ಶ್ರೀವಿಶ್ವಕರ್ಮ ಪೂಜಾ ಮ ಹೋತ್ಸವ ಅತ್ಯಂತ ಭಕ್ತಿ-ಭಾವದಿಂದ ಜರುಗಿತು

H.Mallikarjun
H.Mallikarjun - Kalyanasiri
2 Min Read

ವಿಶ್ವಕರ್ಮ ಸಮಾಜ ಸಂಘ (ರಿ) ಗಂಗಾವತಿ ವತಿಯಿಂದ ಸೆ.24 ರಂದುಭಗವಾನ್ ಶ್ರೀ ವಿಶ್ವಕರ್ಮ ಪೂಜಾ ಮಹೋTheತ್ಸವ ಸಂಪನ್ನ

ಶ್ರೀವಿಶ್ವಕರ್ಮ ಪೂಜಾ ಮ ಹೋತ್ಸವ ಅತ್ಯಂತ ಭಕ್ತಿ-ಭಾವದಿಂದ ಜರುಗಿತು

ಜಾಹೀರಾತು
The Sri Vishwakarma Puja Mahotsava was celebrated with great devotion and reverence

ಗಂಗಾವತಿ-ಸೆ.24: ವಿಶ್ವಕರ್ಮ ಸಮಾಜ ಸಂಘ (ರಿ) ಗಂಗಾವತಿ ವತಿಯಿಂದ ಭಗವಾನ್ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಸಮಾರಂಭವು ಸೆಪ್ಟೆಂಬರ್-24 ಗುರುವಾರದಂದು ಅತ್ಯಂತ ಭಕ್ತಿ-ಭಾವದಿಂದ ಜರುಗಿತು.
ಮೊದಲಿಗೆ ನಗರದ ಆನೆಗುಂದಿ ರಸ್ತೆಯಲ್ಲಿರುವ ಶ್ರೀ ವಿಶ್ವಕರ್ಮ ವೃತ್ತದಲ್ಲಿ ಕೆಪಿಸಿಸಿ ಕೊಪ್ಪಳ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಮಲ್ಲಿಕಾರ್ಜುನ ನಾಗಪ್ಪ ಹಾಗೂ ವಿಶ್ವಕರ್ಮ ಸಮಾಜ ಬಾಂಧವರ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಮಲ್ಲಿಕಾರ್ಜುನ ನಾಗಪ್ಪ ಅವರು, “ವಿಶ್ವಕರ್ಮ ಸಮಾಜವು ತನ್ನ ಕಾಯಕ, ಶ್ರದ್ಧೆ ಮತ್ತು ಕಲೆಯಿಂದ ದೇಶದ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದೆ. ಗಂಗಾವತಿಯಲ್ಲಿ ಸಮಾಜದ ಎಲ್ಲ ಬಾಂಧವರು, ಯುವಕರು ಮತ್ತು ಮಹಿಳೆಯರು ಒಂದಾಗಿ ಇಂದು ಪೂಜಾ ಮಹೋತ್ಸವವನ್ನು ಯಶಸ್ವಿಗೊಳಿಸಿರುವುದು ಶ್ಲಾಘನೀಯ. ಸಮಾಜ ಸಂಘಟಿತವಾದರೆ ಮಾತ್ರ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸಬಲರಾಗಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ತದನಂತರ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಮಾಜಿ ಶಾಸಕರಾದ ಶ್ರೀ ಪರಣ್ಣ ಮುನವಳ್ಳಿ ಅವರಿಂದ ಭಗವಾನ್ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, “ಭಗವಾನ್ ಶ್ರೀ ವಿಶ್ವಕರ್ಮರು ಸೃಷ್ಟಿಯ ಮೊದಲ ಶಿಲ್ಪಿ, ವಿಶ್ವದ ಸಮಸ್ತ ನಿರ್ಮಾಣ ಕಾರ್ಯಕ್ಕೆ ಮೂಲ ಪುರುಷ. ಅವರ ಕುಶಲ ಕಲೆ, ತಂತ್ರಜ್ಞಾನ ಮತ್ತು ಸೃಜನಶೀಲತೆ ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪವಾಗಿದೆ. ವಿಶ್ವಕರ್ಮರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಕೆ. ನಾಗೇಶಕುಮಾರ ಕಂಸಾಳೆ, ಗೌರವಾಧ್ಯಕ್ಷರಾದ ಮಂಜುನಾಥ್ ಸರಾಫ್, ತಾಲ್ಲೂಕು ಅಧ್ಯಕ್ಷರಾದ ಕಾಳೇಶ್ ಬಡಿಗೇರ, ಉಪಾಧ್ಯಕ್ಷರಾದ ಗುರುನಾಥ ಬಡಿಗೇರ, ಕಾರ್ಯದರ್ಶಿ ಚಿದಂಬರ, ಖಜಾಂಚಿ ದೇವಪ್ಪ ಬಡಿಗೇರ, ಸಿ.ವಿ. ಮಾನಪ್ಪಾಚಾರ, ಗುಂಡಪ್ಪಾಚಾರ, ಸೋಮಶೇಖರಪ್ಪ ಸುತಾರ, ಜಕಣಾಚಾರಿ, ಪಂಪಣ್ಣ, ವಿನಾಯಕ ಆಚಾರ್, ಮಂಜುನಾಥ್ ಪತ್ತಾರ್, ಕೃಷ್ಣಮೂರ್ತಿ ಪತ್ತಾರ್, ಹನುಮೇಶ್ ಬಡಿಗೇರ, ಬಸವರಾಜ್ ಬಡಿಗೇರ, ಸಿದ್ದೇಶ್ ಭಾಸ್ಕರಾಚಾರ್, ಗುರುರಾಜ್ ಬಡಿಗೇರ, ಬಸವರಾಜ್ ಓಂ ಕುಮಾರ್, ಶರಣಪ್ಪ, ದೇವೇಂದ್ರ ಮಲ್ಲೂರು, ಮೌನೇಶ್ ಹಂಚಿನಾಳ, ವೀರೇಶ್ ಮಾಚಳ್ಳಿ, ಪ್ರಶಾಂತ್ ಸುತಾರ್, ಗುರುರಾಜ್ ಸುತಾರ್, ಪ್ರಶಾಂತ್ ಶಿಲ್ಪಿ, ಶಶಿಧರ ವಿರುಪಾಕ್ಷಿ ಬಡಿಗೇರ, ಮೌನೇಶ್ ಮುಸಲಾಪುರ, ಪ್ರಭು ಸುತಾರ್, ದೇವೇಂದ್ರ ಶ್ರೀನಿವಾಸ್, ಮೌನೇಶ್, ಮಂಜುನಾಥ್ ಅಳವಂಡಿ, ಮೌನೇಶ್ ಬಡಿಗೇರ, ಕಿರಣ್ ಕುಮಾರ್ ಬಡಿಗೇರ, ಮನೋಹರ್ ಹಣವಾಳ, ಶ್ರೀಧರ ಹಣವಾಳ, ವಾಸು ಬಡಿಗೇರ, ಈರಣ್ಣಾಚಾರ, ವೀರೇಶ್ ಬಡಿಗೇರ, ವಿನಯ್ ರವಿಕುಮಾರ್ ಹಾಗೂ ಮಹಿಳಾ ಮುಖಂಡರಾದ ವಿಜಯಲಕ್ಷ್ಮಿ, ಉಮಾ ಕಾಳೇಶ್, ಉಮಾ ಮಹಾಲಿಂಗಮ್ಮ, ದ್ರಾಕ್ಷಾಯಿಣಿ, ಶೃತಿ, ಕಲಾವತಿ, ಗೌರಮ್ಮ, ಶ್ರೀದೇವಿ, ಪದ್ಮಾ ಸೇರಿದಂತೆ ಸಮಾಜದ ಯುವ ಮಿತ್ರರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Total Views: 0
ಜಾಹೀರಾತು
Share This Article