Breaking News

ನವಲಿಯಲ್ಲಿ ಕನ್ನಡ ಯಾತ್ರೆಯಸಂಭ್ರಮಅದ್ದೂರಿ ಮೆರವಣಿಗೆ, ಗಮನ ಸೆಳೆದ ಸಾಮೂಹಿಕ ನೃತ್ಯ

Kannada yatra celebration in Navali with grand procession, mass dance that attracted attention

ಜಾಹೀರಾತು

ಕನಕಗಿರಿ ಸಮೀಪದ ನವಲಿ ಗ್ರಾಮದಲ್ಲಿ ಕನ್ನಡ ಜ್ಯೋತಿ ಯಾತ್ರೆಯ ಮೆರವಣಿಗೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ ಅವರು ಬುಧವಾರ ಚಾಲನೆ ನೀಡಿದರು

ಕನಕಗಿರಿ: ಸುವರ್ಣ ಕನ್ನಡ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆಯ ಮೆರವಣಿಗೆ ಸಮೀಪದ ನವಲಿ ಗ್ರಾಮದಲ್ಲಿ ಬುಧವಾರ ಅದ್ದೂರಿಯಾಗಿ ನಡೆಯಿತು. ರಥಯಾತ್ರೆ ಬರುತ್ತಿರುವ ಹಿನ್ನೆಲೆಯಲ್ಲಿ ಕಾರಟಗಿ-ಕನಕಗಿರಿ ರಸ್ತೆಯ ಎರಡು ಬದಿಯಲ್ಲಿ ತಳಿರು, ತೋರಣ, ಬಾಳೆದಿಂಡು, ತೆಂಗಿನಗರಿ, ಹೂವು ಕನ್ನಡದ ಧ್ವಜಗಳನ್ನು ಕಟ್ಟಲಾಗಿತ್ತು. ಬುದ್ದ ಹಾಗೂ ಮಾಕಣ್ಣ ಕಂಬ್ಳಿ ಅವರ ವೃತ್ತವನ್ನು ರಂಗೋಲಿ ಮತ್ತು ಹೂವುಗಳಿಂದ ಶೃಂಗರಿಸಿ ಆಕರ್ಷಿಸಲಾಗಿತ್ತು.
ಗ್ರಾಮದ ಜೆಸ್ಕಾಂ ಕಚೇರಿ ಮುಂದೆ ಅಧಿಕಾರಿಗಳು, ಜನಪ್ರತಿನಿಧಿಗಳು, ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು ಕನ್ನಡದ ಧ್ವಜ ಹಿಡಿದು ವಾದ್ಯಗಳ ಮೂಲಕ ರಥಯಾತ್ರೆಯನ್ನು ಸ್ವಾಗತಿಸಿದರು. ಬುದ್ದ ವೃತ್ತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹಾದೇವಮ್ಮ ಅವರು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಕನಕಗಿರಿ-ಕಾರಟಗಿ ರಸ್ತೆ ಮೂಲಕ ಮಾಕಣ್ಣ ಕಂಬ್ಳಿ ವೃತ್ತದ ವರೆಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ಚಿರ್ಚನಗುಡ್ಡ ತಾಂಡ ಹಾಗೂ ನವಲಿ ತಾಂಡದ ವಿದ್ಯಾರ್ಥಿಗಳು ಲಂಬಾಣಿ ಸಮವಸ್ತ್ರ ಧರಿಸಿ ಸಾಮೂಹಿಕ ನೃತ್ಯ ಪ್ರದರ್ಶಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಕುಂಭ, ಕಳಸದೊಂದಿಗೆ ಭಾಗವಹಿಸಿದರು.
