Every social service undertaken by the Manasa organization serves as a model for society: Salur Sri praises the initiative

ಮಾನಸ ಸಂಸ್ಥೆಯು ಮಾಡುತ್ತಿರುವ ಪ್ರತಿಯೊಂದು ಸಮಾಜ ಸೇವೆಯು ಸಮಾಜಕ್ಕೆ ಮಾದರಿ : ಸಾಲೂರು ಶ್ರೀಗಳ ಶ್ಲಾಘನೆ.

ವರದಿ: ಬಂಗಾರಪ್ಪ .ಸಿ.
ಹನೂರು :ಮೈಸೂರು ಭಾಗದಲ್ಲಿ ಹೆಸರುವಾಸಿಯಾದ ಶಿಕ್ಷಣ ಸಂಸ್ಥೆಗಳು ಇಂದು ಬೃಹದಾಕಾರದಲ್ಲಿ ಬೆಳೆದು ಬಂದಿರುವುದು ನಮ್ಮೇಲ್ಲರಿಗೂ ಸಂತೋಷದ ವಿಷಯವಾಗಿದೆ ಎಂದು ಮಲೆ ಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹನೂರು ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮಾತನಾಡಿದ ಅವರು ಮಾನಸ ಪೌಂಡೆಷನ್ ರಿ . ಮಾನಸ ಶಿಕ್ಷಣ ಸಂಸ್ಥೆ ಕೊಳ್ಳೇಗಾಲ ಮತ್ತು ಮೈಂಡ್ಸ್ ಕೋಡಿಂಗ್ ಅಕಾಡೆಮಿ ಮತ್ತು key2 iR ಬೆಂಗಳೂರು ಇವರ ಸಹಯೋಗದಲ್ಲಿ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಕಾರ್ಯವು ಬಹಳ ಶ್ಲಾಘನೀಯವಾದುದ್ದು.
ನಮ್ಮ ಭಾಗದ ಮಕ್ಕಳು ಹೆಚ್ಚು ಪ್ರತಿಭವಂತರು . ಎಲ್ಲಾ ತಂದೆ ತಾಯಿಗಳಿಗೆ ಓದಿದ ನಂತರ ಮದುವೆ ಮಾಡುವ ತಯಾರಿಯಲ್ಲಿರುತ್ತಾರೆ ,ಆದರೆ ಮಕ್ಕಳಲಿ ಕೆಲಸ ಮಾಡುವ ಇಂಗಿತವಿರುತ್ತದೆ ,ಅದಕ್ಕೆ ಮಾನಸ ಸಂಸ್ಥೆಯು ಸಂಪರ್ಕ ಸೇತುವೆಯಿರುತ್ತದೆ .ಹಲವಾರು ಸಮಾಜಿಕ ಕಾರ್ಯಗಳನ್ನು ಮಾನಸ ಶಿಕ್ಷಣ ಸಂಸ್ಥೆಯು ಮಾಡಿದೆ ,ಇಂದು ನಡೆಯುವ ಉದ್ಯೋಗ ಮೇಳದಲ್ಲಿ ಅರವತ್ತುಕ್ಕೂ ಹೆಚ್ಚು ಸಂಸ್ಥೆಗಳು ಮೇಳದಲ್ಲಿ ಭಾಗವಹಿಸಿರುವು ಶ್ಲಾಘನೀಯ ವಾದುದ್ದು, ಇಂತಕಾರ್ಯವು ಇವರ ಸಂಸ್ಥೆಯ ಮಾಡಿರುವ ಉತ್ತಮ ಕೆಲಸ , ಉದ್ಯೋಗವೆಂದರೆ ಒಬ್ಬ ವ್ಯಕ್ತಿಗೆ ಇರುವ ಗೌರವ , ಆ ಕುಟುಂಬದ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿ ಘನತೆ ಹೆಚ್ಚುತ್ತಿದೆ , ದೇಶದ ಆರ್ಥಿಕ ಪರಿಸ್ಥಿತಿ ಉನ್ನತ ಮಟ್ಟಕ್ಕೆರಲು ಪ್ರಯತ್ನಿಸಲಾಗುತ್ತಿದೆ . ದೇಶಕ್ಕೆ ಯುವಜನರ ಪಾತ್ರ ಬಹಳ ಮುಖ್ಯವಾದುದು.ಶಿಕ್ಷಣ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಪ್ರತಿಭೆಯು ರಾಷ್ಟ್ರದ ಮಟ್ಟದಲಿ ಬೆಳೆಯಬಹುದು.
