ಅದ್ದೂರಿಯಾಗಿ ಜರುಗಿದ ಅಗ್ರಿ ಎಂಪ್ಲಾಯಿಸ್ ಅಸೋಸಿಯೇಷನ್ ಉದ್ಘಾಟನೆ

H.Mallikarjun
H.Mallikarjun - Kalyanasiri
2 Min Read

Grand Inauguration of the Agri Employees Association












ಅದ್ದೂರಿಯಾಗಿ ಜರುಗಿದ ಅಗ್ರಿ ಎಂಪ್ಲಾಯಿಸ್ ಅಸೋಸಿಯೇಷನ್ ಉದ್ಘಾಟನೆ.ರೈತರ ಹಿತರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆ: ಗೊಬ್ಬರ ಮತ್ತು ಬೀಜ ಉದ್ಯೋಗಿಗಳ ಸಂಘದ ಕರೆ

ಜಾಹೀರಾತು

​ಗಂಗಾವತಿ: ಸ್ಥಳೀಯ ಕೃಷಿ ವಲಯದ ಪ್ರಮುಖ ಸಂಘಟನೆಯಾದ ಗಂಗಾವತಿ ಅಗ್ರಿ ಎಂಪ್ಲಾಯಿಸ್ ಅಸೋಸಿಯೇಷನ್ ವತಿಯಿಂದ ನಗರದ ಹೊಸ ಎಪಿಎಂಸಿ ಪ್ರಾಂಗಣದಲ್ಲಿ ಸಂಘಟನೆ ಉದ್ಘಾಟನಾ ಸಮಾವೇಶ ಹಾಗೂ ವರ್ತಕರ-ಉದ್ಯೋಗಿ ಮಿಲನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.

​ತಾಲೂಕು ಎ.ಡಿ.ಎ. ಅಧಿಕಾರಿ ಅಭಿಲಾಷ ಸಿ.ಆರ್. ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, “ರೈತರಿಗೆ ಗುಣಮಟ್ಟದ ರಸಗೊಬ್ಬರ ಮತ್ತು ಬಿತ್ತನೆ ಬೀಜಗಳನ್ನು ಸಕಾಲದಲ್ಲಿ ತಲುಪಿಸುವಲ್ಲಿ ಅಗ್ರಿ ನೌಕರರು ಮತ್ತು ಉದ್ಯೋಗಿಗಳ ಪಾತ್ರ ಹಿರಿದಾದದ್ದು. ಕೃಷಿ ಕ್ಷೇತ್ರದ ಬೆನ್ನೆಲುಬಾಗಿರುವ ರೈತರ ಹಾಗೂ ವರ್ತಕರ (ಉದ್ಯೋಗಿಗಳ) ನಡುವೆ ಉತ್ತಮ ಬಾಂಧವ್ಯವಿರಬೇಕು” ಎಂದು ಅಭಿಪ್ರಾಯಪಟ್ಟರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವ ಅಧ್ಯಕ್ಷರು ನಾಗರಾಜ ಚಕೋಟಿ ಕೇಸರಹಟ್ಟಿ ಹಾಗೂ ತಾಲೂಕು ಅಧ್ಯಕ್ಷ ಪ್ರಶಾಂತ ತಳಕಲ್ ವಹಿಸಿದ್ದರು.

 ವೇದಿಕೆಯಲ್ಲಿ ಅಜ್ಮೀಲ್ ಅಲಿ: ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ.ರಾಘವೇಂದ್ರ ಯಲಿಗಾರ. ಕೆ. ವಿ. ಕೆ ಹಾಗೂ ವರ್ತಕರ ಸಂಘದ ಪದಾಧಿಕಾರಿಗಳಾದ ಸುರೇಶ ಸುಂಕನೂರು.ಮೋಹನ.ಕೆ.ಟಿ. ಚೌಹಾಣ್.ನರಪ್ಪ ಧನಂಜಯ.ಶ್ರೀಕಾಂತ ಮಾಕಿನೇನಿ, ಗುರುಪಾದಪ್ಪ, ಸಂಗಪ್ಪ ಗೌಡ, ಪ್ರಕಾಶ ರಾಥೋಡ್ ಎ ಓ. ದೇವರಾಜ ಪಾಟೀಲ್, ವೀರಭದ್ರಗೌಡ, ಲಿಂಗರಾಜ, ಲಕ್ಷ್ಮಣ ಅಡಪೂರ, ಶ್ರೀನಿವಾಸ ಮರಿವಾಡ, ಪ್ರಭಾಕರ.ಸಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಸಗೊಬ್ಬರ ಮತ್ತು ಬೀಜ ಮಾರಾಟ ಮಳಿಗೆಗಳ ನೌಕರರು ಎದುರಿಸುತ್ತಿರುವ ಸವಾಲುಗಳು ಹಾಗೂ ಕೆಲಸದ ಸುರಕ್ಷತೆಯ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು.

ಕೃಷಿ ವಲಯದಲ್ಲಿ ಮತ್ತು ಸಂಘಟನಾ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಉದ್ಯೋಗಿಗಳನ್ನು ಹಾಗೂ ಸಂಘದ ಮುಖಂಡರನ್ನು ಈ ವೇಳೆ ಸತ್ಕರಿಸಲಾಯಿತು.

ರೈತರಿಗೆ ಕೃಷಿ ಇಲಾಖೆಯ ನಿಯಮಗಳ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡುವ ಕುರಿತು ನೌಕರರಿಗೆ ವಿಶೇಷ ಜಾಗೃತಿ ಮೂಡಿಸಲಾಯಿತು.ಕಾರ್ಯಕ್ರಮದಲ್ಲಿ​ವಿವಿಧ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಮಹಿಳಾ ಪದಾಧಿಕಾರಿಗಳು, ವಿವಿಧ ಬೀಜ ಹಾಗೂ ರಸಗೊಬ್ಬರ ಔಷದ ರಸ ಗೊಬ್ಬರ ಕಂಪನಿಗಳ ಪ್ರತಿನಿಧಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸಂಘದ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಕಾರ್ಯದರ್ಶಿಯವರು ವಂದನಾರ್ಪಣೆಗೈದರು.

Total Views: 0
ಜಾಹೀರಾತು
Share This Article