12 ನೇ ಶತಮಾನದಲ್ಲಿ ಸತ್ಯ ಮತ್ತು ನಿತ್ಯ ಕಾಯಕ ಮಾಡುತಿದ್ದ ಶಿವ ಶರಣ ಹೂಗಾರ ಮಾದಯ್ಯ

H.Mallikarjun
H.Mallikarjun - Kalyanasiri
4 Min Read

Hoogara Madayya, a Shiva Sharana of the 12th century who engaged in truthful and eternal *Kayaka* (devotional work)

 

12 ನೇ ಶತಮಾನದಲ್ಲಿ ಸತ್ಯ ಮತ್ತು ನಿತ್ಯ ಕಾಯಕ ಮಾಡುತಿದ್ದ ಶಿವ ಶರಣ ಹೂಗಾರ ಮಾದಯ್ಯ

ಕುಷ್ಟಗಿ :ತಾಲೂಕಿನ ಹೂಗಾರ ಸಮಾಜದ ವತಿಯಿಂದ ತಾಲೂಕಿನಲ್ಲಿ ಐದನೆ ವರ್ಷದ ಕಾಯಕಯೋಗಿ ಶರಣ ” ಹೂಗಾರ ಮಾದಯ್ಯ ಶರಣರ ಜಯಂತಿ” ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಡಿದ ಶರಣ ಬಸವರಾಜ ಹೂಗಾರ, ಇಂದಿನ ದಿನಮಾನದಲ್ಲಿ ಯುವ ಪೀಳಿಗೆಗಳು ಸರಿಯಾದ ರೀತಿಯ ಸಂಸ್ಕೃತಿ ಸಂಸ್ಕಾರ ಇಲ್ಲದೆ ಹಲವಾರು ದುಶ್ಚಟಗಳಿಗೆ ಗುರಿಯಾಗಿ, ಸುಂದರವಾದ ಬದುಕನ್ನ ಕಟ್ಟಿಕೊಳ್ಳದೆ, ಅಲೆದಾಡುವ ಪರಸ್ಥಿತಿಗೆ ಬಂದು ನಿಂತಿದೆ. ನಮ್ಮ ಜೀವನದ ಬವಣೆಯಿಂದ ದೂರಾಗಬೇಕಾದರೆ, ಶರಣರ ಸಂದರ ದಾರ್ಶನಿಕರ ತತ್ವಾದರ್ಶಗಳೆ, ಬವಣೆಗಳಿಗೆ ಔಷದಿ.
ಈ ಔಷದಿ ದೊರೆಯಬೇಕಾದರೆ ಶರಣರ ಸಂಘದ ಒಡನಾಟದಿಂದ. ಅದಕ್ಕಾಗಿ ಗುರು ಬಸವಣ್ಣನವರು ” ಸಾರಸಜ್ಜನರ ಸಂಘ ಲೇಸು ಕಂಡಯ್ಯ, ದೂರ ದುರ್ಜನರ ಸಂಗ ಭಂಗವಯ್ಯ ” ಎಂದು ಹೇಳಿದ್ದಾರೆ. ದುರ್ಜನರ ಸಂಘದಿಂದೊಂಡಗೂಡದೆ, ಸಜ್ಜನರ ಸಂಘದೊಂದಿಗೆ ಬದುಕಬೇಕು. ಅದೇರೀತಿಯಾಗಿ, 12ನೇ ಶತಮಾನದಲ್ಲಿ ಒಂದು ಲಕ್ಷದ ತೊಂಭತ್ತಾರು ಜನ ಫಾಲೋವರ್ಸ ಮತ್ತು 770 ಅಮರ ಗಣಂಗಳಲ್ಲೊಬ್ಬರಾದ ಶಿವ ಶರಣ ಹೂಗಾರ ಮಾದಯ್ಯನವರು, ಕಲ್ಯಾಣ ರಾಜ್ಯದ ಶರಣ ಸಂಕುಲಗಳಲ್ಲಿ ದಂಪತಿಗಳು ಸಮೇತ ತೊಡಗಿಕೊಂಡು, ಗುರು ಬಸವಣ್ಣನವರು ಕೊಟ್ಟಂತ ಕಾಯಕದ ಪರಿಕಲ್ಪನೆಯಂತೆ, ಕಲ್ಯಾಣ ಪಟ್ಟಣದಲ್ಲಿ ಇರುವ ಎಲ್ಲಾ ಶರಣರಿಗೆ ಮುಂಜಾವದಲ್ಲೆದ್ದು, ಶರಣರ ಇಷ್ಟಲಿಂಗ ಪೂಜೆಗೆ ಹೂ ಪತ್ರೆ ಗಳನ್ನು ಕೊಡುತ್ತಾ, ಧಾರ್ಮಿಕ ಪೂಜೆ ಮತ್ತು ಮದುವೆ ಸಮಾರಂಭದಲ್ಲಿ ಬಾಸಿಂಗ ಹಂಚುವುದರ ಜೊತೆಗೆ ತಾನು ಕೂಡ ಅಂಗದ ಮೇಲೆ ಇಷ್ಟಲಿಂಗ ಧರಿಸಿ, ಲಿಂಗಾಂಗ ಸಾಮರಸದಿಂದ ಶರಣರಾದರು. ಹೂ ಪತ್ರೆ ಮಾಲೆಗಳನ್ನ ಕೊಡುವ ಕಾಯಕವನ್ನೇ ಜೀವನದ ಬದುಕಿನ ಕಸುಬನ್ನಾಗಿ ಮಾಡಿಕೊಂಡು, ಕಲ್ಯಾಣ ಪಟ್ಟಣದಲ್ಲಿ ಬಿಜ್ಜಳನ ಅರಸೊತ್ತಿಗೆಯ ಭೂಮಿ, ತ್ರಿಪೂರಾಂತ ಕೆರೆಯ ದಂಡೆಯ ಮೇಲೆ ಹೂ ಪತ್ರೆಯ ಕೈ ತೋಟ ಮಾಡಿಕೊಂಡು, ನಿಷ್ಕಲ್ಮಶವಾಗಿ ನಿಷ್ಠೆಯ ಕಾಯಕವ ಮಾಡುತ್ತ, ಅನುಭವ ಮಂಟಪದಲ್ಲಿ ವಚನ ರಚಿಸುವ ಚಿಂತನೆಯಲ್ಲಿ ತೊಡಗಿಕೊಳ್ಳುತಿದ್ದರು. ಹೂಗಾರ ಮಾದಯ್ಯ ಜೀವನ ಕುರಿತಾಗಿ ” ಭೈರವೇಶ್ವರ ಕಥಾಮಣಿಸೂತ್ರ” ದಲ್ಲಿ ಹರಿಹರನ ರಗಳೆಗಳಲ್ಲಿ ಮತ್ತು ಡಾ।। ಬಿ.ಎಸ್ ಗದ್ದಿಗೀಮಠ ಅವರು ಪ್ರಕಟಿಸಿದ ‘ ಕನ್ನಡ ಜಾನಪದ ಗೀತೆಗಳು’ ಎಂಬ ಗ್ರಂಥದಲ್ಲಿ ಸುಮಾರು ಎಪ್ಪತ್ತಕ್ಕೂ ಮಿಕ್ಕಿ ತ್ರಿಪದಿಗಳಲ್ಲಿ ಕಂಡುಬರುತ್ತಿವೆ. ಕಲ್ಯಾಣದ ಕಾಯಕ ಜೀವಿ ರೈತಾಪಿ ಶಿವಶರಣರಿಗೆ ಮುದ್ದು ಮಾದಯ್ಯನಾಗಿ, ಯಾವ ಶರಣರಿಂದಲು ಏನನ್ನು ಬಯಸದೆ, ನಿತ್ಯ ಮತ್ತು ಸತ್ಯ ಕಾಯಕವ ಮೆಚ್ಚಿ ಗುರು ಬಸವಣ್ಣನವರು, ಬಿಜ್ಜಳನ ಭಂಡಾರದಲ್ಲಿ ಪ್ರತಿ ಮಾಸಕ್ಕೊಮ್ಮೆ 25 ಪೈಸೆ ಆತನ ಜೀವನದ ನಿರ್ವಹಣೆಗಾಗಿ ಕೊಡುತಿದ್ದ ಎಂಬುದು ಹರಿಹರನ ರಗಳೆಯಲ್ಲಿ ತಿಳಿದು ಬಂದಿದೆ. 