
Celebration of the 6th Urs Sharif of Hazrat Syed Shah Khalilullah Qadri Sani

ಹಜರತ್ ಸೈಯದ್ ಶಾ ಖಲೀಲುಲ್ಲಾ ಖಾದ್ರಿ ಸಾನಿ ಅವರ ಆರನೇ ಉರುಸ್ ಶರೀಫ್ ಆಚರಣೆ

ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಭಕ್ತರ ಆಗಮನ; ಖವ್ವಾಲಿ ಕಾರ್ಯಕ್ರಮದಲ್ಲಿ ಮೇಳೈಸಿದ ಭಕ್ತಿ ಮತ್ತು ಸೌಹಾರ್ದ
ಗಂಗಾವತಿ: ಹಜರತ್ ಸೈಯದ್ ಶಾ ಖಲೀಲುಲ್ಲಾ ಖಾದ್ರಿ ಸಾನಿ ಅವರ ಆರನೇ ಉರುಸ್ ಶರೀಫ್ ಕಾರ್ಯಕ್ರಮ ನವೆಂಬರ್ 12ರಂದು ಭಕ್ತಿಭಾವ ಹಾಗೂ ಸಂಭ್ರಮದಿಂದ ಜರುಗಿತು.
ಮಹಾರಾಷ್ಟ್ರ, ಗೋವಾ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಗಾಕ್ಕೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಗಳ ಕುಟುಂಬಸ್ಥರ ನೇತೃತ್ವದಲ್ಲಿ ಸಾಂಪ್ರದಾಯಿಕ ಗಂಧದ ಮೆರವಣಿಗೆ ನಡೆಯಿತು.
ನಂತರ ದರ್ಗಾದಲ್ಲಿ ಫಾತಿಹಾ ಖಾನಿ, ಸಲಾತೊ ಸಲಾಂ ಸೇರಿದಂತೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ರಾತ್ರಿ ಬೆಳಗಾವಿಯ ಮೊಸಿನ್ ಚಿಸ್ತಿ ಹಾಗೂ ತಂಡದವರಿಂದ ಖವ್ವಾಲಿ ಕಾರ್ಯಕ್ರಮ ನಡೆಯಿತು. ಭಕ್ತಿಗೀತೆಗಳ ಮೂಲಕ ಧಾರ್ಮಿಕ ವಾತಾವರಣ ಮತ್ತಷ್ಟು ಕಳೆಗಟ್ಟಿತು.
ಧಾರ್ಮಿಕ ವಿಧಿವಿಧಾನಗಳು, ಗಂಧದ ಮೆರವಣಿಗೆ ಹಾಗೂ ಖವ್ವಾಲಿ ಕಾರ್ಯಕ್ರಮದೊಂದಿಗೆ ಉರುಸ್ ಶರೀಫ್ ಶ್ರದ್ಧಾಭಕ್ತಿ, ಸಂಭ್ರಮ ಮತ್ತು ಧಾರ್ಮಿಕ ಸೌಹಾರ್ದತೆಯ ಪ್ರತೀಕವಾಗಿ ನೆರವೇರಿತು.



