Breaking News

ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Distribution of free note books to Kannada school students

ಗಂಗಾವತಿ: ವಿಜಯನಗರ ಲಯನ್ಸ್ ಕ್ಲಬ್, ಬೆಂಗಳೂರು, ಸ್ವಾಮಿ ವಿವೇಕಾನಂದ ಸೇವಾ ಸಂಘ ಶ್ರೀರಾಮನಗರ ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ದಿನಾಂಕ: ೧೨.೦೭.೨೦೨೩ ರಂದು ಕನ್ನಡ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳ ವಿತರಣೆ ಮಾಡಲಾಯಿತು ಎಂದು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಿ. ರಾಮಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದರು.

ಜಾಹೀರಾತು


ಅವರು ಇಂದು ಶ್ರೀರಾಮನಗರ ಬೊಬ್ಬ ರಾಮಚಂದ್ರ ಹೈಸ್ಕೂಲ್, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಜಾರ ಕಾಲೋನಿ, ಸರಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಮಕ್ಕಳಿಗೆ, ಕೋಟಯ್ಯಕ್ಯಾಂಪ್‌ನ ಸ.ಕಿ.ಪ್ರಾ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀರಾಮನಗರದ ಬಂಜಾರ ಕಾಲೋನಿಯ ಸ.ಕಿ.ಪ್ರಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಈರಮ್ಮರವರು ಮಾತನಾಡಿ, ನೋಟ್ ಬುಕ್ ವಿತರಣೆಗೆ ದಾನಿಗಳಾದ ವಿ. ಗಂಗಾಧರರಾವ್‌ರವರಿಗೆ ಹಾಗೂ ವಿಜಯನಗರ ಲಯನ್ಸ್ ಕ್ಲಬ್ ಬೆಂಗಳೂರು ಮತ್ತು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.

About Mallikarjun

Check Also

ಎಸ್ಸಿ ಎಸ್ಟಿ ಮೀನುಗಾರರಿಗೆ ವಾಹನ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

Applications invited for subsidy for SC/ST fishermen to purchase vehicles ಕೊಪ್ಪಳ ಆಗಸ್ಟ್ 30 (ಕರ್ನಾಟಕ ವಾರ್ತೆ): …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.