
Training on Post-Harvest Technology for Pigeon Pea Crops

ತೊಗರಿ ಬೆಳೆ ಕೊಯ್ಲೋತ್ತರ ತಂತ್ರಜ್ಞಾನ ತರಬೇತಿ
ಕೊಪ್ಪಳ, ನವೆಂಬರ್ 19, : ಕೊಪ್ಪಳ ತಾಲೂಕಿನ ಮಂಗಳಾಪುರ ಗ್ರಾಮದ ಲೋಕನಗೌಡ ರವರ ಹೊಲದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ವತಿಯಿಂದ ನ.19 ರಂದು ಹಮ್ಮಿಕೊಂಡಿದ್ದ ತೊಗರಿ ಬೆಳೆ ಕೊಯ್ಲೋತ್ತರ ತಂತ್ರಜ್ಞಾನ ತರಬೇತಿಯಲ್ಲಿ ತೊಗರಿ ಬೆಳೆಯಲ್ಲಿ ಕೊಯ್ಲಿನ ನಂತರ ಅನುಸರಿಸಬೇಕಾದ ಸಂರಕ್ಷಣಾ ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.
ಕೀಟ ಶಾಸ್ತçಜ್ಞ ಡಾ.ಬದರಿ ಪ್ರಸಾದ್ ಪಿ.ಆರ್ ಅವರು ಮಾತನಾಡಿ, ತೊಗರಿ ಬೆಳೆಗೆ ಬರುವ ಬುರುಬುರಿ ಕೀಟ ನಿಯಂತ್ರಣಕ್ಕಾಗಿ ಮೆಲಾಥಿಯನ್ 2 ಮಿಲಿ ಕೀಟನಾಶಕವನ್ನು ಕಟಾವಿಗೆ 15 ದಿನಗಳ ಮುಂಚಿತವಾಗಿ ಸಿಂಪಡಿಸಬೇಕು. ದಾಸ್ತಾನು ಮಾಡುವ ಚೀಲಗಳನ್ನು ಕ್ಲೋರೋಪೈರಿಪೋಸ್ 2 ಮಿಲಿ ಯನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ, ಅದರಲ್ಲಿ ಚೀಲವನ್ನು ನೆನೆಸಿ, ನೆರಳಿನಲ್ಲಿ ಒಣಗಿಸಿ, ಧಾನ್ಯವನ್ನು ತುಂಬಿಸಿ, ನಂತರ ಕಣಜದಲ್ಲಿ ಮರದ ಹಲಗೆಗಳ ಮೇಲೆ ಚೀಲವನ್ನು ಗೋಡೆಯ ಸಂಪರ್ಕಕ್ಕೆ ಬಾರದಂತೆ ಇಡಬೇಕು. ಈ ರೀತಿ ಮಾಡುವುದರಿಂದ ಯಾವುದೇ ಕೀಟದ ಬಾಧೆ ಇಲ್ಲದೆ ಧಾನ್ಯವನ್ನು ಸಂಗ್ರಹಿಸಬಹುದೆAದು ರೈತರಿಗೆ ತಿಳಿಸಿದರು. ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಮುನ್ನ ಶ್ರೇಣೀಕರಣ ಮಾಡಿ ಮಾರಾಟ ಮಾಡುವುದರಿಂದ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ಅವರು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಮಂಗಳಾಪುರ ಗ್ರಾಮದ ಅನೇಕ ಪ್ರಗತಿಪರ ರೈತರಾದ ಲೋಕನಗೌಡ ಗೋಶಿ, ನಾಗರಾಜ್ ಮೇಟಿ, ಬಸವರಾಜ್ ಬಾರ್ಕೇರ್, ಭರಮಣ್ಣ ಮೇಟಿ, ಮಲ್ಲೇಶಪ್ಪ ಕೊಪ್ಪಳ, ವಿರೂಪಾಕ್ಷಪ್ಪ ಗೋಶಿ, ಈಶಪ್ಪ ಗಾಣಿಗೇರ್, ವಿರೂಪಣ್ಣ ಗಾಣಿಗೇರ್, ಬಸವರಾಜ್ ಗಂಟಿ ರೈತರು ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಯಮನೂರಪ್ಪ ನಿರ್ವಹಿಸಿದರು.


