Breaking News

ವಿಧ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ತುಂಬಾ ಮುಖ್ಯ -ಅಶೋಕಸ್ವಾಮಿ ಹೇರೂರ ಅಭಿಪ್ರಾಯ.

Dress code is very important for students – says Ashokaswamy Heroor.

ಗಂಗಾವತಿ:ವಿದ್ಯಾರ್ಥಿಗಳಿಗೆ ವಸ್ತ್ರ ಸಂಹಿತೆ ತುಂಬಾ ಮುಖ್ಯ ಎಂದು ನ್ಯಾಯವಾದಿ ಮತ್ತು ಐ.ಟಿ.ಐ. ಕಾಲೇಜ್ ಸಮಿತಿ ಸದಸ್ಯ ಅಶೋಕಸ್ವಾಮಿ ಹೇರೂರ ಅಭಿಪ್ರಾಯ ಪಟ್ಟಿದ್ದಾರೆ.ಅವರು ಗುರುವಾರ ನಗರದ ಸರಕಾರಿ ಐ.ಟಿ.ಐ.ಕಾಲೇಜಿನಲ್ಲಿ ನಡೆದ ತರಭೇತಿ ಪಡೆದ ವಿಧ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಐ.ಟಿ.ಐ.ತರಬೇತಿ ಪಡೆದವರು,ನೌಕರಿ ಪಡೆಯಲು ಸಂದರ್ಶನಕ್ಕೆ ಹೋದಾಗಲೂ ವಸ್ತ್ರ ಸಂಹಿತೆ,ಕೇಶ ವಿನ್ಯಾಸ ಹಾಗೂ ವಿನಯತೆ ಬಹಳ ಅವಶ್ಯಕ ಎಂದು ಐ.ಟಿ.ಐ.ಪ್ರಮಾಣ ಪತ್ರ ಪಡೆದು ಹೊರ ಹೋಗುತ್ತಿರುವ ಅಭ್ಯರ್ಥಿಗಳಿಗೆ ಕಿವಿ ಮಾತು ಹೇಳಿದರು.

ಐ.ಟಿ.ಐ.ಉತ್ತೀರ್ಣರಾದವರು,ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ಡಿಗ್ರಿ ಅಭ್ಯಾಸ ಮಾಡಬಹುದು.ಈ ರೀತಿ ಅಭ್ಯಾಸ ಮಾಡುವವರಿಗೆ ಒಂದೊಂದು ವರ್ಷ ಶಿಕ್ಷಣದ ಅವಧಿ ಕಡಿಮೆಯಾಗಲಿದೆ.ಈ ರೀತಿ ಅಭ್ಯಾಸ ಮಾಡುವವರು 7 ವರ್ಷದ ಅವಧಿಯಲ್ಲಿ ಮೂರು ಸರ್ಟಿಫಿಕೇಟ್ ಗಳನ್ನು ಪಡೆಯುತ್ತಾರೆ ಹಾಗೂ ವಿಜ್ಞಾನ ವಿಷಯದ ಪದವಿಯನ್ನು ಹೊರತು ಪಡಿಸಿ, ಬಿ.ಎ., ಬಿ.ಕಾ೦, ಪದವಿಗಳಿಗೆ ನೇರ ಪ್ರವೇಶ ಪಡೆಯಬಹುದು
ಎಂದು ಕಾಲೇಜ್ ಪ್ರಾಚರ್ಯ ಡಿ.ಕೊಟ್ರೇಶ್ ಮಾಹಿತಿ ನೀಡಿದರು.

ಅಭ್ಯಾಸ ಮುಂದುವರಿಸಲು ವಯಸ್ಸಿನ ಅಂತರ ಗಣನೆಗೆ ಬರುವುದಿಲ್ಲ.ಅಭ್ಯಾಸ ಮುಂದುವರೆಸುವವರು ತಮ್ಮ ಅಭ್ಯಾಸ ಮುಂದುವರಿಸಲಿ ಅಥವಾ ನೌಕರಿಗೆ ಹೋಗಲು ಬಯಸುವವರಿಗೂ ಅವಕಾಶಗಳಿವೆ ಎಂದು ಇನ್ನೋರ್ವ ಅತಿಥಿ ಸಮರ್ಥ ಕಾರ್ ಕೇರ್ ಮುಖ್ಯಸ್ಥ ರವಿಕಿರಣ್ ತಿಳಿಸಿದರು.

ಶ್ರೀಮತಿ ಶರಣಮ್ಮ ನಿರುಪಿಸಿದ ಕಾರ್ಯವನ್ನು ಮನೋಜ್ ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.

About Mallikarjun

Check Also

ಮತದಾನ ಮಾಡದವರ ಪೌರತ್ವ ನಿಷೇಧಿಸಿ: ಸಗ್ರೀವಾ

ಗಂಗಾವತಿ.ಮೇ.06: ಲೋಕಸಭಾ ಚುನಾವಣೆ ನಿಮಿತ್ತ ಮೇ.07ರಂದು ನಡೆಯುವ ಮತದಾನದಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಂಡು ಮತ ಚಲಾಯಿಸಬೇಕು. ಮತದಾನ ಮಾಡದೆ ಹೊರ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.