ಅಂಗನವಾಡಿ, ಆಶಾ ಹಾಗೂ ಆರೋಗ್ಯ ಸಹಾಯಕರು, ಶಿಕ್ಷಕರು, ಕಲಾವಿದರು, ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಡಿಜೆ ಕನ್ನಡ ಹಾಡು ಹಾಗೂ ಜನಪದ ಗೀತೆಗಳಿಗೆ ಕುಣಿದು ಕುಪ್ಪಳಿಸಿದರು . ಗ್ರಾಮದ ನೆಹರೂ ಕಿರಿಯ ಪ್ರಾಥಮಿಕ ಶಾಲೆ , ಜನನಿ ಪಬ್ಲಿಕ್, ನಿರುಪಾಧಿಶ್ವರ, ಬುದ್ದ ವೃತ್ತದ ಶಾಲೆ, ನವಲಿ ತಾಂಡ ಹಾಗೂ ಕನ್ನಡ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೋಲಾಟ ಸ್ತಬ್ದಚಿತ್ರಗಳೊಂದಿಗೆ ಭಾಗವಹಿಸಿ ಗಮನ ಸೆಳೆದರು. ವಡಕಿ ಗ್ರಾಮದ ಕೋಲಾಟದ ಗೀತೆಗಳನ್ನು ನೃತ್ಯದ ಹಾಡಿ ರಂಜಿಸಿದರು. ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರ, ಭಾಜಾ ಭಜಂತ್ರಿ, ತಾಷ ಮೇಳ, ಮೆರವಣಿಗೆಗೆ ಕಳೆ ತಂದವು.
ತಹಶೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಪ್ರಭಾರ ಇಒ ಚಂದ್ರಶೇಖರ ಕಂದಕೂರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ ತಳವಾರ, ಕಸಾಪ ಹೋಬಳಿ ಘಟಕದ ಅಧ್ಯಕ್ಷ ವಿರುಪಣ್ಣ ಕಲ್ಲೂರು, ಗ್ರಾಪಂ ಪಿಡಿಒ ವೀರಣ್ಣ ನೆಕ್ರಳ್ಳಿ, ಮೇಲ್ವಿಚಾರಕಿ ಶ್ರೀದೇವಿ, ಕಲಾವಿದರಾದ ಪ್ಯಾಟೆಪ್ಪ ನಾಯಕ, ಪರಪ್ಪ ಹಂಚಿನಾಳ, ವಿಜಯಲಕ್ಷ್ಮೀ ಉಪ್ಪಳ, ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಹನುಮಂತಪ್ಪ ಕಲ್ಲೂರು, ಕಸಾಪ ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ, ಗೌರವ ಕಾರ್ಯದರ್ಶಿ ಕನಕರೆಡ್ಡಿ ಕೆರಿ, ಪ್ರಾಂಶುಪಾಲ ಮಂಜುನಾಥ, ಮುಖ್ಯಶಿಕ್ಷಕರಾದ ಪರಯ್ಯ ಅರವಟಗಿಮಠ, ಪ್ರಶಾಂತ ಬಂಕಾಪುರ, ನಾಗಪ್ಪ ವಡ್ಡರ, ಪ್ರಮುಖರಾದ ಲಿಂಗರಾಜ ಹೂಗಾರ, ಬಸನಗೌಡ ಆದಾಪುರ, ಸಿದ್ದನಗೌಡ ಪಾಟೀಲ, ಜಡಿಯಪ್ಪ ಭೋವಿ, ಶಂಕರ ಭಜಂತ್ರಿ, ಪಂಚಯ್ಯಸ್ವಾಮಿ ಬಿದ್ನೂರುಮಠ, ಸಿದ್ರಾಮಗೌಡ ಉಪ್ಪಳ, ಜಡಿಯಪ್ಪ ಮುಕ್ಕುಂದಿ, ಮರಿರಾಜ ಭಜಂತ್ರಿ, ಮಲ್ಲಿಕಾರ್ಜುನ ಬಳಗಾನೂರು, ನಿಂಗಪ್ಪ ನಾಯಕ, ನೀಲಪ್ಪ ನಾಯಕ್, ರಾಮ್ ನಾಯಕ್, ಮಲ್ಲಿಕಾರ್ಜುನ ಖ್ಯಾಡೆದ, ವೀರೇಶ ನಾಗವಂಶಿ, ಶಿವಯ್ಯಸ್ವಾಮಿ, ಡಾ. ಪ್ರಮೋದ ಇತರರು ಇದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.