ಜಾಹೀರಾತು

Bus veers into a field after front wheel arch breaks; passengers escape, major tragedy averted

ಮುಂಭಾಗದ ಚಕ್ರದ ಕಮಾನ್ ಮುರಿದು ಬಸ್ ಹೊಲಕ್ಕೆ ನುಗ್ಗಿತು: ಪ್ರಯಾಣಿಕರು ಪಾರು, ತಪ್ಪಿದ ಭಾರೀ ದುರಂತ
ಜಾಹೀರಾತು

ಗಂಗಾವತಿ: ಕೊಪ್ಪಳ ಜಿಲ್ಲೆಯ ಗಂಗಾವತಿ ಸಮೀಪ ಕನಕಗಿರಿ ಮಾರ್ಗವಾಗಿ ತೆರಳುತ್ತಿದ್ದ ಬಸ್ನ ಮುಂಭಾಗದ ಚಕ್ರದ ಕಮಾನ್ ಮುರಿದು ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿದೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಸ್ ಹೊಲಕ್ಕೆ ನುಗ್ಗುತ್ತಿದ್ದಂತೆ ಪ್ರಯಾಣಿಕರಲ್ಲಿ ಆತಂಕ ಉಂಟಾಗಿದ್ದು, ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಚಕ್ರದ ಕಮಾನ್ ಮುರಿದಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಸಮಯಕ್ಕೆ ಸರಿಯಾಗಿ ಪ್ರಯಾಣಿಕರು ಪಾರಾಗಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ವರದಿ: ಶರಣಯ್ಯ ಹಿರೇಮಠ
Total Views:
0
ಜಾಹೀರಾತು



