ಕೊಪ್ಪಳ: ರೈತರಿಗೆ ಉಚಿತ ಮೇವಿನ ಬೀಜದ ಮಿನಿಕಿಟ್ ವಿತರಣೆ

H.Mallikarjun
H.Mallikarjun - Kalyanasiri
1 Min Read
Oplus_16908288
ಜಾಹೀರಾತು

Koppal: Free fodder seed mini-kit distribution for farmers

Oplus_16908288

ಕೊಪ್ಪಳ: ರೈತರಿಗೆ ಉಚಿತ ಮೇವಿನ ಬೀಜದ ಮಿನಿಕಿಟ್ ವಿತರಣೆ

ಕೊಪ್ಪಳ ಅಕ್ಟೋಬರ್ 07 (ಕರ್ನಾಟಕ ವಾರ್ತೆ): ತಾಲೂಕಿನ ರೈತರಿಗೆ ಕೊಪ್ಪಳ ಪಶು ಆಸ್ಪತ್ರೆಯಲ್ಲಿ ಬುಧವಾರ (ಅ. 7ರಂದು) ಉಚಿತ ಮೇವಿನ ಬೀಜದ ಮಿನಿಕಿಟ್ ವಿತರಣೆ ಮಾಡಲಾಯಿತು.
ಇದೇ ವೇಳೆ ಕೊಪ್ಪಳ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ. ವಿನೋದ ಕುಮಾರ್ ದಿವಟರ್ ಅವರು ಮಾತನಾಡಿ, ಕೊಪ್ಪಳ ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವ್ಯಾಪ್ತಿಯ ಎಲ್ಲಾ ಸಂಸ್ಥೆಗಳಲ್ಲಿ ಮೇವಿನ ಬೀಜಗಳು ಲಭ್ಯವಿದ್ದು, ನೀರಿನ ಸೌಲಭ್ಯ ಹೊಂದಿರುವ ಅರ್ಹ ರೈತರಿಗೆ ಉಚಿತವಾಗಿ ಮೇವಿನ ಬೀಜದ ಮಿನಿಕಿಟ್‌ಗಳನ್ನು ವಿತರಿಸಲಾಗುತ್ತಿದೆ. ನೀರಿನ ಸೌಲಭ್ಯವಿರುವ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದ್ದು, ಬೀಜಗಳನ್ನು ಪಡೆಯಲು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್ ಪ್ರತಿ, ಪಹಣಿ (ಆರ್.ಟಿ.ಸಿ) ಪ್ರತಿ ಹಾಗೂ ರೈತರ ಗುರುತಿನ ಸಂಖ್ಯೆ (ಎಫ್ಐಡಿ ನಂಬರ್) ಝೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ ಎಂದರು.
ತಾಲ್ಲೂಕಿನ ರೈತ ಬಾಂಧವರು ಈ ಮೇವಿನ ಬೀಜದ ಮಿನಿಕಿಟ್‌ಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಾಗೂ ಈ ಬಗ್ಗೆ ಇತರ ರೈತರಿಗೂ ಸಹ ಮಾಹಿತಿಯನ್ನು ತಲುಪಿಸಬೇಕು ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ಪಶು ಚಿಕಿತ್ಸಾಲಯ ಅಥವಾ ಕೊಪ್ಪಳ ಮುಖ್ಯ ಪಶುವೈದ್ಯಾಧಿಕಾರಿಗಳ ಕಚೇರಿಯನ್ನು (ದೂ: 08539-220073) ಸಂಪರ್ಕಿಸಬಹುದು‌ ಎಂದು ಅವರು ಹೇಳಿದರು.

ಜಾಹೀರಾತು
Total Views: 0
ಜಾಹೀರಾತು
Share This Article