ಗಂಗಾವತಿಯಲ್ಲಿ ಬೆನ್ನುಮೂಳೆಯ ವಿರೂಪತೆ ಜನಜಾಗೃತಿ ಹಾಗೂ ತಪಾಸಣಾ ಶಿಬಿರ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು
Spinal Deformity Awareness and Screening Camp in Gangavathi

ಗಂಗಾವತಿಯಲ್ಲಿ ಬೆನ್ನುಮೂಳೆಯ ವಿರೂಪತೆ ಜನಜಾಗೃತಿ ಹಾಗೂ ತಪಾಸಣಾ ಶಿಬಿರ

ಜಾಹೀರಾತು

ಕೊಪ್ಪಳ, ನವೆಂಬರ್ 20,: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಪ್ಪಳ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಗಂಗಾವತಿ ಇವರ ಸಂಯುಕ್ತಾಶ್ರಯದಲ್ಲಿ ನ.19 ರಂದು ಉಪವಿಭಾಗ ಆಸ್ಪತ್ರೆ, ಗಂಗಾವತಿ ಸಭಾಂಗಣದಲ್ಲಿ ಸ್ಪೆöÊನಲ್ ಡಿಫಾರ್ಮಿಟಿ (ಬೆನ್ನುಮೂಳೆಯ ವಿರೂಪತೆ) ಜನಜಾಗೃತಿ ಹಾಗೂ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಂಗಾವತಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಗೌರಿಶಂಕರ, ಬೆನ್ನುಮೂಳೆಯ ಸಹಜವಾದ ಆಕಾರ ಅಥವಾ ವಕ್ರತೆಯಲ್ಲಿ ಉಂಟಾಗುವ ಅಸಹಜ ಬದಲಾವಣೆಯಾಗಿದೆ. ಸಾಮಾನ್ಯವಾಗಿ ನಮ್ಮ ಬೆನ್ನುಮೂಳೆಯು ಹಿಂಭಾಗದಿಂದ ನೋಡಿದಾಗ ನೇರವಾಗಿಯೂ, ಪಕ್ಕದಿಂದ ನೋಡಿದಾಗ ಸೌಮ್ಯವಾದ ‘S’ ಆಕಾರದ ವಕ್ರತೆಯನ್ನೂ ಹೊಂದಿರುತ್ತದೆ. ಈ ವಕ್ರತೆಗಳು ಅತಿಯಾದಾಗ ಅಥವಾ ಬೆನ್ನುಮೂಳೆಯು ಪಕ್ಕಕ್ಕೆ ಬಾಗಿದಾಗ ವಿರೂಪತೆ ಉಂಟಾಗುತ್ತದೆ. ಬೆನ್ನುಮೂಳೆಯ ಆಕಾರದಲ್ಲಿ ಯಾವುದೇ ಬದಲಾವಣೆ ಅಥವಾ ನಿರಂತರ ಬೆನ್ನು ನೋವು ಕಂಡುಬAದರೆ, ತಡಮಾಡದೆ ಮೂಳೆರೋಗ ತಜ್ಞರು ಅಥವಾ ಬೆನ್ನುಮೂಳೆ ತಜ್ಞರನ್ನು  ಸಂಪರ್ಕಿಸಬೇಕೆಂದು ಸಾರ್ವಜನಿಕರಿಗೆ ಹೇಳಿದರು.
ವಯಸ್ಸಾಗುವಿಕೆ, ಹುಟ್ಟಿನಿಂದ ಬಂದ ಸಮಸ್ಯೆಗಳು, ನರಸ್ನಾಯುಕ ಕಾಯಿಲೆಗಳು, ಇತರ ಕಾರಣಗಳು, ತೀವ್ರವಾದ ಬೆನ್ನುಮೂಳೆಯ ಗಾಯಗಳು, ಮೂಳೆ ಸವೆತ, ದೀರ್ಘಕಾಲದ ತಪ್ಪು ಭಂಗಿ ಅಥವಾ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೂ ಇದು ಉಂಟಾಗಬಹುದು ಎಂದು ತಿಳಿಸಿದರು. ಶಿಬಿರದ ಯಶಸ್ವಿ ಆಯೋಜನೆಗೆ ಸಹಕರಿಸಿದ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಯವರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸಿದರು.
ಈ ಶಿಬಿರದಲ್ಲಿ ಒಟ್ಟು 55 ಫಲಾನುಭವಿಗಳು ಆಗಮಿಸಿದ್ದರು. ತಪಾಸಣೆಯ ನಂತರ 22 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಗಿದ್ದು, ಉಳಿದ 33 ಫಲಾನುಭವಿಗಳಿಗೆ ಮುಂದಿನ ತಪಾಸಣೆ ಹಾಗೂ ಫಾಲೋಅಪ್‌ಗೆ ಸೂಚಿಸಲಾಯಿತು. ಶಿಬಿರದ ಮೂಲಕ ಫಲಾನುಭವಿಗಳಿಗೆ ಸೂಕ್ತ ವೈದ್ಯಕೀಯ ಮಾರ್ಗದರ್ಶನ ಮತ್ತು ಚಿಕಿತ್ಸೆಯ ಸೌಲಭ್ಯ ದೊರೆಯಿತು.

Total Views: 0
Share This Article
Leave a Comment