
For the first time in the history of the Karnataka Arya Vysya community, a three-day Global Axle Letter Mission Summit... H. Hanumanthaiah.
ಕರ್ನಾಟಕ ಆರ್ಯವೈಶ್ಯ ಸಮಾಜದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮೂರು ದಿನಗಳ ಕಾಲ ಗ್ಲೋಬಲ್ ಆಕ್ಸಲ್ ಲೆಟರ್ ಮಿಷನ್ ಸಮ್ಮಿಟ್…. ಹನುಮಂತಯ್ಯ ಹೆಚ್.
ಗಂಗಾವತಿ:ಕರ್ನಾಟಕ ಆರ್ಯವೈಶ್ಯ ಮಹಾಸಭಾ. ಆವೋಪ. ಸಂಘ ನೇತ್ರತ್ವದಲ್ಲಿ ಡಿಸೆಂಬರ್ 25 26 ಹಾಗೂ 27 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾದ ಗ್ಲೋಬಲ್ ಅಕ್ಷಲ್ ಲೆಟರ್ ಮಿಷನ್ ಸಮಿಟ್ ಮಹಾಸಮ್ಮೇಳನ ಇಡೀ ಆರ್ಯವೈಶ್ಯ ಸಮಾಜದ ಐತಿಹಾಸಿಕ ಸಮ್ಮೇಳನವಾಗಲಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಪ್ರಧಾನ ಕಾರ್ಯದರ್ಶಿ ಹೆಚ್ಚು ಹನುಮಂತಯ್ಯ ಸಿರುಗುಪ್ಪ ಹೇಳಿದರು.
ಅವರು ಸೋಮವಾರದಂದು ಅತ್ಯಂತ ಮಹತ್ವಾಕಾಂಕ್ಷಿಯ ಗ್ಲೋಬಲ್ ಸಮಿಟ್ ಕಾರ್ಯಕ್ರಮ ಪ್ರಯುಕ್ತ ಗಂಗಾವತಿಯಲ್ಲಿ ಜರುಗಿದ ಮಹಾ ಸಂಕಲ್ಪದ ಬೈಕ ರ್ಯಾಲಿ ಹಾಗೂ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಭಾವಚಿತ್ರದ ಮೆರವಣಿಗೆ ಬಳಿಕ ಶ್ರೀ ನಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಜರುಗಿದ ವೇದಿಕೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಆರ್ಯವೈಶ್ಯ ಸಮಾಜದ ಮೂಲವೃತ್ತಿ ಕೆಲವು ಉದ್ಯೋಗಸ್ಥರದಿಂದಾಗಿ ವ್ಯಾಪಾರ ವಹಿವಾಟುಗಳಲ್ಲಿ ಹಿನ್ನಡೆ ಕಾಣುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಮಾಜ ಬಾಂಧವರು ಆರ್ಥಿಕವಾಗಿ ಸದೃಢವಾಗಲು ತಮ್ಮಲ್ಲಿರುವ ಬಂಡವಾಳವನ್ನು ಉಪಯೋಗಿಸಿಕೊಂಡು ಉದ್ಯೋಗಕ್ಕಿಂತ ಉದ್ಯಮಿಗಳಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಆಗಬೇಕೆಂಬ ಉದ್ದೇಶದಿಂದ ಮೂರು ದಿನದ ಮಹಾ ಸಮ್ಮೇಳನ ಬೆಂಗಳೂರಿನಲ್ಲಿ ಜರುಗಲಿದ್ದು ಹಲವು ವಿಚಾರಗಳು ಉಪನ್ಯಾಸಗಳು ಇವುಗಳ ಜೊತೆಗೆ ಬೃಹತ್ ಉದ್ದಿಮೆಗಳೊಂದಿಗೆ ಸಂವಾದ ಮತ್ತಿತರ ವಿಷಯಗಳ ಕುರಿತು ಸವಾಲೋಚನೆ ನಡೆಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ಯವೈಶ್ಯ ಸಮಾಜದ ಅಧ್ಯಕ್ಷ ರೂಪ ರಾಣಿ ರಾಯಚೂರು. ಕರ್ನಾಟಕ ಆರ್ಯವೈಶ್ಯ ಮಹಾಸಭಾ ನಿರ್ದೇಶಕರಾದ ಸಂತೋಷ್ ಕೆಲೋಜಿ. ಮಹಾಸವಾದ ಕಾರ್ಯದರ್ಶಿ ರಾಕೇಶ್ ಪಾನ ಗಂಟಿ ಮಹಾಸಮಾಧಾನ ಜಿಲ್ಲಾಧ್ಯಕ್ಷ ಭೀಮಶಂಕರ ಸ್ಥಳೀಯ ಕಾರ್ಯದರ್ಶಿ ಈಶ್ವರ ಶೆಟ್ಟಿ ಉಪಾಧ್ಯಕ್ಷ ಜಿ ಸುರೇಶ್ ಮಾರುತಿ ರೈಚೂರ್ ಮಹಿಳಾ ಅಧ್ಯಕ್ಷ ಭಾಗ್ಯ. ಪ್ರಸಾದ್ ಪಾನ ಗಂಟೆ ನಾಗರಾಜ್ ಶೆಟ್ಟಿ ದರೋಜಿ ಸೇರಿದಂತೆ . ವಿವಿಧ ಭಾವಗಳಿಂದ ಭಂಗ ಸಮಾಜ ಬಾಂಧವರು ಪಾಲ್ಗೊಂಡಿದ್ದರು.




