

Gangavathi: Applications invited from eligible candidates for the posts of Anganwadi workers and assistants
ಗಂಗಾವತಿ: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ಕೊಪ್ಪಳ, ನವೆಂಬರ್ 04, (ಕರ್ನಾಟಕ ವಾರ್ತೆ): ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಗಂಗಾವತಿ ವ್ಯಾಪ್ತಿಯಲ್ಲಿ ಸರ್ಕಾರದ ಮಾರ್ಗಸೂಚಿಯನ್ವಯ ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಗಂಗಾವತಿ ವ್ಯಾಪ್ತಿಯ 7ನೇ ವಾರ್ಡ್ 7ನೇ ಕೇಂದ್ರ ಮೆಹಬೂಬ ನಗರ, ಉಡಮಕಲ್ 1ನೇ ಕೇಂದ್ರ, ವಡ್ಡರಹಟ್ಟಿ 1ನೇ ಕೇಂದ್ರ, ಆನೆಗುಂದಿ 1ನೇ ಕೇಂದ್ರ, ರ್ಹಾಳ 2ನೇ ಕೇಂದ್ರ, ಮುಸ್ಟೂರು 1ನೇ ಕೇಂದ್ರ, ಮುಕ್ಕುಂಪಿ 2ನೇ ಕೇಂದ್ರ, ಬಾಪಿರೆಡ್ಡಿ ಕ್ಯಾಂಪ್ 1ನೇ ಕೇಂದ್ರ, ಹಣವಾಳ 4ನೇ ಕೇಂದ್ರ ಕಂ ಕ್ರಷ್ ಕೇಂದ್ರಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗವಾಡಿ ಸಹಾಯಕಿಯ ತಲಾ ಒಂದೊAದು ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ.
ಅರ್ಹ ಮಹಿಳಾ ಅಭ್ಯರ್ಥಿಗಳು ಡಿಸೆಂಬರ್ 03 ರವರೆಗೆ ಆಫ್ ಲೈನ್ ಮೂಲಕ ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಗಂಗಾವತಿಯಲ್ಲಿ ಮೊಹರು ಮಾಡಲಾದ ಅರ್ಜಿ ಪೆಟ್ಟಿಗೆಯಲ್ಲಿ ಖುದ್ದಾಗಿ ಕಚೇರಿ ಅವಧಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ



