ಶಾಸಕ ಗಾಲಿ ಜನಾರ್ಧನ್ ರೆಡ್ಡಿಗೆ ಮ್ಯಾಗಳಮನಿ ಎಚ್ಚರಿಕೆ. ಗಂಗಾವತಿ ಬಿಟ್ಟು ತೊಲಗಿ ಚಳುವಳಿ ಹಮ್ಮಿಕೊಳ್ಳಲಾಗುವದು.

H.Mallikarjun
H.Mallikarjun - Kalyanasiri
2 Min Read

Magalamani issues a warning to MLA Gali Janardhan Reddy; a "Leave Gangavathi" campaign will be launched

ಶಾಸಕ ಗಾಲಿ ಜನಾರ್ಧನ್ ರೆಡ್ಡಿಗೆ ಮ್ಯಾಗಳಮನಿ ಎಚ್ಚರಿಕೆ. ಗಂಗಾವತಿ ಬಿಟ್ಟು ತೊಲಗಿ ಚಳುವಳಿ ಹಮ್ಮಿಕೊಳ್ಳಲಾಗುವದು.

ಜಾಹೀರಾತು

ಗಂಗಾವತಿ :-11–ಅಭಿವೃದ್ಧಿಗಾಗಿ ಹಾಗೂ ಭ್ರಷ್ಟಾಚಾರದ ವಿರುದ್ದ ಮತ್ತು ರಾಜ್ಯದಲ್ಲಿ ಬರಗಾಲ ಬಿದ್ದಿದ್ದು ರೈತರಿಗೆ ನೆರವು ನೀಡುವದು ಸೇರಿದಂತೆ ವಿವಿಧ ಉದ್ದೇಶದಿಂದ ಬಳ್ಳಾರಿ ಚಲೋ ಪಾದಯಾತ್ರೆ ಮಾಡಿರುವ ಜನಾರ್ಧನ್ ರೆಡ್ಡಿಯ ನಡೆಯನ್ನು ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತೀವ್ರ ವಾಗಿ ಟೀಕಿಸಿದ್ದಾರೆ. ತಮ್ಮ ಕ್ಷೇದಲ್ಲಿಯೇ ಇಂತಹದ್ದೇ ವಿಷಯಗಳನ್ನು ನಿರ್ಲಕ್ಷಿಸಿ,ಬಳ್ಳಾರಿಯ ಬಗ್ಗೆ ಬಹಳ ಆಸಕ್ತಿ ಹೊಂದಿರುವ ಶಾಸಕರು ಗಂಗಾವತಿ ಕ್ಷೇತ್ರದ ಯಾವ ಯಾವ ರೈತರನ್ನು ಸಂಪರ್ಕಿಸಿದ್ದಾರೆ,ಬರ ಕುರಿತು ಸಮೀಕ್ಷೆ ನಡೆಸಿದ್ದಾರೆ ಹಾಗೂ ರೈತರೊಂದಿಗೆ ಬರ ಕುರಿತು ಎಲ್ಲಿ ಯಾವ ರೀತಿ ಸಮಾಲೋಚನೆ ಮಾಡಿದ್ದರೆಂದು ಸ್ಪಷ್ಟ ಪಡಿಸಬೇಕು. ಶಾಸಕರ ಕ್ಷೇತ್ರಾಅಭಿವೃದ್ದಿ ಯೋಜನೆಯ ಅಡಿಯಲ್ಲಿ ದೇವಾಲಯಗಳ ಜೀರ್ಣದ್ದಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ಲೋಕಾಯುಕ್ತರು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಬೇಕು. ಗಂಗಾವತಿಯಲ್ಲಿ ರಸ್ತೆಗಳು ಹದಗೆಟ್ಟಿವೆ ರಿಪೇರಿ ಮಾಡಿಸಬೇಕು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಪಾಡಬೇಕು. ಕ್ಷೇತ್ರಲ್ಲಿಯೇ ವಾಸ್ತವ್ಯ ಇದ್ದು ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು.ನಮ್ಮ ಸಂಘಟನೆ ಮೂರು ವರ್ಷಗಳ ಹಿಂದೆಯೇ ನಿಮಗೆ ಸಲ್ಲಿಸಿದ ಬೇಡಿಕೆಗಳಾದ ಅಲೆಮಾರಿ ಜನಾಂಗದವರಿಗೆ ನಿವೇಶನ ನೀಡುವದು , ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡ ಒದಗಿಸುವದು, ಪೂರ್ಣ ಪ್ರಮಾಣದಲ್ಲಿ ಸಿಟಿ ಮಾರ್ಕೆಟ್ ಪ್ರಾರಂಭ ಮಾಡುವದು. ಹಾಗೂ ಚುನಾವಣಾ ಪೂರ್ವದಲ್ಲಿ ನೀವೇ ನೀಡಿದ ಭರವಸೆಗಳಾದ ಅಂಜನಾದ್ರಿಗೆ ಐದು ಸಾವಿರ ಕೋಟಿ ರೂಪಾಯಿ ಅಭಿವೃದ್ಧಿಗೆ ಸ್ವಂತ ಹಣ ನೀಡುವದು, ಮನೆಯಿಲ್ಲದವರಿಗೆ ಡಬಲ್ ಬೆಡ್ ರೂಮ್ ನಿರ್ಮಿಸುವದು,ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನವಂಬರ್ ತಿಂಗಳೊಳಗೆ ಮಾಡಲು ಕ್ರಮ ಕೈಗೊಳ್ಳಬೇಕು. ಕ್ರಮಕೈಗೊಂಡ ಬಗ್ಗೆ ಮಾಧ್ಯಮಗಳ ಮೂಲಕ ಜನತೆಗೆ ತಿಳಿಸಬೇಕು. ಇಲ್ಲದೇ ಹೋದರೆ ಡಿಸೇಂಬರ್ ತಿಂಗಳ ಮೂರನೇ ವಾರದಲ್ಲಿ ಕ್ಷೇತ್ರದ ” ಶಾಸಕರು ಗಂಗಾವತಿ ಬಿಟ್ಟು ತೊಲಗಿ “ಎಂಬ ಹೋರಾಟವನ್ನು ಕ್ಷೇತ್ರದ ಜನರೊಂದಿಗೆ ನಮ್ನ ಸಂಘಟನೆಯು ಹೋರಾಟ ಹಮ್ಮಿಕೊಳ್ಳಲಾಗುವದೆಂದು ಮ್ಯಾಗಳಮನಿ ಪತ್ರಿಕಾ ಪ್ರಕಟಣೆ ಮೂಲಕ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

Total Views: 1
ಜಾಹೀರಾತು
Share This Article