ಸಾಮಾಜಿಕವಾಗಿ. ಆರ್ಥಿಕವಾಗಿ. ಸಾಮಾಜಿಕವಾಗಿ . ಬೆಳೆಯಲು ಇಂತಹ ಕಾರ್ಯ ವಿಧಾನವು ಉಪಯೋಗಿಸುವ ನಿಟ್ಟಿನಲ್ಲಿ ನೀವು ಪಾಲ್ಗೊಳ್ಳುವ ಅವಕಾಶಗಳನ್ನು ನೀಡುತ್ತದೆ ಎಂದರು.
ಇಡೀ ಕಾರ್ಯಕ್ರಮದ ಪ್ರಮುಖ ರೂವಾರಿಯಾದ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ರಾಜಕೀಯ ಮುಖಂಡರಾದ ಡಾಕ್ಟರ್ ಶ್ರೀ
ದತ್ತೇಶ್ ಕುಮಾರ್ ಮಾತನಾಡಿ ನಮ್ಮ ಭಾಗದ ಮಕ್ಕಳಲ್ಲಿ ಹೆಚ್ಚು ಜ್ಞಾನಾರ್ಜನೆಯಿಂದ ಕೂಡಿದ್ದು, ಹೆಚ್ಚು ಪ್ರತಿಭೆಯಿಂದ ಕೂಡಿದ್ದಾರೆ , ಆದರೆ ಅವರ ಹಿಂಜರಿಕೆಯಿಂದ ಬಹಳ ಉದ್ಯೋಗದಲ್ಲಿ ಬಹಳ ತೊಂದರೆಯಾಗುತ್ತದೆ , ಉದಾಹರಣೆಗೆ ಸಚಿನ್ ಅವರಿಗೆ ಇರುವ ಪ್ರತಿಭೆಯನ್ನು ಗುರುತಿಸಿ ಭಾರತ ಸರ್ಕಾರವು ಭಾರತ ರತ್ನ ಪ್ರಶಸ್ತಿ ಲಿಬಿಸಿದೆ ,ಕಾರಣ ಅವರ ಪ್ರತಿಭೆ ಅದೆ ರೀತಿಯಲ್ಲಿ ಕಳೆದ ಸಾಲಿನಲ್ಲಿ 720 ಜನ ಕೆಲಸಕ್ಕೆ ಆಯ್ಕೆಯಾಗಿದ್ದು ಹಲವಾರು ಜನರು ಕೆಲಸಕ್ಕೆ ಹಾಜರಾಗಿಲ್ಲ . ಅನುಭವಕಕ್ಕಾಗಿ ಮೊದಲು ಕೆಲಸಕ್ಕೆ ಸೇರಿ ಅದರ ಸದುಪಯೋಗ ಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು . ಶ್ರೀ ಗಳ ಕಾರ್ಯವು ನಮ್ಮ ಭಾಗದಲ್ಲಿ ಉನ್ನತ ಮಟ್ಟದಲ್ಲಿದೆ , ಪವಿತ್ರವಾದ ಸ್ಥಳದಲ್ಲಿ ಅವರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾದುದ್ದು ಎಂದರು. ಪಟ್ಟಣದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಮಾನಸ ಫೌಂಡೇಶನ್ ವತಿಯಿಂದ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಒಟ್ಟು 940 ಮಂದಿ ನೋಂದಣಿಯಾಗಿದ್ದು, ಆನ್‌ಲೈನ್‌ನಲ್ಲಿ 254 (6 ತಿಂಗಳು ವ್ಯಾಲಿಡ್) ಮತ್ತು ಇಂದು ಆಫ್‌ಲೈನ್‌ನಲ್ಲಿ 686 ಮಂದಿ ಭಾಗವಹಿಸಿದ್ದು, ಇದರಲ್ಲಿ 231 ಮಂದಿಗೆ ಆಫರ್ ಲೆಟರ್, 136 ಮಂದಿ ಶಾರ್ಟ್‌ಲಿಸ್ಟ್ ಮತ್ತು 33 ಮಂದಿಗೆ ಡಿಜಿಟಲ್ ಆಫರ್ ಲೆಟರ್ ವಿತರಿಸಲಾಗಿದೆ.
ಇದೇ ಸಮಯದಲ್ಲಿ ಸಂಸ್ಥೆಗಳ ಪ್ರಮುಖರಾದ ನಾಗರಾಜು . ಶಕ್ತಿ ಮತಿ ತ್ರಿವೇದಿ, ಮಾನಸ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಕ್ರಿಷ್ಟೆಗೌಡರ ಸೇರಿದಂತೆ ಇನ್ನಿತರರು ಹಾಜರಿದ್ದರು.

