ದಸರಾ ಕ್ರೀಡಾಕೂಟದಲ್ಲಿ ಬ್ಲೂ ಡ್ರ್ಯಾಗನ್ ವಿದ್ಯಾರ್ಥಿಗಳ ಭರ್ಜರಿ ಸಾಧನೆ4 ಚಿನ್ನ, 3 ಬೆಳ್ಳಿ ಪದಕಗಳ ಬೇಟೆ

H.Mallikarjun
H.Mallikarjun - Kalyanasiri
1 Min Read
Blue Dragon students' stellar performance at the Dasara sports meet
A haul of 4 gold and 3 silver medals

ದಸರಾ ಕ್ರೀಡಾಕೂಟದಲ್ಲಿ ಬ್ಲೂ ಡ್ರ್ಯಾಗನ್ ವಿದ್ಯಾರ್ಥಿಗಳ ಭರ್ಜರಿ ಸಾಧನೆ
4 ಚಿನ್ನ, 3 ಬೆಳ್ಳಿ ಪದಕಗಳ ಬೇಟೆ

ಜಾಹೀರಾತು


ಗಂಗಾವತಿ, ಅ.1: ಕೊಪ್ಪಳ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಸೆ.30ರಂದು ನಡೆದ ದಸರಾ ಕ್ರೀಡಾಕೂಟ–ಸಿಎಂ ಕಪ್ 2026ರ ಕಲಬುರಗಿ ವಿಭಾಗ ಮಟ್ಟದ ಕರಾಟೆ ಮತ್ತು ಟೇಕ್ವಾಂಡೋ ಸ್ಪರ್ಧೆಯಲ್ಲಿ ಗಂಗಾವತಿಯ ಬ್ಲೂ ಡ್ರ್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಒಟ್ಟು 4 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮಹಾಲಕ್ಷ್ಮಿ ಬಸವರಾಜ್ ಅವರು ಕರಾಟೆಯ 68 ಕೆಜಿ ಕುಮಿತೆ ಹಾಗೂ ಟೇಕ್ವಾಂಡೋದ 70 ಕೆಜಿ ಒಳಗಿನ ಫೈಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ದೇವಿಕಾ ಯಶ್ ಷಣ್ಮುಖಪ್ಪ ಅವರು ಟೇಕ್ವಾಂಡೋದ 42 ಕೆಜಿ ಫೈಟ್ ವಿಭಾಗದಲ್ಲಿ, ಉಷಾ ತಂದೆ ಗೋಪಾಲ್ ಅವರು 46 ಕೆಜಿ ಫೈಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಇದೇ ವೇಳೆ ರಂಗಮ್ಮ ಷಣ್ಮುಖಪ್ಪ ಅವರು ಹಿರಿಯರ ಕರಾಟೆ ಕಟಾ ಹಾಗೂ ಟೇಕ್ವಾಂಡೋದ 55 ಕೆಜಿ ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಎರಡು ಬೆಳ್ಳಿ ಪದಕಗಳನ್ನು ಗಳಿಸಿದ್ದಾರೆ. ಷಣ್ಮುಖಪ್ಪ ಸಾವಂತಿಗೆರಿ ಅವರು ಟೇಕ್ವಾಂಡೋದ 76 ಕೆಜಿ ಒಳಗಿನ ಫೈಟ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಹಾಗೂ ನಿರಂತರ ತರಬೇತಿಯ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಬ್ಲೂ ಡ್ರ್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ತರಬೇತುದಾರ ಷಣ್ಮುಖಪ್ಪ ತಿಳಿಸಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಅವರು, ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.

Total Views: 0
ಜಾಹೀರಾತು
Share This Article