ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ*

H.Mallikarjun
H.Mallikarjun - Kalyanasiri
2 Min Read
ಜಾಹೀರಾತು

The post of Additional Director, Sakala Mission, has been redesignated as ‘Commissioner, Department of Public Service’.




ಸಕಾಲ ಮಿಷನ್ ಅಪರ ನಿರ್ದೇಶಕರ ಹುದ್ದೆ ‘ಆಯುಕ್ತರು, ಪ್ರಜಾಸೇವಾ ಇಲಾಖೆ’ಯಾಗಿ ಮರುಪದನಾಮೀಕರಣ* 

ಜಾಹೀರಾತು

 

ಕೊಪ್ಪಳ ನವೆಂಬರ್ 19 : ರಾಜ್ಯ ಸರ್ಕಾರದಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುವ ಮತ್ತು ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರವು ಪ್ರಜಾಸೇವಾ ಇಲಾಖೆಯ ಅಡಿಯಲ್ಲಿ ಹೊಸದಾಗಿ *”ಪ್ರಜಾಸೇವಾ ಆಯುಕ್ತಾಲಯ”* ವನ್ನು ಸ್ಥಾಪಿಸಿ ಅಧಿಕೃತ ಆದೇಶ ಹೊರಡಿಸಿದೆ. 

*ಆಯುಕ್ತರ ಹುದ್ದೆ ಮರುಪದನಾಮೀಕರಣ*:

ಈವರೆಗೆ ಇದ್ದ “ಅಪರ ನಿರ್ದೇಶಕರು, ಸಕಾಲ ಮಿಷನ್” ಹುದ್ದೆಯನ್ನು ಇನ್ನು ಮುಂದೆ “ಆಯುಕ್ತರು, ಪ್ರಜಾಸೇವಾ ಇಲಾಖೆ” ಎಂದು ಮರುಪದನಾಮೀಕರಿಸಲಾಗಿದೆ. ಇವರು ನೂತನ ಪ್ರಜಾಸೇವಾ ಆಯುಕ್ತಾಲಯದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ. 

*ವಿಶೇಷ ಆಯುಕ್ತರ ಹುದ್ದೆ ಸೃಜನೆ*:

ಆಯುಕ್ತಾಲಯದ ಕಾರ್ಯಭಾರವನ್ನು ಸುಗಮಗೊಳಿಸಲು “ವಿಶೇಷ ಆಯುಕ್ತರು, ಪ್ರಜಾಸೇವಾ ಆಯುಕ್ತಾಲಯ” ಎಂಬ ಒಂದು ಹೊಸ ಹುದ್ದೆಯನ್ನು ಸೃಜಿಸಲಾಗಿದೆ. ಈ ಹುದ್ದೆಗೆ ಕಿರಿಯ ಶ್ರೇಣಿಯ ಐಎಎಸ್ (IAS) ಅಥವಾ ಹಿರಿಯ ಶ್ರೇಣಿಯ ಕೆಎಎಸ್ (KAS) ಅಧಿಕಾರಿಯನ್ನು ನೇಮಿಸಲಾಗುವುದು. 

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಕೆಎಎಸ್ ಹುದ್ದೆಗಳ ಪೈಕಿ, ಯೋಜನಾ ನಿರ್ದೇಶಕರು- ಇ-ಕಚೇರಿ, IPGRS, CCMS ಹಾಗೂ ಆಡಳಿತಾಧಿಕಾರಿ- ಸಕಾಲ ಎರಡು ಹುದ್ದೆಗಳನ್ನು ಪ್ರಜಾಸೇವಾ ಇಲಾಖೆಯಲ್ಲಿಯೇ ಉಳಿಸಿಕೊಂಡು, ಉಳಿದ ಎರಡು ಹುದ್ದೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ವರ್ಗಾಯಿಸಲಾಗಿದೆ. 

ಪ್ರಜಾಸೇವಾ ಇಲಾಖೆಯ ಆಡಳಿತಾತ್ಮಕ ಬಲವರ್ಧನೆಗಾಗಿ ಹೆಚ್ಚುವರಿಯಾಗಿ ಎರಡು ಕೆಎಎಸ್ (ಕಿರಿಯ ಶ್ರೇಣಿ) ಹುದ್ದೆಗಳನ್ನು ಹೊಸದಾಗಿ ಸೃಜಿಸಲಾಗಿದೆ. 

ಜೂನ್ 24, 2026 ರಂದು ಸ್ಥಾಪಿಸಲಾದ ಪ್ರಜಾಸೇವಾ ಇಲಾಖೆಯು ಸಕಾಲ ಸೇವೆಗಳ ಖಾತರಿಯ ವಿತರಣೆ, ಸಮಗ್ರ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆ (IPGRS),  

ಮಾಹಿತಿ ಹಕ್ಕು (ಆರ್‌ಟಿಐ) ಆನ್‌ಲೈನ್ ವ್ಯವಸ್ಥೆ,‌  

ಸರ್ಕಾರಿ ಪ್ರಕ್ರಿಯೆಗಳ ಮರು-ವಿನ್ಯಾಸ (Business Process Re-engineering) ಹಾಗೂ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನ, ಸಚಿವಾಲಯ ಕಚೇರಿ ಕೈಪಿಡಿ, ಇ-ಕಚೇರಿ (e-Office) ಮತ್ತು ನ್ಯಾಯಾಲಯ ಪ್ರಕರಣ ಮೇಲ್ವಿಚಾರಣಾ ವ್ಯವಸ್ಥೆ (CCMS), ವಿದ್ಯುನ್ಮಾನ ನಾಗರಿಕ ಸೇವಾ ವಿತರಣೆ (EDCS), ತರಬೇತಿ ಹಾಗೂ ಪ್ರಜಾಸೇವಾ ಅಭಿಯಾನದಂತಹ ಪ್ರಮುಖ ನಾಗರಿಕ ಸೇವೆಗಳು ಮತ್ತು ಆಡಳಿತ ಸುಧಾರಣಾ ವಿಷಯಗಳನ್ನು ನಿರ್ವಹಿಸಲಿದೆ. 

ಈ ನೂತನ ಆಯುಕ್ತಾಲಯದ ಸ್ಥಾಪನೆಯಿಂದ ರಾಜ್ಯದ ಜನತೆಗೆ ಸರ್ಕಾರಿ ಸೇವೆಗಳು ಮತ್ತಷ್ಟು ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ಲಭ್ಯವಾಗಲಿವೆ. 

ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮತ್ತು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ, ಪ್ರಜಾಸೇವಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರು  ಈ ಕುರಿತು ಆದೇಶ ಹೊರಡಿಸಿದ್ದಾರೆ ಎಂದು‌ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

Total Views: 0
Share This Article
Leave a Comment