ಗಂಗಾವತಿ ರಾಯರಮಠದಲ್ಲಿ ಆ.29ರಿಂದ 31ರವರೆಗೆ ಶ್ರೀ ರಾಘವೇಂದ್ರ ತೀರ್ಥರ 355ನೇ ಆರಾಧನಾ ಮಹೋತ್ಸವ

H.Mallikarjun
H.Mallikarjun - Kalyanasiri
1 Min Read
355th Aradhana Mahotsava of Sri Raghavendra Tirtha at Gangavathi Rayara Matha from August 29 to 31.

ಗಂಗಾವತಿ ರಾಯರಮಠದಲ್ಲಿ ಆ.29ರಿಂದ 31ರವರೆಗೆ ಶ್ರೀ ರಾಘವೇಂದ್ರ ತೀರ್ಥರ 355ನೇ ಆರಾಧನಾ ಮಹೋತ್ಸವ

ಜಾಹೀರಾತು


ಗಂಗಾವತಿ: ಕಲಿಯುಗದ ಕಾಮಧೇನು, ಕಲ್ಪವೃಕ್ಷ ಎಂದೇ ಭಕ್ತರಿಂದ ಪೂಜಿಸಲ್ಪಡುವ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು ನಗರದ ರಾಯರಮಠದಲ್ಲಿ ಆ.29, 30 ಹಾಗೂ 31ರಂದು ವೈಭವದಿಂದ ಆಚರಿಸಲು ಸಿದ್ಧತೆಗಳು ಪೂರ್ಣಗೊಂಡಿವೆ.
ಪರಮಪೂಜ್ಯ ಶ್ರೀ 1008 ಶ್ರೀ ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ, ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮೂಲ ಮೃತ್ತಿಕಾ ಬೃಂದಾವನ ಸನ್ನಿಧಾನದಲ್ಲಿ ಮೂರು ದಿನಗಳ ಕಾಲ ಆರಾಧನಾ ಮಹೋತ್ಸವ ನಡೆಯಲಿದೆ.
ಆ.29ರಂದು ಶನಿವಾರ ಪೂರ್ವಾರಾಧನೆ, ಆ.30ರಂದು ಭಾನುವಾರ ಮಧ್ಯಾರಾಧನೆ ಹಾಗೂ ಆ.31ರಂದು ಸೋಮವಾರ ಉತ್ತರಾರಾಧನೆ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಹಾಗೂ ಪೂಜಾ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಗುವುದು.
ಈ ಕುರಿತು ಗುರುವಾರ ಶ್ರೀಮಠದಲ್ಲಿ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಶ್ರೀಮಠದ ವ್ಯವಸ್ಥಾಪಕ ಗುರುರಾಜ ಆಚಾರ್ ಸಾಮವೇದಿ, ಸುಧೀಂದ್ರ ಕುಲಕರ್ಣಿ, ಅಪ್ಪಣ್ಣ ದೇಶಪಾಂಡೆ, ವೆಂಕಟೇಶ್ ಹಾಗೂ ಶ್ರೀನಿವಾಸ್ ಶೆಟ್ಟಿ ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಆರಾಧನಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜೆ, ಧಾರ್ಮಿಕ ವಿಧಿ-ವಿಧಾನಗಳು, ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಮಠದ ಆಡಳಿತ ಮಂಡಳಿ ಹಾಗೂ ಭಕ್ತರು ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

Total Views: 0
ಜಾಹೀರಾತು
Share This Article