ಕಚೇರಿ ಅಧೀಕ್ಷಕ ಆತ್ಮಹತ್ಯೆ ಶಂಕೆ: ಡೆತ್‌ನೋಟ್ ಆಧರಿಸಿ ತನಿಖೆ

H.Mallikarjun
H.Mallikarjun - Kalyanasiri
1 Min Read

  

Office Superintendent Suicide Suspected: Investigation Based on Death Note

ಕಚೇರಿ ಅಧೀಕ್ಷಕ ಆತ್ಮಹತ್ಯೆ ಶಂಕೆ: ಡೆತ್‌ನೋಟ್ ಆಧರಿಸಿ ತನಿಖೆ

ಜಾಹೀರಾತು


ಗಂಗಾವತಿ, ಆ.24: ಗಂಗಾವತಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕಚೇರಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ ಹೆಚ್.ಜಿ. ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ವಡ್ಡರಹಟ್ಟಿ–ಆರಾಳ ಮಧ್ಯೆ ಹಾದು ಹೋಗಿರುವ ಎಡದಂಡೆ ಕಾಲುವೆಗೆ ಹಾರಿ ಅವರು ಜೀವ ಕಳೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹಾಗೂ ಸಿಬ್ಬಂದಿ ಕಾಲುವೆಯಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.


ವಿಕಲಚೇತನರಾಗಿದ್ದ ಮಂಜುನಾಥ ಅವರು ಸೋಮವಾರ ಬೆಳಗ್ಗೆ ತಮ್ಮ ತ್ರಿಚಕ್ರ ಸ್ಕೂಟಿ ವಾಹನದಲ್ಲಿ ತೆರಳಿ, ಕಾಲುವೆ ದಂಡೆಯ ಬಳಿ ವಾಹನವನ್ನು ನಿಲ್ಲಿಸಿ ಬಳಿಕ ಕಾಲುವೆಗೆ ಹಾರಿರಬಹುದು ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಮಂಜುನಾಥ ಅವರು ತಮ್ಮ ಮನೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಹೋಗಿದ್ದಾರೆ ಎನ್ನಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿನ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ತಮಗೆ ಕಿರುಕುಳವಾಗುತ್ತಿತ್ತು ಎಂಬ ಆರೋಪವನ್ನು ಅದರಲ್ಲಿ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಆದರೆ ಡೆತ್‌ನೋಟ್‌ನಲ್ಲಿರುವ ವಿಷಯ ಹಾಗೂ ಆರೋಪಗಳ ಸತ್ಯಾಸತ್ಯತೆಯನ್ನು ಪೊಲೀಸ್ ತನಿಖೆಯ ಬಳಿಕವೇ ಖಚಿತಪಡಿಸಬೇಕಾಗಿದೆ.
ಘಟನೆ ಕುರಿತು ಮಾಹಿತಿ ಪಡೆದಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ, ಡೆತ್‌ನೋಟ್‌ನ್ನು ಪರಿಶೀಲಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮೃತದೇಹ ಪತ್ತೆ ಹಾಗೂ ಡೆತ್‌ನೋಟ್ ಪರಿಶೀಲನೆಯ ನಂತರ ಪ್ರಕರಣದ ನಿಖರ ಕಾರಣ ಮತ್ತು ವಾಸ್ತವಾಂಶಗಳು ಬೆಳಕಿಗೆ ಬರಬೇಕಿದೆ.

  

Total Views: 13
ಜಾಹೀರಾತು
Share This Article