12 ನೇ ಶತಮಾನದಿಂದ ಇಂದಿನ ವರೆಗು, ಗ್ರಾಮ ಗ್ರಾಮಗಳಲ್ಲಿ, ಜಾತಿ ಭೇದ, ವರ್ಗಭೇದ, ವರ್ಣಭೇದ ಮರೆತು, ಎಲ್ಲಾ ಸಮುದಾಯಗಳಿಗೆ, ಹೂ, ಪತ್ರೆ, ಮದುವೆಗೆ ಬೇಕಾದ ಬಾಸಿಂಗ, ಕೊಡುವ ಪರಂಪರೆ ಸಾಗಿಬಂದಿದೆ. ಇದುವೆ 12 ನೇ ಶತಮಾನದ ಶಿವ ಶರಣ ಮಾದಯ್ಯನವರು ಪರಂಪರೆ ಎಂದು ತಿಳಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಶ್ರೀ ಹಾಲಪ್ಪ ಹೂಗಾರ ಸಾ.ಕಂದಕೂರು ಇವರು ಮಾತನಾಡಿ, ಕಾಯಕವ ಕಲಿಸೋಕೆ ನಾಯಕನು ಬಸವಣ್ಣ ಎಂಬ ಜಾನಪದ ಕವಿತೆಗಳಂತೆ, 12 ನೇ ಶತಮಾನದಲ್ಲಿ ಗುರು ಬಸವಣ್ಣನವರು ಎಲ್ಲಾ ಶರಣ ಸಂಕುಲಗಳಿಗೆ, ಒಂದೊಂದು ಕಾಯಕದ ಗುರುತನ್ನು ಕೊಟ್ಟು, ಕಾಯಕದಲ್ಲೇ ಕೈಲಾಸ ಕಾಣುವ ಶಕ್ತಿ ಇದೆ ಎಂಬುದನ್ನು ತಮ್ಮ ವಚನಗಳ ಮೂಲಕ ತಿಳಿದುಕೊಳ್ಳಬಹುದು. ಗುರು ಬಸವಣ್ಣನವರ ನುಡಿಗಡಣವನ್ನ, ಶರಣದಂತಿಗಳಾದ ಶಿವ ಶರಣೆ ಮಹಾದೇವಿ ಮಾದಯ್ಯ ದಂಪತಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಕಲ್ಯಾಣದಲ್ಲೇ ಹುಟ್ಟಿ, ಸತ್ಯ ಶುದ್ಧ ಕಾಯಕ ಮಾಡುತ್ತಾ ಬಾಳಿ ಬದುಕಿದ್ದಾರೆ. ಇಂತಹ ಮಹಾತ್ಮರ ಚಿಂತನೆಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು ತಿಳಿಸಿವುದರ ಮೂಲಕ ಈ ವರ್ಷ ಮಾಸಕ್ಕೆ ಅನುಗುಣವಾಗಿ ಮಳೆ ಬರದೆ ಇದ್ದಕಾರಣ ಬರಗಾಲ ಆವರಿಸಿದೆ. ಕಾರಣ ಹೂಗಾರ ಸಮುದಾಯದ ಪ್ರತಿಯೊಬ್ಬರ ಮನೆಯಲ್ಲಿ ದುಂದು ವೆಚ್ಚ ಮಾಡದೆ ಅತ್ಯಂತ ಭಕ್ತಿ ಭಾವನೆಯಿಂದ ಕುಲ ಗುರುವಿನ ಜಯಂತಿಯನ್ನು