Breaking News

ನವ ಕರ್ನಾಟಕ ರಾಜ್ಯ ಕಾರ್ಮಿಕರ ಒಕ್ಕೂಟದ ವತಿಯಿಂದ ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರ

Health Checkup and Training Camp by New Karnataka State Workers Union

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು


ತಿಪಟೂರು : ಕಿಬ್ಬನಹಳ್ಳಿ ಹೋಬಳಿ, ಕುಪ್ಪಾಳು ಗ್ರಂಥಾಲಯದ ಆವರಣದಲ್ಲಿ ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಒಕ್ಕೂಟ ಮತ್ತು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ವತಿಯಿಂದ ತಿಪಟೂರು ತಾಲೂಕಿನ ಕಟ್ಟಡ ಮತ್ತು ಇತರೆ ಕೂಲಿ ಕಾರ್ಮಿಕರ ಆರೋಗ್ಯದ ಹಿತ ದೃಷ್ಟಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ತರಬೇತಿಯನ್ನು ತಿಪಟೂರು ತಾಲೂಕು ಘಟಕವು ಸ್ಥಳಿಯರ ಸಹಕಾರದೊಂದಿಗೆ ಹಮ್ಮಿಕೊಂಡು ಬೆಳಿಗ್ಗೆ 9:00 ರಿಂದ ಸಂಜೆ 6 ಗಂಟೆವರೆಗೆ ತಾಲೂಕಿನ ಶೇಕಡ 90ರಷ್ಟು ಕಾರ್ಮಿಕ ಬಂಧುಗಳು ಆರೋಗ್ಯ ತಪಾಸಣೆ ಮತ್ತು ತರಬೇತಿ ಶಿಬಿರದಲ್ಲಿ ಭಾಗವಹಿಸಿ, ಬಿಪಿ ಶುಗರ್, ಹೃದಯ ತಪಾಸಣೆ, ಕಿಡ್ನಿ ಸಮಸ್ಯೆ ,ಯೂರಿನ್ ಪರೀಕ್ಷೆ ಮೈಲೇರಿಯಾ ,ಥೈರಾಯ್ಡ್ ಎಚ್ಐವಿ, ಬ್ಲಡ್ ಗ್ರೂಪ್ ಹೀಗೆ ಸುಮಾರು 20 ತರದ ತಪಾಸಣೆಗಳಿಗೆ ಒಳಪಡಿಸಿ ಕಾರ್ಮಿಕರಿಗೆ ಆರೋಗ್ಯದ ಬಗ್ಗೆ ಅರಿವನ್ನ ತಂಡದ ವೈದ್ಯರು ಮೂಡಿಸುವುದರ ಮೂಲಕ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಗೊಳಿಸಿದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಘಟಕದ ಅಧ್ಯಕ್ಷರಾದ ಡಿ ಎಸ್ ಚಂದ್ರಶೇಖರ್ ,ಗ್ರಾ ಪಂಚಾಯಿತಿ ಅಧ್ಯಕ್ಷರಾದ ಅನಿತಾ ಷಡಕ್ಷರಿ ,ಪಿಡಿಓ ಪ್ರಸನ್ನಾತ್ಮ  ,ಗಂಥಪಾಲಕ ಪಿ ಶಂಕರಪ್ಪಬಳ್ಳೇಕಟ್ಟೆ, ಪ್ರಧಾನ ಕಾರ್ಯದರ್ಶಿ ಸ್ವಾತಿ , ಸಂಘಟನಾ ಕಾರ್ಯದರ್ಶಿ ರಾಮಚಂದ್ರಯ್ಯ, ಕಾರ್ಯದರ್ಶಿ ಇರ್ಷಾದ್ ಪಾಷಾ  ಹಾಗೂ ತಾಲೂಕು ಕಾರ್ಮಿಕ ಘಟಕದ ಪದಾಧಿಕಾರಿಗಳು, ಕಾರ್ಮಿಕ ಬಂಧುಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

About Mallikarjun

Check Also

ಪದವಿ ಶಿಕ್ಷಣ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ವೇದಿಕೆ ಮಾಡಿಕೊಳ್ಳಿ : ಡಾ.ಸೋಮರಾಜು

Make graduate education a platform for building a bright future: Dr. Somaraju ಗಂಗಾವತಿ: ಹೆಚ್.ಆರ್.ಶ್ರೀ ರಾಮುಲು …

Leave a Reply

Your email address will not be published. Required fields are marked *