ಕೊಪ್ಪಳ ನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಯಶಸ್ವಿ

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

ಕೊಪ್ಪಳ ನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಯಶಸ್ವಿ

ಸಮಾಜದಲ್ಲಿ ಒಗ್ಗಟ್ಟು ಮತ್ತು ವಿಶ್ವಾಸ ಮೂಡಿಸಲು ಪಥಸಂಚಲನ: ಟಿ. ಪ್ರಸನ್ನ

RSS march successful in Koppal city

 

ಕೊಪ್ಪಳ: ಹಿಂದೂ ಸಮಾಜ ಸಂಘಟಿತವಾಗಿ ಬಲಿಷ್ಠವಾಗಲು ಹಾಗೂ ನಾವೆಲ್ಲರೂ ಒಂದೇ ಎಂಬ ವಿಶ್ವಾಸ ಮೂಡಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವತಿಯಿಂದ ಪಥಸಂಚಲನ ನಡೆಸಲಾಗುತ್ತದೆ. ಸಂಘದ ಸ್ವಯಂಸೇವಕರು ಸಂವಿಧಾನದ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಹ ಕಾರ್ಯವಾಹ ಟಿ. ಪ್ರಸನ್ನ ಹೇಳಿದರು.

ಜಾಹೀರಾತು

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಪ್ಪಳ ನಗರ ಶಾಖೆಯ ವತಿಯಿಂದ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಪಥಸಂಚಲನದ ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ನಡೆದ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಲು ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಸಂಘದ ಉದ್ದೇಶವಾಗಿದೆ. ಹಿಂದೂ ಸಮಾಜದ ಪ್ರತಿಯೊಂದು ಮನೆಯಲ್ಲೂ ಸದ್ಗುಣಗಳು ಮೈಗೂಡಬೇಕು. ನಾವೆಲ್ಲರೂ ಜ್ಞಾನದ ವಾರಸುದಾರರು ಎಂಬ ವಿಶ್ವಾಸ ಹಿಂದೂ ಸಮಾಜದಲ್ಲಿ ಮೂಡಬೇಕು. ಪ್ರತಿಯೊಬ್ಬರೂ ವೈಯಕ್ತಿಕವಾಗಿ ಉತ್ತಮ ನಾಗರಿಕರಾಗಬೇಕು ಹಾಗೂ ಎಲ್ಲ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯ ಮತ್ತು ಸ್ಪಂದನೆ ಹೊಂದಿರಬೇಕು ಎಂದು ಅವರು ಹೇಳಿದರು.

ಜಾತಿ, ಭಾಷೆ ಮತ್ತು ಪ್ರಾಂತದ ಹೆಸರಿನಲ್ಲಿ ಹಿಂದೂ ಸಮಾಜವನ್ನು ವಿಭಜಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇಂತಹ ಪ್ರಯತ್ನಗಳಿಂದ ಹೊರಬಂದು ಹಿಂದೂ ಸಮಾಜ ಒಗ್ಗಟ್ಟಾಗಿ ದೇಶದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

Total Views: 0
ಜಾಹೀರಾತು
Share This Article
Leave a Comment