Dandeli forest department officials have done injustice to government schools and given justice only to private companies: Journalist and activist Basavaraju alleges...!
ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲ್ಲೂಕಿನ ಭರ್ಚಿ ಅರಣ್ಯ ಪ್ರದೇಶದ ವಲಯದ ವ್ಯಾಪ್ತಿಯಲ್ಲಿ ಬರುವ ನಾಗರಗೊಳ, ಗೋಬ್ರಾಳ ಸೇರಿದಂತೆ ಬಹುತೇಕ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಶಾಲೆಗಳು ಕಾಂಪೌಂಡ್
ನಿರ್ಮಿಸಿಕೊಳ್ಳಲು ಪ್ರಯತ್ನ ಪಟ್ಟರೇ ಸಾಕು ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಓಡೋಡಿ ಬಂದು ಅಭಿವೃದ್ಧಿ ಕೆಲಸಗಳನ್ನು ತಡೆಯುತ್ತಾರಂತೆ, ಆದ್ರೆ ಇತ್ತೀಚೆಗೆ ಖಾಸಗಿ ಸಣ್ಣ ಕಂಪನಿಗಳು, ರೆಸಾರ್ಟ್ ಗಳು ಮಾತ್ರ ಅರಣ್ಯ ಪ್ರದೇಶದಲ್ಲಿದ್ದರೂ ಸಹ ಅವುಗಳಿಗೆ ಮರ ಕಡಿಯುದಕ್ಕೆ ಹಾಗೂ ಕಟ್ಟಡ ನಿರ್ಮಾಣ ಮಾಡಿ ಕೊಳ್ಳೋದಕ್ಕೆ ಹಾಗೂ ಕಾಂಪೌಂಡ್
ನಿರ್ಮಿಸಿಕೊಳ್ಳೋದಕ್ಕೆ ಅನುಮತಿ ನೀಡುತ್ತಾರಂತೆ, ಇನ್ನೂ 20 ವರ್ಷಗಳಿಂದ ಇದೇ ಸ್ಥಳದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಾತ್ರ ಅನ್ಯಾಯ, ಖಾಸಗಿ ರೆಸಾರ್ಟ್ ಹಾಗೂ ಕಂಪನಿಗಳಿಗೆ ಮಾತ್ರ ನ್ಯಾಯವೇ…! ಇನ್ನೂ ದಟ್ಟ ಅರಣ್ಯ ಪ್ರದೇಶದಲ್ಲಿ ಇರುವ ನ್ಯಾಶನಲ್ ಕಾಂಕ್ರೀಟ್ ಎಂಬ ಖಾಸಗಿ ಕಂಪನಿಗೆ ಮಾತ್ರ ಮರಗಳನ್ನು ಕಡಿಯುವುದಕ್ಕೆ, ಕಟ್ಟಡ ನಿರ್ಮಾಣ ಹಾಗೂ ಸುತ್ತಲೂ ಕಾಂಪೌಂಡ್ ನಿರ್ಮಿಸಿಕೊಳ್ಳೋದಕ್ಕೆ ಬರ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೈ ಜೋಡಿಸಿದರೇ ಎಂಬ ಸಂಶಯ ಕಾಡುತ್ತಿದೆ. ಆದ್ದರಿಂದ ಪತ್ರಕರ್ತ ಹಾಗೂ
ಹೋರಾಟಗಾರ ಬಸವರಾಜು ಭೇಟಿಕೊಟ್ಟು ಅರಣ್ಯ ಪ್ರದೇಶದ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಭೇಟಿಕೊಟ್ಟು , ಅಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ನಂತರ ಖಾಸಗಿ ಕಂಪನಿಗಳು ನಿರ್ಮಾಣವಾಗುತ್ತಿರುವ ಸ್ಥಳಗಳಿಗೆ ಭೇಟಿಕೊಟ್ಟು ಅಲ್ಲಿಯ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ತಾರತಮ್ಯ ಹಾಗೂ ಶಾಮೀಲಿನ ಬಗ್ಗೆ ವರದಿ ತಯಾರಿಸಿ ಕರ್ನಾಟಕ ಸರ್ಕಾರದ ಮೀನುಗಾರಿಕೆ ಸಚಿವರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಂಕಾಳ ವೈದ್ಯ ಅವರಿಗೆ ಕರೆ ಮಾಡಿ ಈ ಸಮಸ್ಯೆ ಬಗ್ಗೆ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಅರಣ್ಯ ಪ್ರದೇಶದ ವ್ಯಾಪ್ತಿಯ ಈ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ಭಾಗ್ಯ ಸಿಕ್ಕು, ನಾಯಿ ಕೊಡೆಗಳಂತೆ ತಲೆಯೆತ್ತಲು ಕಾರಣರಾದ ಈ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಕ್ರಮವಾಗುವುದೇ ಎಂಬುದನ್ನು ಕಾದುನೋಡಬೇಕಿದೆ.