ವಕ್ಸ್ ಬೋರ್ಡ್ ಅಕ್ರಮ ಸರಿಪಡಿಸಲುಒಂದಾಗಿಸದಾ-ಎ-ಇತ್ತೆಹಾದ್ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಅಲಿ ಜನಾಬ್‌ ಮುಜಾಹಿದ್ ಅಲಿ ಬಾಬ ಕರೆ

H.Mallikarjun
H.Mallikarjun - Kalyanasiri
2 Min Read

Unite to Rectify Waqf Board Irregularities
Call by Ali Janab Mujahid Ali Baba, Founding President of Sada-e-Ittehad Karnataka

ವಕ್ಸ್ ಬೋರ್ಡ್ ಅಕ್ರಮ ಸರಿಪಡಿಸಲು ಒಂದಾಗಿ
ಸದಾ-ಎ-ಇತ್ತೆಹಾದ್ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ ಅಲಿ ಜನಾಬ್‌ ಮುಜಾಹಿದ್ ಅಲಿ ಬಾಬ ಕರೆ

ಜಾಹೀರಾತು

ಚಿತ್ರದುರ್ಗ :ವಕ್ಸ್‌ ಬೋರ್ಡ್ನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಅನ್ಯಾಯ ಗಳನ್ನು ಸರಿಪಡಿಸಬೇಕಾದರೆ ಮೊದಲು ಎಲ್ಲರೂ ಒಂದಾಗಬೇಕೆಂದು ಸದಾ-ಎ-ಇತ್ತೆಹಾದ್ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷರಾದ ಅಲಿ ಜನಾಬ್ ಮುಜಾಹಿದ್ ಅಲಿ ಬಾಬ ಕರೆ ನೀಡಿದರು.

ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಶಾಖೆ ಸ್ಥಾಪಿಸುವ ಹಾಗೂ ಜಿಲ್ಲಾ ವಕ್ಸ್ ಬೋರ್ಡ್ ವ್ಯಾಪಿಗೆ ಒಳಪಡುವ ಸಂಸ್ಥೆಗಳಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸ ಬೇಕಾಗಿದೆ. ಹದಿನಾರು ವರ್ಷಗಳ ಹಳೆ ಸಂಘಟನೆ ನಮ್ಮದು. ಎಲ್ಲರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಬೇಕೆನ್ನುವುದು ನಮ್ಮ ಉದ್ದೇಶ, ಒಳ ಪಂಗಡಗಳನ್ನು ಮರೆತು ಎಲ್ಲರೂ ಒಂದಾ ಗುವತನಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗುವುದಿಲ್ಲ. ಶಿಯಾ, ಸುನ್ನಿ ಅಂತ ಒಡಕು ಮೂಡಿಸಿ ರಾಜಕೀಯವಾಗಿ ನಮ್ಮನ್ನ ಆಟ ಆಡಿಸುತ್ತಿದ್ದಾರೆ. ಇದರ ವಿರುದ್ಧ ಮುಸಲ್ಮಾನರು ಎಚ್ಚೆತ್ತು ಕೊಳ್ಳಬೇಕೆಂದು ಮನವಿ ಮಾಡಿದರು.

2ಬಿ ಮೀಸಲಾತಿಯನ್ನು ತೆಗೆದು ಹಾಕಿದ್ದಲ್ಲದೆ ಹಿಜಾಬ್ ವಿವಾದವನ್ನು ಹುಟ್ಟು ಹಾಕಿದ್ದು ಬಿಜೆಪಿ, ಸಚಿವ ಜಮೀ‌ಅಹಮದ್ ಸಿದ್ದರಾಮಯ್ಯನವರ ಜೊತೆಯಲ್ಲಿ ಮುಸಲ್ಮಾನರನ್ನು ವಿಭಜಿಸಿ ಕತಮ್ ಮಾಡಲು ಹೊರಟಿದ್ದಾರೆ. ಯು.ಟಿ.ಖಾದರ್‌ಜೊತೆ ಸೇರಿ ಕೊಂಡಿರುವ ಜಿಲಾನಿ ಮುರಾಶಿಯನ್ನು ಮೊದಲು ತೆಗೆದು ಹಾಕ ಬೇಕು. ವಕ್ಸ್ ಮಂಡಳಿಗೆ ಕಮಿಟಿ ಮಾಡಿದಾಗ ಮಾತ್ರ ನಿಮಗೆಲ್ಲಾ ತಾಕತ್ತು ಬರುತ್ತದೆ. ಅಲ್ಲಿಯವರೆಗೂ ಮುಸಲ್ಮಾನರು ಅನ್ಯಾಯ ಅಕ್ರಮವನ್ನು ಖಂಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸೈಯದ್ ಇಸ್ಮಾಯಿಲ್ ಮಾತನಾಡಿ, 2ಬಿ ಮೀಸಲಾತಿಯನ್ನು ತೆಗೆದು ಹಾಕಿ ಬಿಜೆಪಿ ಸರ್ಕಾರ ಮುಸ್ಲಿಂರಿಗೆ ಘನ ಘೋರ ಅನ್ಯಾಯವೆಸಗಿದೆ. ಮತ್ತೆ 2ಬಿ ಗಾಗಿ ಹೋರಾಟ ನಡೆಸಬೇಕಿದೆ. ಇಲ್ಲವಾದಲ್ಲಿ ಮುಸಲ್ಮಾನರು ಅಸ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರ ಬಗ್ಗೆ ಗಮನ ಹರಿಸಿ ಎಂದು ಮುಜಾಹಿದ್ ಅಲಿಬಾಬರವರಲ್ಲಿ ಮನವಿ ಮಾಡಿದರು.

