ವಿದ್ಯಾರ್ಥಿಗಳ ಹಕ್ಕುಗಳ ಹೋರಾಟಕ್ಕಾಗಿ SFI ಗಂಗಾವತಿ ತಾಲೂಕು ನೂತನ ಸಮಿತಿ ರಚನೆ

H.Mallikarjun
H.Mallikarjun - Kalyanasiri
2 Min Read

New SFI Gangavathi Taluk Committee Formed to Fight for Student Rights

ವಿದ್ಯಾರ್ಥಿಗಳ ಹಕ್ಕುಗಳ ಹೋರಾಟಕ್ಕಾಗಿ SFI ಗಂಗಾವತಿ ತಾಲೂಕು ನೂತನ ಸಮಿತಿ ರಚನೆ

ಜಾಹೀರಾತು

ಗಂಗಾವತಿ: ಭಾರತ ವಿದ್ಯಾರ್ಥಿ ಫೆಡರೇಶನ್ (SFI) ಗಂಗಾವತಿ ತಾಲೂಕು 21ನೇ ತಾಲೂಕು ಸಮ್ಮೇಳನವು ದಿನಾಂಕ ಸೆಪ್ಟೆಂಬರ್ 22 ರಂದು ಗಂಗಾವತಿ ನಗರದ ಕ.ಸಾ.ಪ ಭವನದಲ್ಲಿ ನಡೆಯಿತು. ಸಮ್ಮೇಳನದಲ್ಲಿ ತಾಲೂಕಿನ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳು, ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಬಲವರ್ಧನೆ, ಹಾಸ್ಟೆಲ್ ಸಮಸ್ಯೆಗಳು, ವಿದ್ಯಾರ್ಥಿವೇತನ, ಶುಲ್ಕ ಸೇರಿದಂತೆ ವಿವಿಧ ವಿದ್ಯಾರ್ಥಿ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು. ಸಮ್ಮೇಳನದ ಬಳಿಕ 25 ಜನರನ್ನು ಒಳಗೊಂಡ SFI ಗಂಗಾವತಿ ತಾಲೂಕು ನೂತನ ಸಮಿತಿಯನ್ನು ರಚಿಸಲಾಯಿತು.
ನೂತನ ಗಂಗಾವತಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಶರೀಫ್ ಎಂ.ಪಿ. ಹಾಗೂ ಕಾರ್ಯದರ್ಶಿಯಾಗಿ ಮೌನೇಶ್ ದಾಸರ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ: ಬಾಲಾಜಿ ಚಳ್ಳಾರಿ, ದರ್ಶನ್ ಹೊಸ್ಕೆರ, ದೀಪ, ಶರಣಬಸವ, ಜಂಟಿ ಕಾರ್ಯದರ್ಶಿಗಳಾಗಿ: ನಾಗರಾಜ್ ಯು., ಮಾರುತಿ, ರಂಜಿತಾ, ದುರುಗೇಶ್, ಸದಸ್ಯರಾಗಿ: ಬಸಯ್ಯ ಹಿರೇಮಠ್, ಲಕ್ಷ್ಮಿ, ಹನುಮೇಶ್, ಸಂಜಯ್, ಸಕ್ರೆಗೌಡ, ಪರಶುರಾಮ್, ಗ್ಯಾನೇಶ್, ಇಮಾಮ್ ಹುಸೇನ್, ಅಕಿಲ್ ರಾಠೋಡ್, ನಾಗರಾಜ್ ಹಾಗೂ ಎಸ್ಎಫ್ಐ ಘಟಕದ ಸದಸ್ಯರನ್ನು ಒಳಗೊಂಡಂತೆ ಒಟ್ಟು 25 ಜನರ ತಾಲೂಕು ಸಮಿತಿಯನ್ನು ರಚಿಸಲಾಯಿತು.
ಈ ವೇಳೆ ಮಾತನಾಡಿದ ನೂತನ ತಾಲೂಕ ಅಧ್ಯಕ್ಷ ಶರೀಫ್ ಎಂ.ಪಿ ರವರು ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಸಮಾನ ಶಿಕ್ಷಣ ದೊರೆಯುವಂತೆ ಮಾಡುವುದು, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವುದು, ಈ ಹಿಂದೆ ಇದ್ದ ತಾಲೂಕ ಸಮಿತಿಯ ಅಧ್ಯಕ್ಷ ನಾಗರಾಜ್ ಯು, ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ವಿದ್ಯಾರ್ಥಿಗಳ ಹಕ್ಕುಗಳನ್ನು ರಕ್ಷಿಸುವುದು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ಸಂಘಟಿತವಾಗಿ ಪರಿಹರಿಸಿದ ಮಾರ್ಗವಾಗಿ ಮುಂದಿನ ದಿನಗಳಲ್ಲಿ SFI ನೂತನ ತಾಲೂಕು ಸಮಿತಿ ವತಿಯಿಂದ ಪ್ರಜಾಸತಾತ್ಮಕ ಹಕ್ಕುಗಳ ಉಳಿವಿಗಾಗಿ ವಿದ್ಯಾರ್ಥಿ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ರೂಪಿಸಿ, ಎಂದು ತಿಳಿಸಿದರು.
ತಾಲೂಕಿನ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಧ್ವನಿಯಾಗಿ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಸಂಘಟಿತವಾಗಿ, ಸರ್ಕಾರಿ ಶಾಲೆ ಉಳಿಸಿ–ಶಿಕ್ಷಣ ರಕ್ಷಿಸಲು, ಸರ್ಕಾರಿ ಹಾಸ್ಟೆಲ್ಗಳನ್ನು ಬಲಪಡಿಸಲು, ಖಾಸಗಿ ಶಾಲಾ–ಕಾಲೇಜುಗಳಲ್ಲಿ ಹೆಚ್ಚುವರಿ ಹಣ ವಸೂಲಿ ತಡೆಗಟ್ಟಲು, 371(ಜೆ) ಸಮರ್ಪಕವಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಒತ್ತಾಯಿಸುವ ನಿರ್ಣಯ, ಸಂಕಲ್ಪವನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.

Total Views: 0
ಜಾಹೀರಾತು
Share This Article