
Chest pain naturally causes alarm—what should one do?Chest pain naturally causes alarm—what should one do?
ಎದೆ ನೋವು ಅಂದ ತಕ್ಷಣ ಯಾರಿಗಾದರೂ ಗಾಬರಿ, ಭಯ, ಆತಂಕಗಳು ಇದ್ದೇ ಇರುತ್ತದೆ. ವೈದ್ಯರ ಬಳಿ ಹೋದಾಗಲೂ, ಅವರೂ ಸಹ ಮೊದಲು ಹೃದಯ ಸಂಬಂಧಿ ಕಾಯಿಲೆಗಳ ಕುರಿತಂತೆಯೇ ಪರೀಕ್ಷೆ ಮಾಡುತ್ತಾರೆ.!! ಅಲ್ಲವೇ? ಇತ್ತೀಚೆಗೆ ವೈದ್ಯಕೀಯ ಪರೀಕ್ಷಾ ಉಪಕರಣಗಳು 100 ಕ್ಕೆ 99 ರಷ್ಟು, ಹೃದಯ ಸಂಬಂಧಿ ಕಾಯಿಲೆಗಳ ಕುರಿತು ನಿಖರವಾದ ಮಾಹಿತಿ ಗಳನ್ನು ನೀಡುತ್ತವೆ. ಸಂಶಯ ಬೇಡ !! *ನೀವು ಈಗಾಗಲೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿಸಿದ್ದೀರಿ.* ಅಂದಮೇಲೆ ನೀವು ಗಾಬರಿ ಪಡುವ ಅಗತ್ಯವಿಲ್ಲ!! ನಾನು ವೈದ್ಯನಲ್ಲ!! ಆದರೂ ನಿಮಗೆ ಹಲವು ಅನುಭವಗಳಿಂದ ಕೆಲವು ವಿಷಯ ಹೇಳುತ್ತೇನೆ. ನಮ್ಮ ದೇಶದಲ್ಲಿ ಬಹಳಷ್ಟು ಜನರಲ್ಲಿ ಕತ್ತುನೋವು ಹಾಗೂ ಭುಜದ ನೋವುಗಳು…. ಸರ್ವೇಸಾಮಾನ್ಯ!! ಈ ಕಾಯಿಲೆ ಗಳು, ಗಂಭೀರ ವಲ್ಲದ ಸಮಸ್ಯೆಗಳು. ಹೀಗಾಗಿ ಅವುಗಳಿಂದ ಯಾರೂ ಅಷ್ಟು ತಲೆ ಕೆಡಿಸಿ ಕೊಳ್ಳುವದಿಲ್ಲ !! ಇಂತಹ ಸಮಸ್ಯೆ ಗಳಿಂದ ನೋವು ಹೆಚ್ಚು ಆದಾಗಮಾತ್ರ ವೈದ್ಯರ ಬಳಿ ಹೋಗುತ್ತಾರೆ. ಇಲ್ಲದಿದ್ದರೆ, ಇಲ್ಲ !! ನಾನು ಹೇಳಬೇಕೆಂದಿದ್ದು ಇಷ್ಟೆ !! ನಮ್ಮಲ್ಲಿ, ಕೆಲವು ಸಲ, ಕತ್ತು ಮತ್ತು ಭುಜದ ನೋವುಗಳು ಅಷ್ಟಾಗಿ ಗಮನಕ್ಕೆ ಬಾರದೆ ಇದ್ದರೂ, ಅಲ್ಲಿ ಸಣ್ಣ ಪ್ರಮಾಣದ ನೋವು ಇದ್ದರೂ ಸಹ , ಅದರ ಸ್ನಾಯುಗಳ ಸೆಳೆತವು …. ಬಾಹ್ಯ ವಾಗಿ ಎದೆಯಲ್ಲಿ ನೋವು ಕಾಣಿಸಿ ಕೊಳ್ಳುತ್ತದೆ.(ಇದೇ ಪ್ರಶ್ನೆಗೆ ಡಾ. ವಿಜಯಕುಮಾರ್ ಅವರು ಬೆನ್ನು ಹುರಿ, ನಿದ್ರೆ, ಹಾಗೂ ಕೆಲವು ವಿಷಯಗಳ ಕುರಿತು ಸೂಕ್ಷ್ಮವಾಗಿ ಇದೇ ಅಂಕಣದಲ್ಲಿ ಉತ್ತರಿಸಿದ್ದಾರೆ) ನಿಮ್ಮಲ್ಲಿ ಈ ರೀತಿಯ ನೋವು ವಿಪರೀತ ವಾಗಿದ್ದಲ್ಲಿ… ಮಾತ್ರ ಎಲುಬು ಕೀಲು, ವೈದ್ಯರನ್ನು ಸಂಪರ್ಕಿಸಿರಿ !! ಇಲ್ಲದಿದ್ದರೆ ನೋವು ಸಾಮಾನ್ಯ ವಾಗಿದ್ದು, ಪದೇ ಪದೇ, ಎದೆಯಲ್ಲಿ ನೋವು ಕಾಣಿಸಿ ಕೊಳ್ಳುತ್ತಿದ್ದರೇ ಆ ನೋವು ಬಹಳಷ್ಟು ಸಲ, ಕತ್ತು ಮತ್ತು ಬೆನ್ನುಹುರಿಗೆ ಸಂಬಂಧ ಪಟ್ಟ ನೋವಾಗಿದೆ. ಕೆಲವು ಸಲ acidity ಹಾಗೂ ಇತರೆ ಸಣ್ಣ ಪುಟ್ಟ ದೋಷ ಗಳಿಂದ ಎದೆಯಲ್ಲಿ ನೋವು ಬರುವದೂ ಉಂಟು !! ( ನಮ್ಮ ಕಡೆ ಅದನ್ನು “ಕಸ” ಎಂದು ಕರೆಯುತ್ತಾರೆ) ಇರಲಿ !! ನಾನು ಹೇಳಿದ ಕೆಲವು ಸಲಹೆಗಳನ್ನು ಪಾಲಿಸಿ ಸಾಕು. ಕತ್ತು ಮತ್ತು ಬೆನ್ನು ಹುರಿಗೆ ಸಂಬಂಧಿಸಿದಂತೆ ನೋವು ಆಗಿದ್ದರೆ ಕೇವಲ ಎಂಟು, ಹತ್ತು ದಿನಗಳಲ್ಲಿ ಅದರ ಪರಿಣಾಮ ನಿಮಗೇ… ಗೊತ್ತಾಗುತ್ತದೆ.1) ಮೊದಲು ಸಮಾನ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗಲು ರೂಢಿ ಮಾಡಿಕೊಳ್ಳಿ.( ಒಳ್ಳೆಯ ಹವ್ಯಾಸ)2) ತಲೆ ದಿಂಬು ಬೇಡ. ನಿಮಗೆ ದಿಂಬು ಬೇಕೇ ಬೇಕು !! ಅಂದರೆ ಅತೀ ತೆಳುವಾದ, ಮೃದುವಾದ ದಿಂಬು ಇಟ್ಟುಕೊಂಡು ಮಲಗಿ.(ಮೊದಲು ಸ್ವಲ್ಪ ಮಟ್ಟಿಗೆ ಕಷ್ಟ ಅನಿಸುತ್ತದೆ.ರೂಢಿ ಆದ ಮೇಲೆ ನಿಮಗೆ ಎಷ್ಟು ಖುಷಿ ಹಾಗೂ ಮಜಾ ಸಿಗುತ್ತದೆ!! ಎಂಬದನ್ನು ನೀವೇ ಕಂಡುಕೊಳ್ಳಿ)3) ಈ ತರದ ನೋವುಗಳಿಗೆ … ಈಜಲು ಬಂದರೆ … ಅದರಷ್ಟು … ಒಳ್ಳೆಯ ವ್ಯಾಯಾಮ ಇನ್ನೊಂದು ಇಲ್ಲ. ಅನುಕೂಲ ಇದ್ದರೆ ಈಜು ಮಾಡಿ.4) ಬೆನ್ನು ಹುರಿ, ಕತ್ತು ಮತ್ತು ಭುಜದ ನೋವಿಗೆ ಸಂಬಂಧಿಸಿದಂತೆ ಹಲವಾರು ಯೋಗಾಸನ ಹಾಗೂ ವ್ಯಾಯಾಮಗಳು ಇವೆ !! ಇವುಗಳನ್ನು ತಪ್ಪದೇ ಮಾಡಿ.ಇಷ್ಟು ಮಾಡಿದರೆ ಸಾಕು, ತಮ್ಮ ನೋವು …ಹೇಳಲು….. ಹೆಸರಿಲ್ಲದಂತೆ…. ಮಾಯವಾಗುತ್ತದೆ. ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಭಯ ಬೇಡವೇ ಬೇಡ !!……. ಆದರೆ………5) ನಿಮ್ಮಲ್ಲಿ ಇರುವ ಹಲವಾರು …ಚಿಂತೆ ಮತ್ತು ವ್ಯಾಕುಲತೆಗಳಿಂದಾಗಿ …. ನಿದ್ರೆಯ ತೊಂದರೆ ಇದ್ದರೆ, ಅದಕ್ಕೆ ವೈದ್ಯರ ಸಲಹೆ ಅತ್ಯಗತ್ಯ.ಇದುವರೆಗಿನ ಎಲ್ಲಾ ವಿಷಯಗಳನ್ನು ನಾನು ನನ್ನ ಪೂರ್ಣ ಅನುಭವದ ಜೊತೆಗೆ ಕೆಲವು ಹಳೆಯ ವೈದ್ಯ ಪದ್ಧತಿಯ ಪಂಡಿತರ ಸಲಹೆಯ ಮೇರೆಗೆ ಹೇಳಲಾಗಿದೆ.