ಸೈಯದ್ ಅಫಾಖ್ ಅಹಮದ್ ಮಾತನಾಡಿ, ಒಂದು ವರ್ಷದಿಂದ ಜಿಲ್ಲಾ ವಕ್ ಬೋರ್ಡ್ ಛೇರ್ಮನ್ ಹುದ್ದೆ ಖಾಲಿಯಿದೆ. ವಕ್ಸ್ ಮಂಡಳೆಯಿಂದ ಬರುವ ಆದಾಯದಲ್ಲಿ ಶೇ.30 ರಷ್ಟು ಹಣವನ್ನು ಬಡವರು, ವಿಧವೆಯರು ಹಾಗೂ ಬಡ ಮಕ್ಕಳ ನೆರವಿಗೆ ಉಪಯೋಗಿಸಬೇಕು. ವಕ್ ಬೋರ್ಡ್‌ನಲ್ಲಿ ಸಾಕಷ್ಟು ಸಮಸ್ಯೆ ಗಳಿವೆ. ಎಲ್ಲವೂ ಬಗೆಹರಿಯಬೇಕಾಗಿರುವುದರಿಂದ ಸಚಿವ ಯು.ಟಿ.ಖಾದರ್‌ಜೊತೆ ಚರ್ಚಿಸುವಂತೆ ಮುಜಾಹಿದ್ ಅಲಿಬಾಬರವರಲ್ಲಿ ವಿನಂತಿಸಿದರು.

ಟಿ.ಶಫಿವುಲ್ಲಾ ಮಾತನಾಡಿ, ಭಾರತದ ಎಲ್ಲಾ ಕಡೆಮುಸ್ಲಿಂರಿದ್ದಾರೆ. ರಾಜಕೀಯವಾಗಿ ಚಿಂತನೆ ಮಾಡಿದಾಗ ಅಸ್ತಿತ್ವ ಉಳಿಯುತ್ತದೆ. ಮುಸ್ಲಿಂರ ಸ್ಥಿತಿಗತಿ ಬಗ್ಗೆ ಚರ್ಚೆಯಾಗುತ್ತಿಲ್ಲ. ವಕ್ಸ್ ಬೋರ್ಡ್‌ನಲ್ಲಿ ಸಾಲು ಸಾಲು ಸಮಸ್ಯೆಗಳಿದೆ. ಅವುಗಳನ್ನು ಮೊದಲು ಬಗೆಹರಿಸಿ ಎಂದು ಸಭೆಯ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ಎಚ್.ಪ್ಯಾರೆಜಾನ್, ಸಂಘಟನೆಯ ಅಧ್ಯಕ್ಷ ಅಲಿವುಲ್ ಹುಸೇನಿಸಾಬ್, ಎಸ್.ಆರ್.ಇ.ಹತಾವುಲ್ಲಾ, ಜಬಿ, ಮನ್ಸೂರ್, ಎ.ಜಾರ್ಕೀಹುಸೇನ್, ಸೈಯದ್ ಮೊಹಿದ್ದೀನ್, ಇನ್ನು ಅನೇಕ ಮುಸ್ಲಿಂ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

Total Views: 0
ಜಾಹೀರಾತು
Share This Article