ಕಬ್ಬು ಬೆಳೆಗಾರರ ಬೆನ್ನಿಗೆ ನಿಂತ ಸರ್ಕಾರ! ಕಿತ್ತೂರು ಸಂವಾದದ ಬೆನ್ನಲ್ಲೇ ಪ್ರಧಾನಿಗೆ ಡಿ.ಕೆ. ಶಿವಕುಮಾರ್ ಪತ್ರ; ತುರ್ತು ಪರಿಹಾರಕ್ಕೆ ಆಗ್ರಹ.

H.Mallikarjun
H.Mallikarjun - Kalyanasiri
1 Min Read
ಜಾಹೀರಾತು

Government stands by sugarcane farmers! D.K. Shivakumar writes to the Prime Minister following the 'Kittur Samvada' (dialogue); urges for urgent relief.

ಕಬ್ಬು ಬೆಳೆಗಾರರ ಬೆನ್ನಿಗೆ ನಿಂತ ಸರ್ಕಾರ!

ಕಿತ್ತೂರು ಸಂವಾದದ ಬೆನ್ನಲ್ಲೇ ಪ್ರಧಾನಿಗೆ ಡಿ.ಕೆ. ಶಿವಕುಮಾರ್ ಪತ್ರ; ತುರ್ತು ಪರಿಹಾರಕ್ಕೆ ಆಗ್ರಹ

ಜಾಹೀರಾತು

ಬೆಂಗಳೂರು: ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.

ಕಳೆದ ಶನಿವಾರ ಕಿತ್ತೂರಿಗೆ ಭೇಟಿ ನೀಡಿ ಕಬ್ಬು ಬೆಳೆಗಾರರೊಂದಿಗೆ ನೇರವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದ್ದ ಮಾನ್ಯ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಇದೀಗ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ರಾಜ್ಯದ ಕಬ್ಬು ಬೆಳೆಗಾರರ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಪರಿಹಾರ ಕ್ರಮಗಳನ್ನು ಕೈಗೊಂಡು ಅಗತ್ಯ ನೆರವು ಒದಗಿಸಬೇಕು ಎಂದು ಪ್ರಧಾನಮಂತ್ರಿಗಳಿಗೆ ಆಗ್ರಹಪೂರ್ವಕವಾಗಿ ಮನವಿ ಮಾಡಿದ್ದಾರೆ.

ರೈತರ ಸಂಕಷ್ಟಕ್ಕೆ ಮಿಡಿದು, ಕಿತ್ತೂರಿನಲ್ಲಿ ನೀಡಿದ ಭರವಸೆಯಂತೆ ಕೇಂದ್ರ ಸರ್ಕಾರದ ಗಮನಕ್ಕೂ ಸಮಸ್ಯೆಯನ್ನು ಕೊಂಡೊಯ್ದಿರುವ ಉಪಮುಖ್ಯಮಂತ್ರಿಗಳ ಕ್ರಮಕ್ಕೆ ಕಬ್ಬು ಬೆಳೆಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಬ್ಬು ಬೆಳೆಗಾರರ ಪರವಾಗಿ ಧ್ವನಿ ಎತ್ತಿ, ಪರಿಹಾರಕ್ಕಾಗಿ ಮುಂದಾಗಿರುವ ಮಾನ್ಯ ಡಿ.ಕೆ. ಶಿವಕುಮಾರ್ ಅವರಿಗೆ ಸಮಸ್ತ ಕಬ್ಬು ಬೆಳೆಗಾರರ ಪರವಾಗಿ ಅನಂತ ಧನ್ಯವಾದಗಳು.

Total Views: 0
ಜಾಹೀರಾತು
Share This Article