ಆಚರಿಸುವುದರ ಮೂಲಕ, ಮಾದಯ್ಯ ಶರಣರ ವಿಚಾರವನ್ನು ಮೈ ಕೂಡಿಸಿಕೊಂಡು ಬಾಳಿ ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು. ಕುಷ್ಟಗಿ ತಾಲೂಕಿನ ಹೂಗಾರ ಸಮಾಜದ ತಾಲೂಕ ಅಧ್ಯಕ್ಷ ಶ್ರೀ ಹನುಮಂತಪ್ಪ ಹೂಗಾರ,ಸಾ.ಕಂದಕೂರು ( ಬೀಳಗಿ) ಇವರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಮುಖರಾಗಿ ಶರಣ ಶಿವಕುಮಾರ್ ಹೂಗಾರ ಶಿಕ್ಷಕರು ಗಟ್ಟಿಗನೂರು, ಮಲ್ಲಪ್ಪ ಹೂಗಾರ ನಿವೃತ್ತ ಅಂಚೆ ಇಲಾಖೆ ಕಂಕೂದೂರು, ಚಿದಾನಂದಪ್ಪ ಹೂಗಾರ ಮದ್ನಾಳ, ಪ್ರಕಾಶ್ ಹೂಗಾರ ಪೋಲಿಸ್ ಇಲಾಖೆ ಕುಷ್ಟಗಿ, ರಾಯಪ್ಪ ಹೂಗಾರ ಉಪನ್ಯಾಸಕರು, ಮಸಬಹಂಚಿನಾಳ. ಮಾರುತಿ ಹೂಗಾರ ಮಾಲಗಿತ್ತಿ, ಅಶೋಕಪ್ಪ ಹೂಗಾರ ತಾವರಗೇರಿ, ಬಸಪ್ಪ ಕಾಟಾಪುರ, ಶರಣಪ್ಪ ಟೆಂಗುಂಟಿ, ಶಿವಾನಂದಪ್ಪ ಹೂಗಾರ ಶಿಕ್ಷಕರು ಕುಷ್ಟಗಿ, ಸೂರೇಶ್ ಹೂಗಾರ,ಮಹಾಂತಪ್ಪ, ಬಾಬು ಕುಷ್ಟಗಿ, ಬಸವರಾಜ ಪೂಜಾರ್ ಕುಷ್ಟಗಿ, ರಾಮಣ್ಣ ಹೂಗಾರ ಗುನ್ನಾಳ, ಹನುಮಂತಪ್ಪ ಬೇವೂರು, ಮಹಾಂತೇಶ್ ಬಿ ಹೂಗಾರ ಕರಡಿ, ರಾಘವೇಂದ್ರ ಹೂಗಾರ ಹಾಗು ಕುಷ್ಟಗಿ ತಾಲೂಕಿನ ಎಲ್ಲಾ ಗ್ರಾಮ ಮತ್ತು ಪಟ್ಟಣಗಳ ಹೂಗಾರ ಸಮಾಜದ ಹಿರಿಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಕುಷ್ಟಗಿ ಬಸ್ ನಿಲ್ದಾಣ ವೃತ್ತದಲ್ಲಿ ಹೂಗಾರ ಮಾದಯ್ಯ ಶರಣರ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪಾರ್ಚನೆ ಮಾಡಲಾಯಿತು.

ಜಾಹೀರಾತು

✍️ ಬಸವರಾಜ ಎಸ್ ಹೂಗರ ಗುಳೆ .

Total Views: 0
ಜಾಹೀರಾತು
Share This Article