿಲಯ ವ್ಯವಸ್ಥಾಪಕಿ ಲಾವಣ್ಯ ಅಂಚಕಟ್ಲು ಕಾರ್ಯಕ್ರಮ ನಿರೂಪಿಸಿದರು.

ಈ ವೇಳೆ ನಿಲಯ ನಿರ್ದೇಶಕರಾದ ರಾಘವೇಂದ್ರ ತೂನ, ನಗರದ 24, 25 ಮತ್ತು 26ನೇ ವಾರ್ಡಿನ ಅಂಗನವಾಡಿ ಮಕ್ಕಳು, ಪಾಲಕರು ಹಾಗೂ ಅಂಗನವಾಡಿ ಶಿಕ್ಷಕಿಯರಾದ ಶಿವಬಸಮ್ಮ, ಮೆಹಮೂದಾ, ಮತ್ತು ನಾಗಮ್ಮ ಉಪಸ್ಥಿತರಿದ್ದರು.

About Mallikarjun

Check Also

img20250929192755.jpg

ಕಲ್ಯಾಣ ಕ್ರಾಂತಿ ಕಥಾ ಪಠಣ ಚಲವಾದಿ ಓಣಿಯ ಯಮುನೂರಪ್ಪ ಚಲವಾದಿ ಯವರ ಮನೆಯಲ್ಲಿ ಜರುಗಿತು.

The Kalyana Kranti Katha recitation took place at the house of Yamunurappa Chalavadi of Chalavadi …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.