ಕರ್ನಾಟಕ ರಾಜ್ಯ ದೇವಾಂಗ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆ

H.Mallikarjun
H.Mallikarjun - Kalyanasiri
1 Min Read
  1. ಕರ್ನಾಟಕ ರಾಜ್ಯ ದೇವಾಂಗ ಸಂಘಕ್ಕೆ ಪದಾಧಿಕಾರಿಗಳ ಅವಿರೋಧ ಆಯ್ಕೆv

Unanimous election of office-bearers for the Karnataka State Devanga Sangha 

ಕೊಪ್ಪಳ: ಕರ್ನಾಟಕ ರಾಜ್ಯ ದೇವಾಂಗ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಕುಷ್ಟಗಿಯ ಶ್ರೀ ಶಿವಶಂಕರ್ ಚೆನ್ನಿ ಹಾಗೂ ಯಲಬುರ್ಗಾದ ಡಾ. ಶಿವಶಂಕರ್ ಕರ್ಡಕಲ್ಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀ ದಾಮೋದರ್ ಕುದರಿಮೋತಿ ತಿಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದು, ದೇವಾಂಗ ಸಮಾಜದ ಮುಖಂಡರು ಹಾಗೂ ಹಿರಿಯರು ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ದೇವಾಂಗ ಸಮಾಜದ ಹಿರಿಯರಾದ ಚಂದ್ರು ಬೆಟಿಗೇರಿ, ವಾಸುದೇವ ಕೊಳಗದ, ರಾಮನಗೌಡ ಬಿಜ್ಜಳ, ನಾಗರಾಜ ಪರಗಿ, ಪ್ರಹ್ಲಾದ ಅಗಳಿ, ಶಂಕ್ರಪ್ಪ ಇಂದರಿಗಿ, ನಾರಾಯಣಪ್ಪ ಕೊಳ್ಳಿ, ಮಹೇಶ್ ಕಾಳಗಿ, ವೆಂಕಟೇಶ್ ಕೊಂಕಲ್, ವೀರೇಶ್ ಅರಳಿಕಟ್ಟಿ, ಅನಿಲ ಬಿಜ್ಜಳ, ನೀಲಕಂಠಪ್ಪ ನಾಗಶೆಟ್ಟಿ, ಶಿವಾನಂದ ತಿಮ್ಮಾಪೂರ, ಸುರೇಶ ಮೂರಂಕನ ಸೇರಿದಂತೆ ಹಲವು ಸಮಾಜದ ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ದೇವಾಂಗ ಸಮಾಜದ ಸಂಘಟನೆ, ಅಭಿವೃದ್ಧಿ ಹಾಗೂ ಸಮಾಜದ ಹಿತಾಸಕ್ತಿಗಾಗಿ ಶ್ರಮಿಸಲಿ ಎಂದು ಮುಖಂಡರು ಶುಭ ಹಾರೈಸಿದರು

ಜಾಹೀರಾತು
Total Views: 0
ಜಾಹೀರಾತು
Share This Article